Belagavi News In Kannada | News Belgaum

ಹಳಿಯಾಳದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ತನ್ನ 17ನೇ ಎಕ್ಸೆಲೆನ್ಸ್ ಸೆಂಟರ್ ಉದ್ಘಾಟನೆ

ಹಳಿಯಾಳದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ತನ್ನ 17ನೇ ಎಕ್ಸೆಲೆನ್ಸ್ ಸೆಂಟರ್ ಉದ್ಘಾಟನೆ
ತಳಮಟ್ಟದಿಂದ ಕೌಶಲ್ಯ ಅಭಿವೃದ್ಧಿ ಮೂಲಕ “ಸ್ಕಿಲ್ ಇಂಡಿಯಾ ಮಿಷನ್”ಗೆ ಕೊಡುಗೆ

ಬೆಳಗಾವಿ : ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಹಳಿಯಾಳದ ಕೆಎಲ್‍ಎಸ್ ವಿಶ್ವನಾಥ ರಾವ್ ದೇಶಪಾಂಡೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೆಂಟರ್ ಆಫ್ ಎಕ್ಸೆಲೆನ್ಸ್ ಅನ್ನು ಸ್ಥಾಪಿಸುವುದಾಗಿ ಘೋಷಿಸಿದೆ.
ಇದು ಕರ್ನಾಟಕ ರಾಜ್ಯದಲ್ಲಿ 17ನೇ ಕೇಂದ್ರವಾಗಿದೆ. ಪವರ್ ಟ್ರೇನ್ ಮತ್ತು ಅದರ ಕಾರ್ಯ ನಿರ್ವಹಣೆಯ ಕುರಿತು ವಿದ್ಯಾರ್ಥಿಗಳಿಗೆ ಆನ್ ಹ್ಯಾಂಡ್ ಅನುಭವವನ್ನು ನೀಡುವ ಗುರಿಯನ್ನು ಹೊಂದಲಾಗಿದ್ದು, ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಎಂಜಿನ್ ಅನ್ನು ಜೋಡಿಸಲು ಮತ್ತು ಬೇರ್ಪಡಿಸುವ ಜೊತೆಗೆ ಆಟೋಮೊಬೈಲ್ ಪವರ್ ಟ್ರೇನ್ ಗಳ ಬಗ್ಗೆಅತ್ಯುತ್ತಮವಾಗಿ ಅರ್ಥಮಾಡಿಕೊಳ್ಳಲು ಒಂದು ಅವಕಾಶವಾಗಿದೆ.
ಟೊಯೊಟಾದ ಬೆಂಬಲದ ಬಗ್ಗೆ ಮಾತನಾಡಿದ ಕೆಎಲ್‍ಎಸ್ ವಿಡಿಐಟಿಯ ಆಡಳಿತ ಮಂಡಳಿಯ ಅಧ್ಯಕ್ಷ ವಿನಾಯಕ ಲೋಕೂರ್ ಅವರು, ವಿಶ್ವದಾದ್ಯಂತ ವಾಹನ ತಂತ್ರಜ್ಞಾನಗಳನ್ನು ಪ್ರವರ್ತಿಸುವಲ್ಲಿ ಮುಂಚೂಣ ಯಲ್ಲಿರುವ ಟೊಯೊಟಾದೊಂದಿಗೆ ಸಹಕರಿಸಲು ನಾವು ತುಂಬಾ ಸಂತೋಷ ಪಡುತ್ತೇವೆ. ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಆಟೋಮೊಬೈಲ್ ವಲಯಕ್ಕೆ ನಮ್ಮ ವಿದ್ಯಾರ್ಥಿಗಳನ್ನು ಉದ್ಯಮ-ಸಿದ್ಧ ಮತ್ತು ಉದ್ಯೋಗಾರ್ಹರನ್ನಾಗಿ ಮಾಡಲು ಈ ರೀತಿಯ ಉಪಕ್ರಮಗಳು ಅತ್ಯಗತ್ಯ ಎಂದು ತಿಳಿಸಿದರು.
ಟಿಕೆಎಂನ ಉಪಾಧ್ಯಕ್ಷ ಆರ್. ವೆಂಕಟಕೃಷ್ಣನ್ ಅವರು “ಒಂದು ಸಂಸ್ಥೆಯಾಗಿ, ಉದಯೋನ್ಮುಖ ಕೌಶಲ್ಯದ ಲ್ಯಾಂಡ್ ಸ್ಕೇಪ್ ಮತ್ತು ಔಪಚಾರಿಕ ತರಬೇತಿ ಮಾರ್ಗಗಳಲ್ಲಿ ಅಸ್ತಿತ್ವದಲ್ಲಿರುವ ಅಂತರಗಳನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಕಂಪನಿಯು ಇತ್ತೀಚೆಗೆ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆಯ (ಟಿಟಿಟಿಐ) ಎರಡನೇ ಹಂತವನ್ನು ಘೋಷಿಸಿದೆ. ಇದು ಸುಧಾರಿತ ವಾಹನ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಕೌಶಲ್ಯಗೊಳಿಸುವ ದೃಷ್ಟಿಯಿಂದ ಕೌಶಲ್ಯ ಮೂಲಸೌಕರ್ಯದ ಪ್ರಮುಖ ವರ್ಧನೆಯನ್ನು ಒಳಗೊಂಡಿದೆ ಎಂದರು.
ಕರ್ನಾಟಕ ಕಾನೂನು ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹಳಿಯಾಳ, ಈ ಸಂಸ್ಥೆಯನ್ನು 2004 ರಲ್ಲಿ ಸ್ಥಾಪಿಸಲಾಯಿತು. ಈ ಸಂಸ್ಥೆಯು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದ. ನವದೆಹಲಿಯ ಎಐಸಿಟಿಇಯಿಂದ ಅನುಮೋದಿಸಲ್ಪಟ್ಟಿದೆ ಮತ್ತು ಯುಜಿಸಿ ಕಾಯ್ದೆ, 1956 ರ ಸೆಕ್ಷನ್ 2 (ಎಫ್) ಅಡಿಯಲ್ಲಿ ಮಾನ್ಯತೆ ಪಡೆದಿದೆ.
ಪ್ರಾಂಶುಪಾಲ ಡಾ.ವಾದಿರಾಜ ಕುಲಕಣ ್, ಹಿರಿಯ ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.