Belagavi News In Kannada | News Belgaum

ಲಾರಿ ಹರಿದು ನಿಪ್ಪಾಣಿ ಕುರಿಗಾಹಿ-18 ಕುರಿಗಳು ಸಾವು

ಕೊಪ್ಪಳ: ಲಾರಿ ಹರಿದು 18 ಕುರಿಗಳು ಸೇರಿದಂತೆ  ಓರ್ವ ಕುರಿಗಾಹಿಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಮದಲಗಟ್ಟಿ ಗ್ರಾಮದ ಬಳಿ ಗಜೇಂದ್ರಗಡ ರಸ್ತೆಯಲ್ಲಿ ಶನಿವಾರ ನಡೆದಿದೆ.

ಮೃತ ಕುರಿಗಾಹಿ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕು ಅಪ್ಪುಗೋಳ ಗ್ರಾಮದ ಸಿದ್ದಪ್ಪ ಅಪ್ಪಣ್ಣ ಹೆಗಡೆ (38) ಎಂದು ಗುರುತಿಸಲಾಗಿದ್ದು, 18 ಕುರಿಗಳು ಸ್ಥಳದಲ್ಲೇ ಅಸು ನೀಗಿವೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ವಾಹನ ಸಮೇತ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.//////