Belagavi News In Kannada | News Belgaum

ತಾಯಿ-ಮಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಡಾಕ್ಟರ್

ಬೆಂಗಳೂರು:  ಮಹಿಳಾ ಡಾಕ್ಟರ್​ ಮತ್ತು ಮಗಳು ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕೊಡಗು ಮೂಲದ ತಾಯಿ-ಮಗಳು ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಡಾಕ್ಟರ್ (ಆoಛಿಣoಡಿ) ಶೈಮಾ (39) ಮತ್ತು ಆರಾಧನಾ (10) ಅಂತಾ ಗುರುತಿಸಲಾಗಿದೆ.
ಶೈಮಾ ವೃತ್ತಿಯಲ್ಲಿ ಡೆಂಟಲ್ ಡಾಕ್ಟರ್​ ಆಗಿದ್ದರು.

 

ಮಗಳು ಆರಾಧನಗೆ ಕೇವಲ 10 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಎರಡು ದಿನದ ಹಿಂದೆ ನಡೆದ ಘಟನೆ ತಡವಾಗಿ ಇಂದು ಬೆಳಕಿಗೆ ಬಂದಿದೆ. ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲ ಎನ್ನಲಾಗಿದೆ. ಹಾಗಾಗಿ ಆತ್ಮಹತ್ಯೆಯೋ , ಕೊಲೆಯೋ (ಒuಡಿಜeಡಿ) ಅನ್ನೋ ಅನುಮಾನ ಮೂಡಿದೆ.

ಬದುಕಿ ಬಾಳಬೇಕಿದ್ದ ಎರಡು ಜೀವಗಳು ಬೆಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದೆ. ಡಾಕ್ಟರ್​ ಆಗಿದ್ದ ಶೈಮಾ ಮತ್ತು ಅವರ 10 ವರ್ಷದ ಮಗಳು ಆರಾಧನರ ಸಾವು ಅನುಮಾನ ಮೂಡಿಸಿದೆ. ಉನ್ನತ ವೃತ್ತಿಯಲ್ಲಿದ್ದ ಶೈಮಾ ಎಂಬುವವರ ಸಾವಿನ ಸುತ್ತ ಅನುಮಾನದ ಹುತ್ತ ಮೂಡಿದೆ.

ಸ್ವಂತ ಕ್ಲಿನಿಕ್ ಹೊಂದಿದ್ದ ಶೈಮಾ!

39 ವರ್ಷದ ಶೈಮಾ ಡೆಂಟಿಸ್ಟ್​ ಆಗಿ ಕೆಲಸ ಮಾಡ್ತಿದ್ರು. ಶೈಮಾರವರು ಸ್ವಂತ ಕ್ಲಿನಿಕ್ ಕೂಡ ನಡೆಸ್ತಿದ್ರು. ಹಾಗಾಗಿ ಆರ್ಥಿಕ ಸಮಸ್ಯೆ ಏನೂ ಇರಲಿಲ್ಲ. ಈ ಅನುಮಾನದ ಸಾವಿನ ವೇಳೆ ಮನೆಯಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ.