Belagavi News In Kannada | News Belgaum

ವಲಯ ಮಟ್ಟದಲ್ಲಿ ಶಿವಾಪುರ ಶಾಲೆಯ ವಿದ್ಯಾರ್ಥಿಗಳ ಸಾಧನೆ

ವಲಯ ಮಟ್ಟದಲ್ಲಿ ಶಿವಾಪುರ ಶಾಲೆಯ ವಿದ್ಯಾರ್ಥಿಗಳ ಸಾಧನೆ
ಮೂಡಲಗಿ ಗ್ರಾಮೀಣ ವಲಯ ಮಟ್ಟದ ವ್ಯಯಕ್ತಿಕ ಕ್ರೀಡಾ ಕೂಟಗಳಲ್ಲಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.
100ಮೀ ಮತ್ತು 400ಮೀ ಓಟದಲ್ಲಿ ಕು. ಹಣಮಂತ ಹೆಳವರ ಪ್ರಥಮ ಸ್ಥಾನ ಪಡದಿದ್ದಾನೆ, ಅಶ್ವಿನಿ ರಡ್ದೆರಟ್ಟಿ 100ಮೀ,400ಮೀ, ಓಟದಲ್ಲಿ ಹಾಗೂ 100ಮೀ ಹರ್ಡಲ್ಸ್ ರಲ್ಲಿ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ.ಆಶಾ ನುಚ್ಚುoಡಿ ಉದ್ದ ಜಿಗಿತ ಪ್ರಥಮ,ಎತ್ತರ ಜಿಗಿತದಲ್ಲಿ ಪ್ರವೀಣ ಪಾಟೀಲ ಪ್ರಥಮ,ಗೌರವ್ವ ಕಬ್ಬುರ ದ್ವಿತೀಯ ಸ್ಥಾನ,ಮಲ್ಲಿಕಾರ್ಜುನ ಕೂಡಲಗಿ 1500ಮೀ ಓಟದಲ್ಲಿ ದ್ವಿತೀಯ ಸ್ಥಾನ, ಕಲ್ಪನಾ ಯಾದವಾಡ 1500ಮೀ,3000ಮೀ ಓಟದಲ್ಲಿ ದ್ವಿತೀಯ ಸ್ಥಾನ, ಸುಕನ್ಯಾ ಕಳ್ಳಿಮನಿ 200ಮೀ ದ್ವಿತೀಯ,ದೀಪಾ ಗಿರೇನ್ನವರ ಹರ್ಡಲ್ಸ್ ನಲ್ಲಿ ದ್ವಿತೀಯ,ಹಾಗೂ ಬಾಲಕಿಯರ 4*100 ನಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಎಸ್ ಡಿ ಎಂಸಿ ಅಧ್ಯಕ್ಷರಾದ ಶಿವನಗೌಡ ಪಾಟೀಲ, ಉಪಾಧ್ಯಕ್ಷರಾದ ಗಂಗವ್ವ.ಕೆಂ ಮುಧೋಳ, ಹಾಗೂ ಸರ್ವ ಸದಸ್ಯರು, ಗ್ರಾಮದ ಹಿರಿಯರು, ಕ್ರೀಡಾ ಪ್ರೇಮಿಗಳು, ಶಾಲೆಯ ಮುಕ್ಯೋಪಾಧ್ಯಾಯರಾದ ಜಿ ಜಿ ಬಸ್ಮೆ, ದೈಹಿಕ ಶಿಕ್ಷಕರು ಮತ್ತು ಮಾರ್ಗದರ್ಶಕರಾದ ಕೆ ಎಚ್ ಪಾಟೀಲ ಹಾಗೂ ಶಾಲೆಯ ಎಲ್ಲ ಸಹ ಶಿಕ್ಷಕರು, ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.