Belagavi News In Kannada | News Belgaum

ರಾಜಾಪೂರ ಬ್ಯಾರೇಜ್ ಗೆ 1.89.098 ಕ್ಯೂಸೆಕ್‌ ನೀರು

ಚಿಕ್ಕೋಡಿ : ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶಗಳಲ್ಲಿಯೂ ಬಾನುವಾರ ಮಳೆ ಕ್ಷೀಣಿಸಿದೆ. ಹೀಗಾಗಿ ಕೃಷ್ಣಾ ನದಿ ಸೇರಿದಂತೆ ಉಪನದಿಗಳಿಗೆ ಹರಿದು ಬರುವ ನೀರಿನ ಪ್ರಮಾಣದಲ್ಲಿಯೂ ಕಡಿಮೆಯಾಗಿದೆ. ಆದರೂ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಬಾನುವಾರವೂ ಏರಿಕೆ ಕಂಡು ಬಂದಿದೆ.

ರಾಜಾಪೂರ ಬ್ಯಾರೇಜ್ ಮುಖಾಂತರ 1.89.098  ಕ್ಯೂಸೆಕನಷ್ಟು ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ 11957 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ. ಆದರೆ ಕೃಷ್ಣಾ ನದಿಗೆ ಹರಿದು ಬರುವ ನೀರಿಗಿಂತ ಹೆಚ್ಚು ನೀರನ್ನು ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್‍ದಿಂದ ಬಾನುವಾರ 1,83 ಲಕ್ಷ ಕ್ಯುಸೆಕ್ ನೀರನ್ನು ಆಲಮಟ್ಟಿಗೆ ಬಿಡಲಾಗುತ್ತಿದ್ದು, ಆಲಮಟ್ಟಿ ಜಲಾಶಯದಿಂದ 2,25 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

ಹೀಗಾಗಿ ಈ ಭಾಗದ ನದಿ ತೀರದ ಜನರಿಗೆ ಸದ್ಯಕ್ಕೆ ಪ್ರವಾಹದ ಬೀತಿ ಇಲ್ಲ. ಆದರೂ ನದಿ ತೀರದ ಗ್ರಾಮಗಳ ಹೊರವಲಯದಲ್ಲಿರುವ ಮನೆಗಳ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಪ್ರವಾಹ ಬಂದರೇ ತಕ್ಷಣ ಸುರಕ್ಷಿತ ಸ್ಥಳಗಳಿಗೆ ಹೋಗಲು ಸಿದ್ದರಿರುವಂತೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ನದಿ ತೀರದಲ್ಲಿಯೇ ಇದ್ದು ನಿಗಾವಹಿಸುತ್ತಿದ್ದಾರೆ. ಒಂದು ವೇಳೆ ಪ್ರವಾಹ ಬಂದಲ್ಲಿ ತಕ್ಷಣ ಜನರಲ್ಲಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ತಿಳಿಸಿದರು.

ಮಹಾರಾಷ್ಟ್ರ ಮಳೆ ವಿವರ: ಕೋಯ್ನಾ-62 ಮಿಮೀ, ನವಜಾ-44 ಮಿಮೀ, ಮಹಾಬಳೇಶ್ವರ-80 ಮಿಮೀ, ವಾರಣಾ-44 ಮಿಮೀ, ಕಾಳಮ್ಮವಾಡಿ-41 ಮಿಮೀ, ರಾಧಾನಗರಿ-62 ಮಿಮೀ, ಪಾಟಗಾಂವ-35 ಮಿಮೀ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.//////