Belagavi News In Kannada | News Belgaum

ಭಾರತವನ್ನು ವಿಶ್ವಗುರುವನ್ನಾಗಿಸಲು ಮುಂದಾಗಿ: ಹುಕ್ಕೇರಿ ‌ಶ್ರೀಗಳು

ಬೆಳಗಾವಿ: ದೇಶ ನನಗೇನು ಮಾಡಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನು ಏನು ಮಾಡಿದೆ ಎನ್ನುವುದು ಮುಖ್ಯ. ಎಲ್ಲರೂ ದೇಶ ಭಕ್ತರಾಗುವ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿಸೋಣ. ಇವತ್ತು ಜಾತಿ, ಮತ, ಪಂಗಡ ಎಲ್ಲವನ್ನೂ ಮೀರಿ ನಾವೇಲ್ಲರೂ ಭಾರತೀಯರು ಎನ್ನುವ ಮನೋಭಾವದಿಂದ ಎಲ್ಲರೂ ಬದಕುವ ಅವಶ್ಯಕತೆ ಇದೆ ಎಂದು ಹುಕ್ಕೇರಿ ಹಿರೇಮಠ ‌ಶ್ರೀ‌ ಚಂದ್ರಶೇಖರ ‌ಶಿವಾಚಾರ್ಯ ಸ್ವಾಮೀಜಿ‌‌ ಹೇಳಿದರು.
ಭಾನುವಾರ ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಇಡೀ ದೇಶದಲ್ಲಿ ಎಲ್ಲರೂ ಸಂತೋಷದಿಂದ ಆಚರಿಸುತ್ತಿದ್ದಾರೆ. ಇದು ಅಭಿಮಾನದ ಸಂಗತಿ. ದೇಶಕ್ಕಾಗಿ ಎಲ್ಲರೂ ಮುಂದೆ ನಿಲ್ಲಬೇಕು. ದೇಶಕ್ಕೆ ಆಪತ್ತು ಬಂದಾಗ ಒಗ್ಗಟ್ಟಿನಿಂದ ಎಲ್ಲರೂ ವಿರೋಧಿಸಬೇಕು. ಅಂದಾಗ ಮಾತ್ರ ದೇಶಕ್ಕೆ ಭವಿಷ್ಯ ಇದೆ ಎಂದರು.
ಈ ಸಂದರ್ಭದಲ್ಲಿ ಕಟಕೋಳ ಎಂ ಚಂದರಗಿ ಹಿರೇಮಠದ ಉತ್ತರಾಧಿಕಾರಿಯಾದ ಶ್ರೀ ರೇಣುಕ‌ಗಡದೇಶ್ವರ ದೇವರು, ಕರ್ನಾಟಕ ಆಗಮ ಪಂಡಿತರಾದ ವಿದ್ವಾನ್ ಚಂದ್ರಶೇಖರ ಶಾಸ್ತ್ರೀಗಳು, ಚಂದರಗಿಯ ಗಂಗಾಧರಯ್ಯ ಹಿರೇಮಠ, ಸದಾಶಿವ ಹಿರೇಮಠ, ಮಹಾಂತೇಶ ಶಾಸ್ತ್ರೀ, ಚಿಕ್ಕೋಡಿಯ ಚೇತನಕುಮಾರ ಸೇರಿದಂತೆ ಇನ್ನಿತರರು ‌ಉಪಸ್ಥಿತರಿದ್ದರು.///////