Belagavi News In Kannada | News Belgaum

ಮದ್ದುಗುಂಡು ಕಳ್ಳಸಾಗಣೆ ಮಾಡುತ್ತಿದ್ದ 6 ಮಂದಿ ಬಂಧನ

ನವದೆಹಲಿ: ಮದ್ದುಗುಂಡುಗಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ದೆಹಲಿ ಪೊಲೀಸರು ಆರು ಮಂದಿಯನ್ನು ಬಂಧಿಸಿ ಅವರಿಂದ  ಒಟ್ಟು 2,251 ಜೀವಂತ ಕಾಟ್ರಿಡ್ಜ್ಗಳನ್ನು ವಶಪಡಿಸಿaಕೊಳ್ಳಲಾಗಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಆರೋಪಿಗಳನ್ನು ರಾಷ್ಟ್ರ ರಾಜಧಾನಿಯ ಆನಂದ್ ವಿಹಾರ್ ಪ್ರದೇಶದಲ್ಲಿ ಎರಡು ಚೀಲಗಳ ಕಾಟ್ರಿಡ್ಜ್ಗಳೊಂದಿಗೆ ಬಂಧಿಸಲಾಗಿದೆ.ಉತ್ತರ ಪ್ರದೇಶದ ಲಕ್ನೋಗೆ ಸರಬರಾಜು ಮಾಡಲು ಉದ್ದೇಶಿಸಲಾಗಿತ್ತು ಎಂದು ಪೂರ್ವ ವಲಯದ ಸಹಾಯಕ ಪೊಲೀಸ್ ಆಯುಕ್ತ ವಿಕ್ರಮಜಿತ್ ಸಿಂಗ್ ಹೇಳಿದ್ದಾರೆ.
ಪ್ರಕರಣದಲ್ಲಿ ಭಯೋತ್ಪಾದನೆಯ ಕೋನವನ್ನು ಪೊಲೀಸರು ಇನ್ನೂ ತಳ್ಳಿಹಾಕಿಲ್ಲ ಎಂದು ಅವರು ಹೇಳಿದರು. “ಇದುವರೆಗೆ ಬಂಧಿಸಲಾದ ಆರು ಜನರಲ್ಲಿ ಒಬ್ಬರು ಡೆಹ್ರಾಡೂನ್ನಿಂದ ಬಂದವ ಗನ್ ಹೌಸ್ನ ಮಾಲೀಕರಾಗಿದ್ದಾರೆ. ಮೇಲ್ನೋಟಕ್ಕೆ, ಇದು ಅಪರಾಧ ಜಾಲದ ಮೂಲಕ ಮಾಡಲ್ಪಟ್ಟಿದೆ ಎಂದು ತೋರುತ್ತದೆ. ಆದಾಗ್ಯೂ, ಪೊಲೀಸರು ಭಯೋತ್ಪಾದಕ ಕೋನವನ್ನು ತಳ್ಳಿಹಾಕುತ್ತಿಲ್ಲ ಎಂದು ಸಿಂಗ್ ಹೇಳಿದ್ದಾರೆ./////