Belagavi News In Kannada | News Belgaum

ಮೊಹರಂ ಹಬ್ಬದ ನಿಮಿತ್ಯ ಸಿಪಿಐ ಮಹಮ್ಮದ ರಫಿಕ ತಹಸಿಲ್ದಾರ ಇವರ ನೇತೃತ್ವದಲ್ಲಿ ಸಭೆ

ಹುಕ್ಕೇರಿ: ಪೋಲಿಸ್ ಠಾಣೆಯಲ್ಲಿ ಮೊಹರಂ ಹಬ್ಬದ ನಿಮಿತ್ಯ ಸಿಪಿಐ ಮಹಮ್ಮದ ರಫಿಕ ತಹಸಿಲ್ದಾರ ಇವರ
ನೇತೃತ್ವದಲ್ಲಿ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮದ ಮುಸ್ಲಿಂ ಮುಖಂಡರು ಹಾಗೂ ಹಿಂದೂ ಸಮಾಜದ ಮುಖಂಡರನ್ನು ಕರೆದು ಶಾಂತಿ ಸಭೆ ನಡೆಸಲಾಯಿತು,

ಇದೆ ಸಂದರ್ಭದಲ್ಲಿ ಸಿಪಿಐ ತಹಸೀಲ್ದಾರ ಮಾತನಾಡಿ, ಮೊಹರಂ ಹಬ್ಬವು ಹಿಂದು ಮತ್ತು ಮುಸ್ಲಿಂರ ಭಾವೈಕ್ಯತೆಯ ಸಂದೇಶ ಸಾರುವ ಹಬ್ಬವಾಗಿದೆ,

ಈ ಹಬ್ಬವು ಎಲ್ಲಾ ಧರ್ಮದವರು ಕೂಡಿಕೂಂಡು ಮಾಡುವ ಹಬ್ಬದವಾಗಿದೆ, ಮೊಹರಂ ಹಬ್ಬವನ್ನು ಎಲ್ಲಾ ಸಮಾಜ ಬಾಂಧವರು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸ್ನೇಹ ಸೌಹಾರ್ದತೆಯಿಂದ ಆಚರಿಸಿ ಎಂದು ಹೇಳಿದರು.

ಹುಕ್ಕೇರಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ಅಹೀತರಕರ ಘಟನೆ ನಡೆಯದಂತೆ ಎಚ್ಚರಿಕೆಯಿಂದ ಹಬ್ಬವನ್ನು ಆಚರಿಸಬೇಕೆಂದು ಸಾರ್ವಜನಿಕರಲ್ಲಿ ಕೇಳಿಕೊಂಡರು,

ಈ ಶಾಂತಿ ಸಭೆಯಲ್ಲಿ ನಗರದ ಹಿರಿಯರು ಹಾಗೂ ಸುತ್ತಮುತ್ತಲಿನ ಗ್ರಾಮದ ಹಿರಿಯರು ಮುಖಂಡರು ಉಪಸ್ಥಿತರಿದ್ದರು,