Belagavi News In Kannada | News Belgaum

ಲಿಂಗತ್ವ ಸಮಾನತೆ, ಆರೋಗ್ಯ-ನೈರ್ಮಲ್ಯ ಕುರಿತು ಜಾಗೃತಿ

ಬೆಳಗಾವಿ : ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಜಿಲ್ಲಾ ಪಂಚಾಯತ್ ಬೆಳಗಾವಿ ಮತ್ತು ತಾಲೂಕು ಪಂಚಾಯತ್ ಬೈಲಹೊಂಗಲ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗ ಬೆಳಗಾವಿಯ ಸಮುದಾಯ ಅಭಿವೃದ್ಧಿಯ ಪ್ರಶಿಕ್ಷಣಾರ್ಥಿಗಳ ಸಹಯೋಗದಲ್ಲಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಗಳ ಸ್ವ ಸಹಾಯ ಸಂಘಗಳಿಂದ ಆಯ್ಕೆಯಾದ ಸದ್ಯಸರಿಗೆ ಲಿಂಗತ್ವ ಸಮನ್ವಯತೆ ಸಾಂಸ್ಥಿಕ ಕಾರ್ಯ ವಿಧಾನಗಳು ಹಾಗೂ ಆಹಾರ, ಪೌಷ್ಟಿಕತೆ, ಅರೋಗ್ಯ ಮತ್ತು ನೈರ್ಮಲ್ಯ ಕುರಿತು ತರಬೇತಿ ಕಾರ್ಯಗಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಮರಿಗೌಡ್ರ ಉದ್ಘಾಟನೆ ಮಾಡಿದರು. ಬಾಳಗೌಡ್ರ ಜಿಲ್ಲಾ ವ್ಯವಸ್ಥಾಪಕ ಮಾತನಾಡಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಒಳ್ಳೆಯ ಅವಕಾಶಗಳನ್ನು ಉಪಯೋಗ ಪಡೆದುಕೊಳ್ಳಬೇಕು ಹಾಗೂ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅದಕ್ಕ ನೀವು ಮನಸು ಮಾಡಿದರೆ ದೇಶದ ಅಭಿರುದ್ದಿಯಾಗುತ್ತದೆ ಎಂದು ಹೇಳಿದರು.
ಸಮಾಜದಲ್ಲಿ ಬಂದಿರುವ ನಾವು ಪೌಷ್ಟಿಕ ಆಹಾರ ಸೇವನೆಯೊಂದಿಗೆ ಸದೃಢರಾಗಿ ಇರಬೇಕು. ಮಾನವ ಸಮಾಜ ಜೀವ ಅದಕ್ಕೆ ಎಲ್ಲರೂ ಲಿಂಗ ಅಸಮಾನತೆ ಮಾಡದೆ ಸಮಾನರಾಗಿ ಬದ್ಕಬೇಕು ಆಗ ಮಾತ್ರ ನಾವು ಅಭಿರುದ್ದಿ ವಾತಾವರಣದಂತ ಸಾಗುತ್ತೇವೆ. ಜೀವನದಲ್ಲಿ ಆರೋಗ್ಯ ಮತ್ತು ಸ್ವಚ್ಛತೆ ತುಂಬಾ ಮುಖ್ಯ. ನಾವು ಬಲಿಷ್ಠ ಮತ್ತು ಸಾಮರ್ಥ್ಯ ಉಳ್ಳವರಾಗಿರಬೇಕು ಎಂದು ಒಂದು ಕಥೆಯ ಮೂಲಕ ಹೇಳಿದರು. ಆರೋಗ್ಯಯುತರಾಗಿ ಇರಲು ಬೇಕಾಗುವ ವಿಟಮಿನಸಗಳ ಬಗ್ಗೆ ಮಾಹಿತಿ ಬೇಕು ಎಂದು ಹೇಳಿದರು. ದೈಹಿಕವಾಗಿ ಅನೇಕ ತೊಂದ್ರೆಗಳು ಕಡಿಮೆ ಆಗಬೇಕು ಅಂದ್ರೆ ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಎಂದು ವಿವರವಾದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮರಿಗೌಡ ಆರ್ ಎಂ. ಬಾಲಗೌಡ್ರ, ಸಲೋನಾ ಓರಿಯಾ, ಪ್ರಕಾಶ ಗುಂಡಗವಿ, ಸಚಿನ ಗುರುವಣ್ಣವರ ಸಂತೋಷ ಹುಲಮನಿ, ಎಂಬಿಕೆ, ಎಲ್.ಸಿ.ಆರ್.ಪಿ ಪಶು ಸಖಿ, ಕೃಷಿ ಸಖಿ, ಕೃಷಿ ಉದ್ಯೋಗ ಸಖಿಗಳು ಉಪಸ್ಥಿತರಿದ್ದರು.//////