Belagavi News In Kannada | News Belgaum

ಐತಿಹಾಸಿಕ ಕಿತ್ತೂರು ಕೋಟೆಗೆ ವಿದ್ಯಾರ್ಥಿಗಳ ಭೇಟಿ

ಬೆಳಗಾವಿ : ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ 75ನೇ ಹುಟ್ಟುಹಬ್ಬದ ನಿಮಿತ್ತವಾಗಿ ಕಿತ್ತೂರು ರಾಣಿ ಚೆನ್ನಮ್ಮಳ ಕೋಟೆ ವೀಕ್ಷಣೆಗಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಲಾಗಿತ್ತು.
ಚಿಕ್ಕೋಡಿ ತಾಲೂಕಿನ ಯಾದವಾಡ, ಅಂಕಲಿ, ಗಳತಗಾ ಮತ್ತು ಕೆರೂರ ಗ್ರಾಮಾಂತರ ಶಾಲೆಗಳ ಸುಮಾರು 150 ವಿದ್ಯಾರ್ಥಿಗಳು ಭೇಟಿ ನೀಡಿದರು. 1824 ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟದ ಬೆಳ್ಳುಚುಕ್ಕಿ ರಾಣಿ ಚೆನ್ನಮ್ಮ ಜೀವನವನ್ನು ಅರಿತುಕೊಂಡರು. 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಿತ್ತೂರ ಚೆನ್ನಮ್ಮಳ ಸಾಹಸವನ್ನು ತಿಳಿದುಕೊಂಡರು./////