Belagavi News In Kannada | News Belgaum

ಸಾರ್ವಜನಿಕರಿಗೆ ವಿಶೇಷ ಸೂಚನೆ ..HIGH ALERT

ಸಾರ್ವಜನಿಕರಿಗೆ ವಿಶೇಷ ಸೂಚನೆ ..HIGH ALERT🐆🐆

ಬೆಳಗಾವಿ ಶಹರದ ಜಾಧವ್ ನಗರದಲ್ಲಿ ಈ ದಿನ ದಿನಾಂಕ 5/8/2022 ..ರಂದು ಮಧ್ಯಾಹ್ನ ಸುಮಾರು ಹನ್ನೆರಡು ಗಂಟೆಯ ಮೇಲ್ಪಟ್ಟು .ಚಿರತೆ ವನ್ಯ ಪ್ರಾಣಿಯು ಜಾಧವ ನಗರದ ಪ್ಲಾಟ್ ಸಂಖ್ಯೆ 1369 ರ ಸುತ್ತ ಮುತ್ತಲಿನ ಪ್ರದೇಶದಲ್ಲಿ .ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಎರಗಿ ಗಾಯಗೊಳಿಸಿರುತ್ತದೆ ..ಸದರಿ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ ಬೆಳಗಾವಿಗೆ ದಾಖಲಿಸಲಾಗಿದೆ .. ಸದರಿ ಘಟನಾ ಸ್ಥಳದಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ,ಅಗ್ನಿಶಾಮಕ ದಳ ಎಸ್ ಡಿಆರ್ ಎಫ್ ತಂಡ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯಾಚರಣೆಯು ಮುಂದುವರೆದಿರುತ್ತದೆ ..ಹೀಗಾಗಿ ಸಾರ್ವಜನಿಕರಲ್ಲಿ ವಿನಂತಿಸುವುದೇನೆಂದರೆ .ಜಾಧವ ನಗರದ ನಿವಾಸಿಗಳು ಹಾಗೂ ಜಾಧವ್ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು ..ಯಾವುದೇ ವನ್ಯ ಪ್ರಾಣಿಯ (ಚಿರತೆ) ಚಲನ ವಲನಗಳು ಕಂಡುಬಂದಲ್ಲಿ .ಈ ಕೆಳಕಂಡ ನಂಬರ್ ಗಳಿಗೆ ಸಂಪರ್ಕಿಸಿ ಕೂಡಲೇ ಮಾಹಿತಿಯನ್ನು ನೀಡಲು ಕೋರಲಾಗಿದೆ .ಅದೇ ರೀತಿ ಸಾರ್ವಜನಿಕರು ಈ ರೀತಿಯ ವನ್ಯಪ್ರಾಣಿಯ ಚಲನವಲನಗಳನ್ನು ಕಣ್ಣಾರೆ ಕಂಡಾಗ ಯಾವುದೇ ಆತಂಕಕ್ಕೊಳಗಾಗದೆ .. ಭಯಭೀತಗೊಳ್ಳದೆ ಸೂಕ್ತ ರಕ್ಷಣಾತ್ಮಕ ದೂರವನ್ನು ಕಾಪಾಡಿಕೊಳ್ಳುವುದು ..ಹಾಗೂ ಅಂತಹ ಪ್ರದೇಶದಲ್ಲಿ ಭಯಭೀತ ವಾತಾವರಣವನ್ನು ಸೃಷ್ಟಿಸದೆ . ಎಚ್ಚರಿಕೆಯಿಂದ ಇರಲು ಬೆಳಗಾವಿ ನಗರ ಸಾರ್ವಜನಿಕರಲ್ಲಿ ಮಾಹಿತಿಯನ್ನು ಪ್ರಕಟಿಸಿದೆ ..ಅರಣ್ಯ ಇಲಾಖೆ ಬೆಳಗಾವಿ

ಅರಣ್ಯ ಇಲಾಖೆ ಬೆಳಗಾವಿ .ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಂಪರ್ಕಿಸಬೇಕಾದ ವಿವರ .

1} Rakesh Arjunwad RFO BELAGAVI 9739295671

2} VINAY GOUDAR Drfo Belavai Town 7022081277

3} Mallikarajun j .9743788585

4} sidharth chalawadi 7022826394