Belagavi News In Kannada | News Belgaum

ಬಿಜೆಪಿ ಯುವ ಮೋರ್ಚಾ ವತಿಯಿಂದ ಬೈಕ್ ರ್ಯಾಲಿ

ಗೋಕಾಕ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡ ಬೈಕ್ ರ್ಯಾಲಿಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಪುತ್ರ ಕೆ.ಎಂ.ಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಭಾಗವಹಿಸಿದರು.
ತಾಲೂಕಿನ ಬೆಣಚಿನಮರಡಿ ಗ್ರಾಮದಿಂದ ಪ್ರಾರಂಭವಾದ ಬೈಕ್ ರ್ಯಾಲಿ ಗೋಕಾಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಗರದ ಬಿಜೆಪಿ ಕಚೇರಿಯಲ್ಲಿ ಮುಕ್ತಾಯಗೊಂಡಿತು. ಬೈಕ ರ್ಯಾಲಿಯಲ್ಲಿ ಬಿಜೆಪಿ ಕಾರ್ಯಕರ್ತರು, ಅಮರನಾಥ ಜಾರಕಿಹೊಳ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಬೈಕಗಳ ಜೊತೆಗೆ ಭಾಗವಹಿಸಿದರು.
ಬೈಕ್ ರ್ಯಾಲಿ ನಡೆಯುವ ಸಂದರ್ಭದಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದ್ದರು ಸಹ ಅಮರನಾಥ ಜಾರಕಿಹೊಳಿ ಅವರು ಬುಲೇಟ್ ಸವಾರಿ ಮಾಡುತ್ತ ರ್ಯಾಲಿಯಲ್ಲಿ ಪಾಲ್ಗೊಂಡರು, ನೆರೆದ ಯುವಕರು ದಾರಿಯೂದ್ದಕ್ಕೂ “ಭಾರತ ಮಾತಾಕೀ ಜೈ” ಎಂಬ ದೇಶಪ್ರೇಮದ ಘೋಷಣೆಗಳನ್ನು ಕೂಗುತ್ತ ಸುಮಾರು 18 ಕೀ.ಮೀ ಕ್ರಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಲ ಅಧ್ಯಕ್ಷರುಗಳಾದ ಭೀಮಶಿ ಭರಮನ್ನವರ, ರಾಜೇಂದ್ರ ಗೌಡಪ್ಪಗೊಳ, ಶಾಸಕ ಆಪ್ತಸಹಾಯಕ ಸುರೇಶ ಸನದಿ, ಹನಮಂತ ದುರ್ಗನ್ನವರ, ಯುವ ಮೋರ್ಚಾ ಅಧ್ಯಕ್ಷರುಗಳಾದ ಮಂಜು ಪ್ರಭುನಟ್ಟಿ, ಆನಂದ ಅತ್ತುಗೋಳ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.///////