Belagavi News In Kannada | News Belgaum

ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯ ನಾಡು ಹೊಸೂರ

ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯ ನಾಡು ಹೊಸೂರ
ಬೆಳಗಾವಿ ಜಿಲ್ಹೆಯ ಸವದತ್ತಿ ತಾಲೂಕಿನ ಹೊಸೂರ ಗ್ರಾಮ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೊತ್ತಿಸಿ ಬ್ರಿಟಿಷ್ ಸರ್ಕಾರದಲ್ಲಿ 155 ಜನ ಜೈಲು ವಾಸ ಅನುಭವಸಿ 215 ಕ್ಕೂ ಹೆಚ್ಚು ಸ್ವಾತಂತ್ರ್ಯ ಯೋಧರುನ್ನು ಹೊಂದಿದ ದೇಶಭಕ್ತ ಗ್ರಾಮ.
 ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬೆಳಗಾವಿ ಜಿಲ್ಹೆಯಲ್ಲಿ 3 ಹಳ್ಳ್ಳಿಗಳಾದ ಹೊಸೂರ ,ಹುದಲಿ ,ಕರೀಕಟ್ಟಿ  ಈ ಮೂರೂ ಗ್ರಾಮಗಳಲ್ಲಿ ಸ್ವಾತಂತ್ರ್ಯಯೋಧರ ಸಂಖ್ಯೆ ಅಧಿಕವಾಗಿದ್ದು, ಇವುಗಳ ಪೈಕಿ ಹೊಸೂರು ಹಾಗೂ ಹುದಲಿಗಳಲ್ಲಿ ಗಾಂಧಿ ಆಶ್ರಮ ಪ್ರಾರಂಭಿಸಿ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಊದಲಾಗುತ್ತಿತ್ತು. ಉತ್ತರ ಕರ್ನಾಟಕದಲ್ಲಿ ಮತ್ತೊಂದು ಪ್ರಸಿದ್ಧ ಗಾಂಧಿ ಆಶ್ರಮ ಹಾವೇರಿ ತಾಲೂಕ ಹೊಸರಿತ್ತಿಯಲ್ಲಿ ಇತ್ತು.
ಮೊಟ್ಟಮೊದಲು ಹೊಸೂರ ಗ್ರಾಮಕ್ಕೆ ಲೋಕಮಾನ್ಯ ಬಾಲಗಂಗಾಧರ ಟಿಳಕರು 1905 ರ ಸುಮಾರಿಗೆ ಭೆಟ್ಟಿ ಕೊಟ್ಟು ಪ್ರತಿ ಮನೆಯಲ್ಲೂ ಗಣೇಶನನ್ನು ಇಟ್ಟು ರಾಷ್ಟ್ರೀಯತೆ ಪ್ರಕಟಗೊಳಿಸಲು ” ಸ್ವರಾಜ್ಯ ನಮ್ಮಜನ್ಮಸಿದ್ಧ ಹಕ್ಕು” ಎಂಬ ಭಾವನೆ ಜಾಗೃತಮಾಡಲು ಬಂದಿದ್ದರು. ಇವರ ಕ್ರಾಂತಿಕಾರಿ ಭಾಷಣದ ಕಿಚ್ಚಿನಿಂದ ಇಡೀ ಊರೇ ಟಿಳಕರನ್ನು ಹಬ್ಬದ ರೀತಿ ಮೆರವಣಿಗೆಯಲ್ಲಿ ಸ್ವಾಗತಿಸಿ ಇಡೀ ಊರ ಹೆಣ್ಣು ಮಕ್ಕಳು ಆರತಿ ಮಾಡಿ ಸ್ವಾಗತಿಸುತ್ತಾರೆ .ಆರತಿ ಮಾಡಿದ ಪ್ರತಿಯೊಬ್ಬರಿಗೂ ಒಂದು ರೂಪಾಯಿಯ ಬೆಳ್ಳಿ ನಾಣ್ಯವನ್ನು ಆರತಿಯಲ್ಲಿಟ್ಟು ಹೆಣ್ಣುಮಕ್ಕಳನ್ನು ಗೌರವಿಸಿದ ಅವರ ರೀತಿ ಹಳೆಯ ಕಾಲದ ಜನತೆಗೆ ಮನೆ ಮನೆ ಮಾತಾಗಿತ್ತು.
      ಅಂದಿನಿಂದ ಗ್ರಾಮದಲ್ಲಿ ಮನೆ ಮನೆಗೆ ಗಣೇಶನನ್ನು ಕೂಡಿಸಿದ ನಂತರ  ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುಧ್ಧ ಕಹಳೆ ಗ್ರಾಮದಲ್ಲಿ ಪ್ರಾರಂಭವಾಗುತ್ತದೆ .
1915ಕ್ಕೆ ದಕ್ಷಿಣ ಆಫ್ರಿಕದಿಂದ ಮಹಾತ್ಮಾ ಗಾಂಧೀಜಿಯವರು ಭಾರತಕ್ಕೆ ಮರಳಿ ಬಂದ ನಂತರ ಹೊಸೂರ ಗ್ರಾಮಕ್ಕೂ ಭೆಟ್ಟಿ ನೀಡಿದ ಸ್ಥಳ ಇಂದು ಧ್ವಜ ಸ್ತಂಬದೊಂದಿಗೆ ಗಾಂಧಿ ಕಟ್ಟೆ ಎಂದು ನೆನಪಿನ ಸ್ಥಳವಾಗಿದೆ.
 ಬ್ರಿಟಿಷರ ವಿರುಧ್ಧ ಮತ್ತೊಂದು ಮಿಂಚಿನ ಐತಿಹಾಸಿಕ ದಾಂಡಿಯಾತ್ರೆಯ ನಂತರ 1930ರ ಉತ್ತರಾರ್ಧದಲ್ಲಿ ಗ್ರಾಮಕ್ಕೆ ಸರದಾರ ವಲ್ಲಭಭಾಯಿ ಪಟೇಲರು ಭೆಟ್ಟಿ ಕೊಟ್ಟು ಬ್ರಿಟಿಷ್ ಸರಕಾರದ ವಿರುಧ್ಧ ಸ್ವಾತಂತ್ರ್ಯದ ಪ್ರಭಾವೀ ಕಹಳೆ ಊದುತ್ತಾರೆ. ಸಭೆಯ ನಂತರ ಗ್ರಾಮದ ಯುವಕರಲ್ಲಿ ನಿಮ್ಮಲ್ಲಿ ಸತ್ಯಾಗ್ರಹಕ್ಕೆ ನಿಮ್ಮ ಸಂಪೂರ್ಣ ಮನಸ್ಸಿನಿಂದ  ಯಾರಾದರೂ ಹೆಸರು ಕೊಡುತ್ತೀರಾ ? ಎಂದು ಕೇಳಿದಾಗ ಇಡೀ ಸಭೆ ಪೂರ್ತಿ ಸ್ಥಬ್ದ , ಕೂಡಲೇ ಎದ್ದು ಪಟೇಲರಿಗೆ ಗ್ರಾಮದ 21 ವರ್ಷದ ಯುವಕ ಸೋಮಲಿಂಗಪ್ಪ ವಣ್ಣುರ ಹೆಸರು ಕೊಡುತ್ತಾರೆ .ಅಷ್ಟರಲ್ಲಿ ಅವರ ತಾಯಿ ಪಟೇಲರಿಗೆ ನನ್ನ ಮಗನ ಹೆಸರುಬೇಡ ಎಂದರು ವಣ್ಣುರ ತಮ್ಮ ಹೆಸರು ಕೊಡುತ್ತಾರೆ . ಚಳುವಳಿಗಳಲ್ಲಿ ಮುಂಚೂಣಿಯಲ್ಲಿದ್ದು 1941 ರಲ್ಲಿ 6 ತಿಂಗಳು 1942 ರಲ್ಲಿ 2 ವರ್ಷ 8 ತಿಂಗಳು ಹೀಗೆ ಒಟ್ಟು 3 ವರ್ಷ 2 ತಿಂಗಳು ಜೈಲು ಅನುಭವಿಸುತ್ತಾರೆ .
1932ರಲ್ಲಿ ರಾಷ್ಟ್ರೀಯ ಜಾಗೃತೆಯ ಪರಿಣಾಮದಿಂದ ಅಂದು ಕರ ವಸೂಲಿಗಾಗಿ ಬರುತ್ತಿದ್ದ ಬೆಳಗಾವಿ ಜಿಲ್ಹಾ ಬ್ರೀಟಿಷ್ ಕಲೆಕ್ಟರ್ ವಾಹನಗಳೇ ಇಲ್ಲದ ಆ ಕಾಲದಲ್ಲಿ ರೈತರ ಚಕ್ಕಡಿಗಳನ್ನು ತಮ್ಮ ಸಾಮಾನು ಸರಂಜಾಮ ಒಯ್ಯಲು ಉಪಯೋಗಸುತ್ತಿದ್ದುದು ಮಾಮೂಲಾಗಿತ್ತು . ಅವುಗಳಿಗೆ  ” ಬಿಟ್ಟಿ ಚಕ್ಕಡಿ ” ಎನ್ನುತಿದ್ದರು. ಜಿಲ್ಹಾ ಕಲೆಕ್ಟರ ವೇಲ್ಸ ಎಂಬುವ ಬ್ರಿಟಿಷ್ ಗ್ರಾಮಕ್ಕೆ ಬಂದಾಗ ಊರಿನ  ಪೈಲವಾನರು ಕೂಡಿ ಅವನಿಗೆ ಯಾರೂ ಬಿಟ್ಟಿ ಚಕ್ಕಡಿ ಕೊಡಬಾರದೆಂದು ಡಂಗುರ ಹೊಡೆಸುತ್ತಾರೆ . ಊರೇ ಒಂದಾಗಿ ಬ್ರಿಟಿಷ್ ರ ವಿರುಧ್ಧ ಪ್ರಥಮ ಅಸ್ತ್ರ ಪ್ರಯೋಗಿಸಿ ಯಶಸ್ವಿಯಾಗುತ್ತಾರೆ. ಇದು ಮನೆ ಮನೆ ಜಾಗೃತಿ ಮೂಡಿಸುತ್ತದೆ. ಕಂಗಾಲಾದ ಬ್ರಿಟಿಷ್ ಕಲೆಕ್ಟರ್ ವೇಲ್ಸ ಸೇಡು ಇಟ್ಟು ಆ ಪೈಲವಾನರನ್ನು ಬಂಧಿಸಿ 6 ತಿಂಗಳು  ಮಹಾರಾಷ್ಟ್ರದ ಯರವಾಡಾ ಜೈಲುವಾಸ ಅನುಭವಿಸುವಂತೆ ಮಾಡುತ್ತಾನೆ ಆಗ ಹೋರಾಟದ ಮುಂಚೂನಿಯಲ್ಲಿದ್ದ  ಬಾಳಪ್ಪ ಬೋಳತ್ತೀನ , ರಾಚಪ್ಪ ಬೋಳೆತ್ತಿನ , ದುಂಡಯ್ಯಾ ಹಿರೇಮಠ , ಗಂಗಪ್ಪಾ ಜೋಬಾಳಿ , ಬಸವಣ್ಣೆಪ್ಪ ಬೋಳೆತ್ತಿನ, ನಾಗಪ್ಪ ದಾಡಿಗುಂಡಿ , ಮಹಾದೇವಪ್ಪ ಕೋಟಗಿ, ಬಸಪ್ಪಾ ಮುತವಾಡ, ಶಿವಬಸಪ್ಪಾ ಬಾಳೆಕುಂದರಗಿ, ಗುಂಡುಭಟ್ ಜೋಯಿಸ, ಗುರುಸಿದ್ಧಪ್ಪ ಕೋಟಗಿ ಮೂಗಪ್ಪ ಕಂಠಿ, ಫಕೀರಪ್ಪ ಸಂಗಣ್ಣವರ, ಶಿವಪ್ಪ ಹುರಕಡ್ಲಿ, ಮಲ್ಲಪ್ಪ ಹುರಕಡ್ಲಿ , ಸೋಮಪ್ಪ ಶಿರೆಣ್ಣವರ, ಯಲ್ಲಪ್ಪ ಹಾದಿಮನಿ, ಚರಂತಯ್ಯಾ ಹಿರೇಮಠ, ಬಾಳಪ್ಪ ಯರಡಾಲ, ಬಸಪ್ಪ ಚಿಕ್ಕೊಪ್ಪ , ಸೋಮಪ್ಪ ಕುಂಬಾರ,  ಫಕೀರಪ್ಪ ಆಲಕಟ್ಟಿ , ಸಿದ್ಧಪ್ಪ ಕುಂಬಾರ, ಅಪ್ಪಾಸಾಬ ಮುಲ್ಲಾ , ಈರಪ್ಪ ಸಂಗಣ್ಣವರ, ಬಸವಣ್ಣೆಪ್ಪ ಕಮತಗಿ , ಗುರುಪುತ್ತ್ರಪ್ಪಾ ಬೀಳಗಿ,  ಸಣ್ಣರುದ್ರಪ್ಪಾ ಹುಡೇದ, ಮೂಗಪ್ಪ ಬೂದಿಹಾಳ, ಹುಸೇನಸಾಬ ಪಿಂಜಾರ, ಚನಬಸಪ್ಪಾ ಹುದ್ದಾರ, ಶಿವಪುತ್ರಪ್ಪಾ ಚಿಕ್ಕೊಪ್ಪ , ಮೂಗಪ್ಪ ಸೊಗಲ, ಗೌಡಪ್ಪ ಬೂದಿಹಾಳ , ಸಕರೆಪ್ಪ ಪಿಂಜಾರ , ಮಹಾದೇವಪ್ಪ ದೊಡವಾಡ ಇವರು ಪ್ರಮುಖರು.
ಊರಲ್ಲಿ ಇವರು 6 ತಿಂಗಳು ಶಿಕ್ಷೆ ಅನುಭವಿಸಿ ಬಿಡುಗಡೆಯಾದಾಗ ಮೆರವಣಿಗೆ ಮುಖಾಂತರ ಊರ ಜನ ಇವರನ್ನು ಸ್ವಾಗತಿಸುತ್ತಾರೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೊಸೂರ ಪಾತ್ರ.
9-8-1942 ರ ಕ್ವಿಟ್ ಇಂಡಿಯಾ ಕ್ರಾಂತಿ ನಡೆದಾಗ ಗ್ರಾಮದ ಯುವಕರ ಬಗ್ಗೆ ಮಾಹಿತಿ ಪಡೆಯಲು ಬ್ರಿಟಿಷ ಗೂಢಚಾರ ವಿಭಾಗ ಕೆಲಸಮಾಡುತಿತ್ತು. 8-8-1942 ಕ್ಕೆ ಕಾಂಗ್ರೆಸ್ ” ಕ್ವಿಟ್ ಇಂಡಿಯಾ ” ಚಳುವಳಿ ಘೋಷಿಸಿದ ಕೂಡಲೇ ನಮ್ಮ ಊರಲ್ಲಿ 5-6 ಗುಂಪುಗಳ ಮುಖಾಂತರ ಬ್ರಿಟಿಷ್ ಸಂಚಾರ ವ್ಯವಸ್ಥೆ ತಡೆಯಲು ತಾರು ತಂತಿ ಕತ್ತರಿಸುವದು ಹಾಗೂ ರಸ್ತೆಯ ದೊಡ್ಡ ಫೂಲಗಳನ್ನು ಕೆಡುವುವದು , ಕಂದಾಯ ವಸೂಲಿ ತಡೆ , ಕಂದಾಯ ಲೂಟಿಗಳನ್ನು ಮಾಡುತ್ತಾ ಗ್ರಾಮದ ಬಂಗಲೆಯಲ್ಲಿ ಸುತ್ತಲಿನ ಗ್ರಾಮದಿಂದ ಸಂಗ್ರಹಿಸಿಟ್ಟಿದ್ದ ಕಂದಾಯದ ವಸ್ತುಗಳನ್ನ ಸುಟ್ಟು ಹಾಕಿದರು.ಗ್ರಾಮದಲ್ಲಿ ದೊಡ್ಡ ಪ್ರಮಾಣದಲ್ಲಿ ಜನ ಪಾಲ್ಗೊಳ್ಳಿತ್ತಿರವದರಿಂದ ಬ್ರಿಟಿಷ್ ರು ಗ್ರಾಮಕ್ಕೆ ಬರಲು ನಡುಗುತಿದ್ದರು.
ಹುಲಕುಂದದಿಂದ ಉತ್ಪತ್ತಿಯಾಗುವ ಖಾದಿ ನೂಲಿನಿಂದ ನಮ್ಮೂರಲ್ಲಿ ಕೈರಾಟಿಗಳಿಂದ ಬಟ್ಟೆ ತಯಾರಿಸಿ‌ ಮಾರಾಟಮಾಡುತಿದ್ದರು
 ಮಹಾರಾಷ್ಟ್ರದ ಮೂಲದ ಭಾಸ್ಕರ ವಿಷ್ಣು ಕಾಳೆಯವರು ಯರವಾಡಾ ಜೈಲಿನಲ್ಲಿ ಗ್ರಾಮದ‌ ವೀರಪ್ಪ ಸುತಗಟ್ಟಿಯವರಿಗೆ ಪರಿಚಯವಾಗಿ ಗ್ರಾಮಕ್ಕೆ ಅಗಮಿಸಿ ಅವರ ಮನೆಯಲ್ಲೆ ಉಳಿದುಕೊಂಡು ಇವರನ್ನು  ಊರಿನ ಜನ ದಾದಾ ಕಾಳೆ ಎಂದು ಕರೆಯುತ್ತಿದ್ದರು. ಇವರ ಮತ್ತು ನಿಮ್ಮ ಅಜ್ಜನವರ ಅನ್ಯೋನ್ಯತೆ ಹಾಗೂ ದೇಶಪ್ರೇಮ ಇಡೀ ಊರಿಗೆ ನಿದರ್ಶನವಾಗಿತ್ತು.
 ಖಾದಿ ಗ್ರಾಮೋದ್ಯೋಗ ಸ್ಥಾಪನೆಯಲ್ಲಿ ಇವರ  ಪಾತ್ರ ಪ್ರಮುಖವಾದದ್ದು.
 ಸೋಮಪ್ಪ ಕಲ್ಯಾಣೆಪ್ಪ ವಣ್ಣೂರ ,ವೀರಪ್ಪ ನಿಂಗಪ್ಪ ಸುತಗಟ್ಟಿ ,ಲೋಕಯ್ಯ ಹಿರೇಮಠ , ಬಾಳಪ್ಪ ಯಡಾಲ , ಪದ್ಮರಾಜ ಬೋಗಾರ, ನೀಲಪ್ಪ ಪೆಂಟೇದ , ಇತ್ಯಾದಿ 12 ಜನ ಸೇರಿ ಚರಖಾ ಸಂಘ ಪ್ರಾರಂಭಿಸಿ ಖಾದಿ ಉತ್ಪಾದನೆ ಶೂರು ಮಾಡುತ್ತಾರೆ .ಇದೇ 12 ಜನ ಸ್ವಾತಂತ್ರ್ಯ ಸಿಕ್ಕ ನಂತರ 1955 ರಲ್ಲಿ ” ಹೊಸೂರ ಬೈಲಹೊಂಗಲ ಖಾದಿ ಉತ್ಪಾದನಾ ಸಹಕಾರಿ ಸಂಘ” ವನ್ನು ರಜಿಸ್ಟರ ಮಾಡಿ ಖಾದಿ ಉತ್ಪಾದನೆ ಮಾಡುತ್ತಾರೆ.
1947 ರಲ್ಲಿ ದೇಶ ಸ್ವತಂತ್ರವಾದ ನಂತರ  ಅನೇಕ ಸ್ವಾತಂತ್ರ ಹೋರಾಟಗಾರರು ಗಾಂಧಿ ಸ್ಮಾರಕ ನಿಧಿ , ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಮುಖಾಂತರ ಸೇವೆ ಸಲ್ಲಿಸಿ 1962 ರಿಂದ 1968 ರವರೆಗೆ ಭೂದಾನ ಅಂದೋಲನದಲ್ಲಿ ಭಾಗಿಯಾಗಿದ್ದರು.
ಗ್ರಾಮದ ರಾಮ ಕುಲಕರ್ಣಿ, ರಾಮ ಮಾಸ್ತರರು ಅಂತ ಪ್ರಸಿದ್ದಿ ಪಡೆದಿದ್ದು ಇವರು ಶಾಲೆಗೆ ಶಿಕ್ಷಕರಾಗಿ ಹೋದಾಗ ಶಾಲೆಯಲಿದ್ದ 5ನೇ ಜಾರ್ಜನ ಪೋಟೋ ನೋಡಿ, ನಮ್ಮ ದೇಶದ ಶಾಲೆಯಲ್ಲಿ ಅವರ ಪೋಟೋ ಏಕೆ ಅಂತ ಓಡೆದು ಹಾಕಿ ಬಹಿರಂಗವಾಗಿ ಬ್ರಿಟಿಷ್ ವಿರುದ್ದ ದಂಗೆ ಎದ್ದರು. ಗ್ರಾಮದಲ್ಲಿ ಇವರಿಗೆ ಕೊಟ್ಟಷ್ಟು ಹಿಂಸೆ ಅಷ್ಟಿಷ್ಟಲ್ಲ. ಇವರ ಸಹೋದರ ರಾಘವ ಕುಲಕರ್ಣಿಯನ್ನು ಯೆರವಾಡ ಜೈಲಿಗೆ ಹಾಕಲಾಯಿತು.
1944 ರಲ್ಲಿ ಗ್ರಾಮದ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಅಂದಿನ ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರೆಂದರೆ ಮಂತ್ರಿಗಳಿಗೂ ಹೆಚ್ಚಿನ ಸ್ಥಾನದಲ್ಲಿ ಇರುತಿದ್ದರು. ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾಗಿ ಗ್ರಾಮದ ವೀರಪ್ಪ ಸುತಗಟ್ಟಿಯವರು ಆಯ್ಕೆಯಾದರು.
 ಗ್ರಾಮದಲ್ಲಿ 11 ತಿಂಗಳು ಡೆಟೆನ್ಯೂ ಇದ್ದವರ ಯಾದಿ .
1)ಪದ್ಮರಾಜ ಭೀಮಾಜಿ ಬೋಗಾರ( 1 ವರ್ಷ)
2)ಮಲ್ಲಪ್ಪ ಸಂಗಪ್ಪ ಸಂಪಗಾಂವ (11 ತಿಂ)
3)ಮಾರೆಪ್ಪ ಬಸಪ್ಪ ಮತ್ತಿಕೊಪ್ಪ.
4)ಸೊಲಬಯ್ಯಾ ಬಸಲಿಂಗಯ್ಯಾ ಹಿರೇಮಠ .
5)ಸೋಮಪ್ಪ ಮಲ್ಲಪ್ಪ ಕಂಠಿ.
6)ಸಣ್ಣಸೋಮಪ್ಪ ಫಕೀರಪ್ಪ ಕಂಬಾರ .
7)ಬೈಲಪ್ಪ ಫಕೀರಪ್ಪ ಕಂಬಾರ .
8)ತಿಪ್ಪಣ್ಣ ಸೋಮಪ್ಪ ಹುಡೇದ .
9)ಪರಪ್ಪ ಮಲ್ಲಪ್ಪ ಹುರಳಿ (1 ವರ್ಷ)
10)ಮಲ್ಲಪ್ಪ ಫಕೀರಪ್ಪ ಕುಶಲಾಪುರ .
11)ಶಿವಲಿಂಗಪ್ಪ ರುದ್ರಪ್ಪ ಕಂಠಿ .
12)ದೊಡ್ಡಸೋಮಪ್ಪ ಫಕೀರಪ್ಪ ಕಂಬಾರ
13)ಶಂಕರಪ್ಪ ಫಕೀರಪ್ಪ ಕರೀಕಟ್ಟಿ .
14)ಬಸಪ್ಪ ಸೋಮಪ್ಪ ಯಡಾಲ .
15)ವೀರಪ್ಪ ಮಲ್ಲಪ್ಪ ಹುರಳಿ .
10 ತಿಂಗಳು ಅನುಭವಿಸಿದವರು
16)ಸೋಮಪ್ಪ ಶಿವಪ್ಪ ಚಳಕೊಪ್ಪ .
17)ಈರಪ್ಪ ಈರಪ್ಪ ಚಳಕೊಪ್ಪ .
18)ಸಿದ್ದಪ್ಪ ಬಸಪ್ಪ ಅರಬಳ್ಳಿ .
19)ವೀರಭದ್ರಪ್ಪ ರುದ್ರಪ್ಪ ಮಾಕಿ .
20)ಶೆದೆಪ್ಪ ಫಕೀರಪ್ಪ ಅರಬಳ್ಳಿ .
21)ಸಣ್ಣಯಮನಪ್ಪ ಸರ್ಜಪ್ಪ ದೋಟಿ .
11ತಿಂಗಳು.
22)ಶಿವಲಿಂಗಪ್ಪ ಪತ್ರೆಪ್ಪ ತುಪ್ಪದ .
23)ಬಸಪ್ಪ ಮಲ್ಲಪ್ಪ ಶಿರೆಣ್ಣವರ .
24)ಕಲ್ಲಪ್ಪ ಸೋಮಪ್ಪ ಮಡಿವಾಳರ .
25)ಬಸವರಾಜ ಬಸಪ್ಪ ಮತ್ತಿಕೊಪ್ಪ .
26)ಸೋಮಪ್ಪ ಬೈಲಪ್ಪ ಕಕ್ಕೇರಿ .
27)ಗೂಡೂಸಾಬ ಫಕೀರಸಾಬ ಚಂದಣ್ಣವರ .
28)ಮಲ್ಲಪ್ಪ ಬಸಪ್ಪ ಹೊಸಮನಿ .
29)ಫಕೀರಪ್ಪ ಯಲ್ಲಪ್ಪ ಮಡಿವಾಳರ .
30) ಬಸಪ್ಪ ಬಸವಂತಪ್ಪ ಹುರಳಿ .
31)ಬಸಪ್ಪ ಮುದಕಪ್ಪ ಮಾಯಣ್ಣವರ .
32)ಈರಯ್ಯ ಬಸಲಿಂಗಯ್ಯ ಹಿರೇಮಠ .
33)ಈರಪ್ಪ ಸಿದ್ದಪ್ಪ ದೋಟಿ .
10 ತಿಂಗಳು ಡೆಟೆನ್ಯೂ .
34)ಉಳವಪ್ಪ ನಿಂಗಪ್ಪ ಧಾರವಾಡ .
35)ಅಪ್ಪಣ್ಣ ದುಂಡಪ್ಪ ಗುರ್ಲಹೊಸೂರ .
36)ಬಸಪ್ಪ ರುದ್ರಪ್ಪ ಚಳಕೊಪ್ಪ .
37)ಸೋಮಪ್ಪ ಈರಪ್ಪ ಯಡಾಲ .
38)ಫಕೀರಪ್ಪ ಈರಪ್ಪ ಮಡಿವಾಳರ .
39)ತಮ್ಮಣ್ಣ ದಾನಪ್ಪ ಚನ್ನಾಳ .
40)ಉಳವಪ್ಪ ಬೈಲಪ್ಪ ಹುಂಬಿ .
41)ಯಮನಪ್ಪ ಎಲ್ಲಪ್ಪ ನಾವಲಗಿ .
42)ಶೆಟ್ಟೆಪ್ಪ ಮಾರೆಪ್ಪ ಬೋಳತ್ತೀನ .
ಅತಿ ಕಡಿಮೆ ಡೆಟೆನ್ಯೂ ಆದವರು .
43)ಸೋಮಪ್ಪ ಫಕೀರಪ್ಪ ದೊಡವಾಡ .
44)ಮುದಕಪ್ಪ ಗದಿಗೆಪ್ಪ ಕಮತಗಿ .
45)ಈರಪ್ಪ ಮರನಿಂಗಪ್ಪ ಮೇಟಿ .(ಸಿಂಗಾರ)
46)ಸೋಮಪ್ಪ ಫಕೀರಪ್ಪ ಮಡಿವಾಳರ .
47)ಕಲ್ಲಪ್ಪ ಮಲ್ಲಪ್ಪ ಬೊಳತ್ತೀನ .
48)ದೇಮಪ್ಪ ಬಸಪ್ಪ ಮತ್ತಿಕೊಪ್ಪ .
49)ಫಕೀರಪ್ಪ ಸೋಮಪ್ಪ ಕಂಬಾರ .
50)ದೇಮಪ್ಪ ಪರಸಪ್ಪ ಹುಲಮನಿ .
51)ದೇಮಪ್ಪ ಗದಿಗೆಪ್ಪ ನಾಗನೂರ .
52)ಫಕೀರಪ್ಪ ದೇಮಪ್ಪ ಬೂದಿಹಾಳ .
53)ಶ್ರೀಮತಿ ಬಾಳವ್ವ ಕೋಂ ಮಲ್ಲಪ್ಪ ಹುರಳಿ .
54)ಶ್ರೀಮತಿ ಬಸವ್ವಾ ಕೋಂ ದೇಮಪ್ಪ ಮೂಲಿಮನಿ .
55)ಶ್ರೀಮತಿ ಬಾಳವ್ವ ಕೋಂ ಎಲ್ಲಪ್ಪ ಕೋಟಗಿ .
56)ಶ್ರೀಮತಿ ಬಾಳವ್ವ ಗೌಡರ( ಗುಡಿ) .
57)ರಾಯಪ್ಪ ಗದಿಗೆಪ್ಪ ಕಮತಗಿ .
58)ಬಸಪ್ಪ ಶಿವರುದ್ರಪ್ಪ ಕಂಬಾರ .
59)ಚನ್ನಪ್ಪ ರುದ್ರಪ್ಪ ಕರಬಸಣ್ಣವರ .
60)ರಾಮಪ್ಪ ನಾವಲಗಿ .
61)ಈರಪ್ಪ ರುದ್ರಪ್ಪ ಬಾಗೋಡಿ .
62)ರಾಮಚಂದ್ರ ಕುಬೇರಪ್ಪ ಬೋಗಾರ .
63)ರುದ್ರಪ್ಪ ಚನಬಸಪ್ಪ ಹುಂಡೇಕಾರ .
64)ಸೋಮಪ್ಪ ಮೂಗಬಸಪ್ಪ ಇಂಗಳಗಿ(ಕಾಗಿ)
65)ಗಂಗಪ್ಪ ಜೋಬಾಳಿ .
66)ಮೂಗಪ್ಪ ಗುರುಪಾದಪ್ಪ ಶಿದ್ನಾಳ .
67)ಮುನೆನಾಯ್ಕ ಶಿವನಾಯ್ಕ ಪಾಟೀಲ .
68)ಬಸಪ್ಪ ಮೂಗಪ್ಪ ಮೂಗಬಸ .
69)ಫಕೀರಪ್ಪ ಲೇಶಪ್ಪ ಆರೇರ .
70)ಗಂಗಪ್ಪ ಬಸಪ್ಪ ಕುಂಬಾರ .
71)ಮಲ್ಲಪ್ಪ ರಾಯಪ್ಪ ಬೋಳತ್ತೀನ .
72)ಅಪ್ಪಣ್ಣ ಬಸಪ್ಪ ನೇಸರಗಿ .
73)ಮಲ್ಲಪ್ಪ ಶಿದ್ಲಿಂಗಪ್ಪ ವಿವೇಕಿ .
74)ರಾಮಪ್ಪ ಬಾಳಪ್ಪ ಮೂಗಬಸ/ದೊಡ್ಡನಿಂಗಪ್ಪ
75)ಗುರುಪಾದಯ್ಯ ದೊಡ್ಡಯ್ಯ ಹಿರೇಮಠ .
76)ಮಲ್ಲಪ್ಪ ಹೊನ್ನಪ್ಪ ವಿವೇಕಿ .
77)ದಸ್ಕೀರಸಾಬ ಬಾಬಾಸಾಬ ಜಮಾದಾರ .
78)ಚನಬಸಪ್ಪ ನಿಂಗಪ್ ಬಾಳೆಕುಂದರಗಿ .
79)ಬೈಲಪ್ಪ ಬಸಪ್ಪ ಹುಂಬಿ .
80)ಸೋಮಪ್ಪ ದೇಮಪ್ಪ ಮೂಗಬಸ .
81)ಶಿವಲಿಂಗಪ್ಪ ಗದಿಗೆಪ್ಪ ಮತ್ತಿಕೊಪ್ಪ .
82)ಬಸಪ್ಪ ಬೈಲಪ್ಪ ಹುಂಬಿ .
83)ಮಲ್ಲಪ್ಪ ಸಿದ್ದಪ್ಪ ದೋಟಿ .
84)ಮಲ್ಲಪ್ಪ ಬಸವಂತಪ್ಪ ವಿವೇಕಿ .
85)ಈರಪ್ಪ ಶಿವರುದ್ರಪ್ಪ ಕಂಬಾರ .
86)ಗೊಡಚಪ್ಪ ವೀರಭದ್ರಪ್ಪ ಕಂಬಾರ .
87)ಶಿವಪ್ಪ ಬಸಪ್ಪ ಹುಂಬಿ .
88)ಕಾರೆಪ್ಪ ಬಸವಣ್ಣೆಪ್ಪ ಮೂಗಬಸವ .
89)ಪರವಯ್ಯ ಸೋಮಯ್ಯ ಪೂಜೇರಿ
90)ದೊಡ್ಡಯಮನಪ್ಪ ಸರ್ಜಪ್ಪ ದೋಟಿ
91)ಕರಿಮಲ್ಲಪ್ಪ ರಾಯಪ್ಪ ವಿವೇಕಿ .
92)ಬಸಪ್ರಭಪ್ಪ ಸೋಮಪ್ಪ ದಾಡಿಗುಂಡಿ .
93)ಪರಪ್ಪ ಶಿವಪ್ಪ ಕುಂಬಾರ .
94)ಘೂಳಪ್ಪ ಬಸಪ್ಪ ಕುಂಬಾರ .
95)ಸಂಗಪ್ಪ ದೇಮಪ್ಪ ಮೂಲಿಮನಿ .
ಲೇಖಕರು ಎಫ್.ಎಸ್.ಸಿದ್ದನಗೌಡರ (ಹೊಸೂರ)
ಹವ್ಯಾಸಿ ಲೇಖಕರು