ಬನ್ನಿ ಬಂಧುಗಳೇ ಯುವಕರೇ ವೀರಕೇಸರಿ ಅಮಟೂರ ಬಾಳಪ್ಪನವರ ಇತಿಹಾಸ ತಿಳಿಯೋಣ .. ಇದೇ ರವಿವಾರ ಬೆಳಿಗ್ಗೆ 10:30ಕೆ : ನಾಗರಾಜ್

ಕೊಟ್ಟ ಮಾತಿಗೆ ಇಟ್ಟ ಗುರಿಗೆ
ಮುಟ್ಟುವರಿಗೂ ಹಿಂದೇ ಸರಿಯುವ ಮಾತೇ ಇಲ್ಲ .
ಪ್ರಥಮವಾಗಿ ನಾವು ನಮ್ಮ ಜನಕೆ ನಮ್ಮ ಇತಿಹಾಸ ತಿಳಿಸಬೇಕಾಗಿರುವುದರಿಂದ
ನಿಜವಾದ ಇತಿಹಾಸ ಏನು ಯಾರು ಈ ಅಮಟೂರಿನ ಬಾಳಪ್ಪ ಎಂಬ ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವ ಒಂದು ಭಾಗವಾಗಿ ಈ ರ್ಯಾಲಿ ಆಯೋಜಿಸಿದ್ದೇವೆ.
ಬನ್ನಿ ಬಂಧುಗಳೇ ಯುವಕರೇ ವೀರಕೇಸರಿ ಅಮಟೂರ ಬಾಳಪ್ಪನವರ ಇತಿಹಾಸ ತಿಳಿಯೋಣ ..
ಇದೇ ರವಿವಾರ ಬೆಳಿಗ್ಗೆ 10:30ಕೆ ಅಮಟೂರಿನಲ್ಲಿ ಹಾಜರಿರೋಣ
ನಾನು ಹಾರಿಸಿದ ಗುಂಡಿಗೆ ಕಿತ್ತೂರು ವಿಜಯೋತ್ಸವ ಆಯ್ತು
ನಾನು ಕೊಟ್ಟ ಎದೆಗೆ ಚೆನ್ನಮ್ಮ ತಾಯಿಯ ರಕ್ಷಣೆಯಾಯಿತು. ನಿಷ್ಠೆಯಿಂದ ಮಾಡಿದ ನನ್ನ ಕಾಯಕ ಸರ್ಕಾರ ಮರೆತೇ ಹೋಯಿತು
ಬನ್ನಿ ಬಾಂಧವರೇ ಈಗಲಾದರೂ ನನ್ನ ರಕ್ತ ಸಂಬಂಧ ಹುಡುಕಿಕೊಂಡು ಬರುತ್ತಿರುವುದು ನನಗೆ ಸಂತೋಷ ನಿಮ್ಮಿಂದಾದರೂ ನಾನು ಇಡೀ ಜಗತ್ತಿಗೆ ಸತ್ಯದ ಇತಿಹಾಸ ತಿಳಿಯುವಂತಾಗಲಿ..
ಅಂದು ನಾನು ಮಾಡಿದ ಹೋರಾಟ ಈ ನಾಡ ರಕ್ಷಣೆಗಾಗಿ ನನಗೆ ಸಿಗಬೇಕಾದ ಗೌರವ ಪ್ರತಿಷ್ಠೆ ಕೇವಲ ಜಯಂತಿ ಗೆ ಮಾತ್ರ ಸೀಮಿತವಾಗಿದೆ. ನಿಮ್ಮ ಈ ಪ್ರಯತ್ನದಿಂದ ಮುಂದಿನ ಎಲ್ಲಾ ಪೀಳಿಗೆಗೂ ನನ್ನ ನಿಷ್ಠೆ ಪ್ರಮಾಣಿಕತೆ ತಿಳಿಯುವಂತಾಗಲಿ.
ಸಮಸ್ತ ನನ್ನ ಬಂಧುಗಳಲ್ಲಿ ಕೇಳಿಕೊಳ್ಳುವುದೇನೆಂದರೆ ನಮ್ಮವರನ್ನು ನಾವೇ ಮುಂದೆ ನಿಂತು ಮುನ್ನಡೆಸಿ ಸರ್ಕಾರದ ಕಣ್ಣು ತೆರೆಸಿದಾಗ ನ್ಯಾಯ ಸಿಗುತ್ತದೆ ಇದು ಪ್ರತಿಯೊಬ್ಬ ವ್ಯಕ್ತಿಗಳಿಗೆ ಮನದಟ್ಟ ಆಗುತ್ತದೆ ನಮ್ಮ ಯೋಜನೆಗಳು ಯಶಸ್ವಿಯಾಗುತ್ತದೆ..
✍️
ನಾಗರಾಜ ಹಣಬರ