Belagavi News In Kannada | News Belgaum

ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ ತೆರಳಿದ ಗೋಕಾಕ ಕೈ ಕಾರ್ಯಕರ್ತರು

ಗೋಕಾಕ: ಬೆಂಗಳೂರಿನಲ್ಲಿ ನಡೆಯುತ್ತಿರುವ 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪಾದಯಾತ್ರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಗೋಕಾಕ ಮತಕ್ಷೇತ್ರದಿಂದ ನೂರಾರು ಕಾರ್ಯಕರ್ತರು ತೆರಳುವ ವಾಹನಕ್ಕೆ ಮುಖಂಡರಾದ ಪಾಂಡು ಮನ್ನಿಕೇರಿ, ಶಿವು ಪಾಟೀಲ ಚಾಲನೆ ನೀಡಿದರು.
ಸ್ವಾತಂತ್ರೋತ್ಸವದ 75ನೇ ವರ್ಷಾಚರಣೆ ವೇಳೆ ನಾಳೆ ಕಾಂಗ್ರೆಸ್ “ಸ್ವಾತಂತ್ರ ನಡಿಗೆ”ಗೆ ಕಾರ್ಯಕ್ರಮ, ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೆ ನಾಳೆ ಬೃಹತ್ ಪಾದಯಾತ್ರೆ ಆಯೋಜನೆಗೊಂಡಿದ್ದು ಗೋಕಾಕ ಮತಕ್ಷೇತ್ರದಿಂದ  “ಸ್ವಾತಂತ್ರ್ರ ನಡಿಗೆ”ಗೆ ನೂರಾರು ಕಾರ್ಯಕರ್ತರು ತೆರಳಿದರು.
ಈ ಸಂದರ್ಭದಲ್ಲಿ ವಿಠ್ಠಲ ಪರಸನ್ನವರ, ಲಗಮನ್ ಕಳ್ಳಸನವರ, ಸಂಜು ಪೂಜಾರಿ, ಶಿವು ಕಿಲಾರಿ, ಸುರೇಶ ಮುದ್ದಪ್ಪಗೋಳ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು./////