Belagavi News In Kannada | News Belgaum

ಶಾಲೆಯ ಗೋಡೆಯೊಂದು ಕುಸಿದು ಹಾನಿಯಾಗಿ ರುವ ಘಟನೆ

ಭಟ್ಕಳ:  ಭಟ್ಕಳ ತಾಲೂಕಿನಲ್ಲಿ ಕಂಡು ಕೇಳರಿಯದ ಭೀಕರ ನೆರೆಯಿಂದ ಸಂಪೂರ್ಣ ಮುಂಡಳ್ಳಿಯೇ ಮುಳುಗಿ ಭಾರೀ ಹಾನಿಯಾಗಿರುವ ಬೆನ್ನಲ್ಲಿಯೇ ಮುಂಡಳ್ಳಿಯಲ್ಲಿರುವ ನಂ.1 ಶಾಲೆಯ ಗೋಡೆಯೊಂದು ಕುಸಿದು ಹಾನಿಯಾಗಿ ರುವ ಘಟನೆ ಸಂಭವಿಸಿದೆ.

ಮುಂಡಳ್ಳಿ ಮುಖ್ಯ ರಸ್ತೆಯಲ್ಲಿರುವ ಮುಂಡಳ್ಳಿ ನಂ.1 ಶಾಲೆಯ ಕೋಣೆಯ ಗೋಡೆಗಳು ತುಂಬಾ ಹಳೆಯದಾ ಗಿದ್ದು ಮಣ್ಣು ಹಾಗೂ ಕಲ್ಲಿನಿಂದ ಕಟ್ಟಿದ ಗೋಡೆಯಾಗಿತ್ತು.

ಇದು ಆ.3ರಂದು ರಾತ್ರಿ ಸುರಿದ ಮಳೆಗೆ ಆ 7ರಂದು ಬೆಳಿಗ್ಗೆಯ 7 ಗಂಟೆಯ ಸುಮಾರಿಗೆ ಕುಸಿದು ಬಿದ್ದು ಇನ್ನೊಂದು ಕೊಠಡಿಯ ಗೋಡೆಗೂ ಕೂಡಾ ಹಾನಿಯಾ ಗಿದೆ.

ಒಟ್ಟು ಎರಡು ಕೊಠಡಿಗಳಿಗೆ ಹಾನಿಯಾಗಿದ್ದು ರವಿವಾರ ಹಾಗೂ ಬೆಳಗಿನ ಸಮಯವಾದ್ದರಿಂದ ಯಾವುದೇ ಅನಾ ಹುತ ಸಂಭವಿಸಿಲ್ಲ.ಮಂಗಳೂರು ಹಂಚಿನ ಮೇಲ್ಚಾವಣಿ ಯಾಗಿದ್ದು ಮೇಲ್ಚಾವಣಿಯು ಸಂಪೂರ್ಣ ಬಿದ್ದು ಹೋಗಿದ್ದು ಹಂಚುಗಳು ಒಡೆದು ಚೂರಾಗಿದೆ.ಒಟ್ಟಾರೆ ಮಳೆಯು ನಿಂತರೂ ಸಹ ಹಾನಿ ತಪ್ಪಿಲ್ಲ ಎನ್ನುವಂತಾಗಿದೆ ಭಟ್ಕಳದವರ ಪರಿಸ್ಥಿತಿ