Belagavi News In Kannada | News Belgaum

ಕೆ ಎಚ್ ಬಿ ಕಾಲೋನಿಯಲ್ಲಿ ಧ್ವಜಾರೋಹಣ

ಕೆ ಎಚ್ ಬಿ ಕಾಲೋನಿಯಲ್ಲಿ ಧ್ವಜಾರೋಹಣ

ಬೆಳಗಾವಿ ನಗರದ ಕಣಬರ್ಗಿಯ ಕೆಎಚ್‍ಬಿ ಕಾಲೋನಿಯಲ್ಲಿ ಶನಿವಾರ ಕಾಲೋನಿಯ ನಾಗರಿಕ ಕಲ್ಯಾಣ ಮತ್ತು ಅಭಿವೃದ್ಧಿ ಸಂಘ ಹಾಗೂ ಸಂಸ್ಕøತಿ ಮಹಿಳಾ ಮಂಡಳವತಿಯಿಂದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ಯ ಧ್ವಜಾರೋಹಣ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಘದ ಅಧ್ಯಕ್ಷರಾದ ಆರ್ ವಿ ಮಳಲಿ ಅವರು ಧ್ವಜಾರೋಹಣವನ್ನು ಮಾಡಿದರು. ಪದಾಧಿಕಾರಿಗಳಾದ ಬಸವರಾಜ್ ವನ್ನೂರ್ ಅವರು ಭಾರತಕ್ಕೆ ಸ್ವಾತಂತ್ರ್ಯವು ಹೋರಾಟದ ಮೂಲಕ ಬಂದುದು. ಸಹಸ್ರಾರು ಸ್ವಾತಂತ್ರ್ಯ ಸೇನಾನಿಗಳ ತನು-ಮನ-ಧನವನ್ನು ಅರ್ಪಿಸಿದ್ದಾರೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಜಿ ಎಸ್ ಸೋನಾರ ನಿರೂಪಿಸಿದರು. ನಾಗರಾಜ ಪಾಟೀಲ್ ಸ್ವಾಗತಿಸಿದರು. ಉಮೇಶ ಮೂಲಿಮನಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಸಲಹಾ ಸಮಿತಿಯ ಸದಸ್ಯರು, ನಾಗರಿಕರು ಉಪಸ್ಥಿತರಿದ್ದರು.