Belagavi News In Kannada | News Belgaum

ಕಲಾವಿದರೂ ಬೆಳೆಯಲು ಸರ್ಕಾರದ ಸಹಕಾರ ಅಗತ್ಯ

ಕಲಾವಿದರೂ ಬೆಳೆಯಲು ಸರ್ಕಾರದ ಸಹಕಾರ ಅಗತ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಲಾವಿದರಿಗೆ ಸಮಾಜದಲ್ಲಿ ಒಳ್ಳೆಯ ಬೆಲೆ ಕೊಡಿ,

ʻ

ಗೋಕಾಕ: ” ನಾಟಕಗಳಿಗೆ ಗೋಕಾಕ ಜನತೆ ಪ್ರೋತ್ಸಾಹ ನೀಡಿರುವುದು ಹೆಮ್ಮೆಯ ವಿಷಯ , ತಮ್ಮ ಸಹಕಾರ ಸದಾಕಾಲ ಇರಲಿ. ಕಲೆ ಜೀವಂತವಾಗಿ ಇರಬೇಕಾದರೆ, ಕಲಾವಿದರಿಗೆ ಸಮಾಜದಲ್ಲಿ ಒಳ್ಳೆಯ ಬೆಲೆ ಕೊಡಬೇಕು , ಅಂದಾಗ ಮಾತ್ರ ಭಾರತೀಯ ಸಂಸ್ಕೃತಿ ಪರಂಪರೆ ಉಳಿಯಲು ಸಾಧ್ಯ ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ನಗರದಲ್ಲಿ ವಿಶ್ವ ಜ್ಯೋತಿ ಶ್ರೀ ಪಂಚಾಕ್ಷರ ನಾಟಕ ಸಂಘ ವತಿಯಿಂದ ನಿತ್ಯವೂ ಪ್ರದರ್ಶನವಾಗುತ್ತಿರುವ ಜನಹಿತ “ಕುಂಟ ಕೋಣ ಮೂಕ್ ಜಾಣ” ಎಂಬ ನಾಟಕವನ್ನು ಶಾಸಕ ಸತೀಶ್ ಜಾರಕಿಹೊಳಿ ಅವರು ವೀಕ್ಷಿಸಿ ಮಾತನಾಡಿದರು.

ಜತೆಗಿವವರನ್ನು ಬೆಳೆಸುವ ಸಂಸ್ಕಾರ ನಮ್ಮಲ್ಲಿ ಇರಲಿ

ಸಮಾಜಮುಖಿ ಕಾರ್ಯಕ್ಕೆ ಬಳಷ್ಟು ಮಹತ್ವ ನೀಡಲಾಗುವುತ್ತಿದೆ. ನಾಟಕ- ಕ್ರೀಡೆ ಹೀಗೆ ಹಲವಾರೂ ಸಮಾಜದ ಕಾರ್ಯಕ್ಕೆ ಸಹಕಾರ ನೀಡಲಾಗುತ್ತಿದೆ. ನಾವು ಬೆಳೆಬೇಕು, ಜತೆಗಿವವರನ್ನು ಬೆಳೆಸುವ ಸಂಸ್ಕಾರ ನಮ್ಮಲ್ಲಿ ಇರಲಿ. ಕಲೆ ಒಂದು ಜೀವನ ಭಾಗವಾಗಿದೆ. ಅದು ಎಲ್ಲರಿಗೂ ಸುಲಭವಾಗಿ ಒಲಿಯುವ ಮಾತಲ್ಲ, ಕಲೆ ಎಲ್ಲರಿಗೂ ಬರಲ್ಲ ಅದಕ್ಕಾಗಿ ಕಲೆಗಾರರನ್ನು ನಿತ್ಯವೂ ಪ್ರೋತ್ಸಾಹಿಸುವದರ ಜತೆ ಪ್ರೀತಿಸಬೇಕು ಎಂದು ಹೇಳಿದರು.

ಗ್ರಾಮೀಣ ನಾಟಕವನ್ನು ಜೀವಂತ ಉಳಿಸಿಕೊಳ್ಳುವ ಪ್ರಯತ್ನವನ್ನು ಸರ್ಕಾರಗಳು ಮಾಡಬೇಕಿದೆ. ಎಲ್ಲರೂ ಗ್ರಾಮೀಣ ಕಲೆ-ಕಲಾವಿದರಿಗೆ ಮಹತ್ವದ ನೀಡಬೇಕೆಂದು, ಕಲಾವಿದರೂ ಉಳಿದರೆ ನಾಡಿನ ಸಂಸ್ಕೃತಿಗೆ ಮೆರಗು ಎಂದು ಹೇಳಿದರು.

ಸತೀಶ ಶುಗರ್ಸ್‌ ಅವಾಡ್ಸ್‌ ದಿಂದ ಸಮಾಜಮುಖಿ ಕಾರ್ಯ:

ಹಲವಾರೂ ವರ್ಷಗಳಿಂದ ಸತೀಶ ಶುಗರ್ಸ್‌ ಅವಾಡ್ಸ್‌ ವತಿಯಿಂದ ಕ್ರೀಡೆ- ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಸಮಾಜದ ಕಾರ್ಯ ನಿರಂತರ ಸಾಗಲಿದೆ ಸಹಕಾರ ನೀಡಲು ನಾವು ಸದಾ ಸಿದ್ದವಾಗಿದ್ದೆವೆ. ಈಗಾಗಲೇ ಸತೀಶ ಜಾರಕಿಹೊಳಿ ಪೌಂಢೇಶನ್‌ ದಿಂದ ಘಟಪ್ರಭಾದಲ್ಲಿ ಪರೀಕ್ಷಾ ಶಿಬಿರಾರ್ಥಿಗಳಿಗೆ ಸೈನಿಕ ಹಾಗೂ ಪೊಲೀಸ್‌ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ, ಮಕ್ಕಳು ಜೀವನದಲ್ಲಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲಿ ಅದಕ್ಕೆ ನಮ್ಮ ಸಹಕಾರ ಇದೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡ ಅಶೋಕ ಪೂಜಾರಿ, ಸಿದ್ದಲಿಂಗ ದಳವಾಯಿ, ಶಿವು ಪಾಟೀಲ, ಸಿ ಸಿ ಕೊಣ್ಣೂರ, ಜುಬೇರ್ ಮಿರ್ಜಾಬಾಯಿ ಹಾಗೂ ಅನೇಕರು ಉಪಸ್ಥಿತರಿದ್ದರು.