Belagavi News In Kannada | News Belgaum

ಕಾಮನ್ ವೆಲ್ತ್ ಗೇಮ್ಸ್: ಬೆಳ್ಳಿಗೆ ಮುತ್ತಿಕ್ಕಿದ ಅವಿನಾಶ್

ನವದೆಹಲಿ: ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಪದಕದ ಬೇಟೆ ಇಂದು ಮುಂದುವರೆಸಿದೆ. 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಅವಿನಾಶ್ ಸೇಬಲ್ ಅವರು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

9ನೇ ದಿನದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ತಮ್ಮ ಪದಕದ ಬೇಟೆಯನ್ನು ಮುಂದುವರೆಸಿದ್ದಾರೆ. ಇಂದು 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಅವಿನಾಶ್ ಸೇಬಲ್ ಅವರು ಅದ್ಬುತ ಸಾಧನೆ ಮಾಡುವ ಮೂಲಕ, ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ./////