Belagavi News In Kannada | News Belgaum

ವ್ಯಕ್ತಿತ್ವ ರೂಪಿಸುವಲ್ಲಿ ಗ್ರಂಥಾಲಯಗಳ ಪಾತ್ರ ಮಹತ್ವದ್ದು: ರಾಮಯ್ಯ

 

 ಬೆಳಗಾವಿ: ವಿದ್ಯಾರ್ಥಿ ದೆಸೆಯಲ್ಲಿ ಗ್ರಂಥಾಲಯದಲ್ಲಿ ಸಮಯ ಕಳೆದುಶಿಸ್ತಿನಿಂದ ಅಧ್ಯಯನ ಮಾಡಿ ವಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ನಗರ ಕೇಂದ್ರ ಗ್ರಂಥಾಲಯ ಬೆಳಗಾವಿಯ ಉಪನಿರ್ದಶಕರಾದ ಶ್ರೀ ರಾಮಯ್ಯ ಅವರು ಹೇಳಿದರು.ಅವರು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯಸಂಗೊಳ್ಳಿ ರಾಯಣ್ಣ ಘಟಕ ಮಹಾ ವಿದ್ಯಾಲಯ,ಬೆಳಗಾವಿಯಲ್ಲಿ ದಿ.11 ರಂದು ನಡೆದರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ”  ಕಾರ್ಯಕ್ರಮದ ಅಂಗವಾಗಿ ನಡೆದ ವಿಚಾರ ಸಂಕೀರ್ಣದಲ್ಲಿ  ಮಾತನಾಡುತ್ತಿದ್ದರು. ‘ಸಾರ್ವಜನಿಕ ಗ್ರಂಥಾಲಯಗಳ ವ್ಯವಸ್ಥಿತ ಉಪಯೋಗವಿಷಯದ ಬಗ್ಗೆ ಮಾತನಾಡುತ್ತ,ಅಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆ ಸೌಲಭ್ಯಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆನೀಡಿದರು.

 

      ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪ್ರಾಚಾರ್ಯರಾದ ಡಾ. ಎಸ್ ಎಸ್  ತೇರದಾಳ ಅವರು, ತಾವೂ ಸಹ ಸಾರ್ವಜನಿಕ ಗ್ರಂಥಾಲಯ ಗಳ ಸೌಲಭ್ಯಗಳ ಉಪಯೋಗ ಪಡೆದುಕೊಂಡ ಬಗ್ಗೆ ನೆನೆದು,ನೀವೆಲ್ಲರೂ ಗ್ರಂಥಾಲಯಗಳಲ್ಲಿ ನಿಯಮಿತವಾಗಿ ಸಮಯ ಕಳೆದು, ಯಶಸ್ವಿ ಆಗಬೇಕೆಂದು ಕಿವಿಮಾತು ಹೇಳಿದರು.ಮಹಾವಿದ್ಯಾಲಯದ ಗ್ರಂಥ ಪಾಲಕರಾದ ಡಾ. ಸುಮನ್ ಮುದ್ದಾಪೂರ ಅವರು ಪ್ರಾಸ್ತಾವಿಕ ವಾಗಿ ಮಾತನಾಡುತ್ತ, ಎಲ್ಲರನ್ನೂ ಸ್ವಾಗತಿಸಿ, ಗ್ರಂಥ ಪಾಲಕರ ದಿನಾಚರಣೆಆಚರಣೆ ಬಗ್ಗೆ, ಗ್ರಂಥಾಲಯ ವಿಜ್ಞಾನ ಕ್ಷೇತ್ರಕ್ಕೇ ರಂಗನಾಥನ್ ಅವರ ಕೊಡುಗೆಗಳನ್ನು ನೆನೆದರು.

 

    ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ.ರಾಜು ಗಡಾದ ಅವರುಜೋಟರೋಸಾಫ್ಟ್ ವೇರ್ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಮತ್ತೋರ್ವ ಅಥಿತಿಗಳಾದ ಪ್ರಕಾಶ ಇಚಲಕರಂಜಿ ಅವರುಡಿಜಿಟಲ್ ಸಾರ್ವಜನಿಕ ಗ್ರಂಥಾಲಯಬಗ್ಗೆ, ಮತ್ತು  ನೋಂದಣಿ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ವಿಧ್ಯಾರ್ಥಿಗಳು ಮೊದಲಿಗೆ ಪ್ರಾರ್ಥನೆ ಮಾಡಿದರು. ರಾಕೇಶ್ ಕರೆಗಾರ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಿಬ್ಬಂದಿ, ಗ್ರಂಥಾಲಯ ಸಿಬ್ಬಂದಿ, ವಿಧ್ಯಾರ್ಥಿಗಳು ಹಾಜರಿದ್ದರು.