Belagavi News In Kannada | News Belgaum

ಸಮಾಜ ಪ್ರಗತಿ ಹೊಂದಲು ಅಲ್ಲಿಯ ಮಹಿಳೆಯರ ಪಾಲ್ಗೊಳ್ಳಯುವಿಕೆ ಪ್ರಮುಖ ಪಾತ್ರ ವಹಿಸುತ್ತದೆ…..

ಬೆಳಗಾವಿ : “ಯಾವುದೇ ಮನೆ, ದೇಶ ಅಥವಾ ಸಮಾಜ ಪ್ರಗತಿ ಹೊಂದಲು ಅಲ್ಲಿಯ ಮಹಿಳೆಯರ ಪಾಲ್ಗೊಳ್ಳಯುವಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಆ ನಿಟ್ಟಿನಲ್ಲಿ ಶ್ರೀ ಸಾಯಿ ಕೌಶಲ್ಯ ತರಬೇತಿ ಕೇಂದ್ರವು ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಹಾಗೂ ಬ್ಯುಟಿ ಪಾರ್ಲರ್ ತರಬೇತಿಯನ್ನು ಉಚಿತವಾಗಿ ನೀಡುತ್ತಿರುವುದು ಶ್ಲಾಘಣೀಯ” ಎಂದು ಬೆಳಗಾವಿಯ ಸುರೇಶ ಯಾದವ ಫೌಂಡೇಶನ್ ಹಾಗೂ ಆಟೋನಗರ ಇಂಡಸ್ಟ್ರಿಯಲ್ ಏರಿಯಾ ಅಸೋಸಿಯೇಷನ್ ಅಧ್ಯಕ್ಷ ಸುರೇಶ ಯಾದವ ಅಭಿಪ್ರಾಯ ಪಟ್ಟರು.
ನಗರದ ವಡಗಾವಿಯ ಶ್ರೀ ಸಾಯಿ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಜರುಗಿದ ಉಚಿತ ಹೊಲಿಗೆ ಹಾಗೂ ಬ್ಯುಟಿ ಪಾರ್ಲರ್ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, “ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸ್ವಾವಲಂಬಿ ಬದುಕಿಗೆ ಮಹಿಳೆಯರು ಮಾದರಿಯಾಗಿದ್ದಾರೆ” ಎಂದು ಹೇಳಿದರು.
ನಿರುದ್ಯೋಗಿ ಮೂವತ್ತೈದು ಮಹಿಳೆಯರು ಹೊಲಿಗೆ ತರಬೇತಿಗೆ ಹಾಗೂ ಮೂವತ್ತೈದು ಮಹಿಳೆಯರು ಬ್ಯುಟಿ ಪಾರ್ಲರ್ ತರಬೇತಿಗೆ ಆಯ್ಕೆಯಾದರು.
ಶ್ರೀ ಸಾಯಿಶ್ರದ್ಧಾ ಮಹಿಳಾ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ಸವಿತಾ ಹೆಬ್ಬಾರ ಹಾಗೂ ಮಲ್ಹಾರ ದೀಕ್ಷಿತ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ತರಬೇತಿ ಕೇಂದ್ರದ ಅಧ್ಯಕ್ಷ ಸುಭಾಷ ಗೌಡರ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತರಬೇತಿ ಕೇಂದ್ರದ ಮುಖ್ಯಸ್ಥೆ ನಂದಿನಿ ಪಾಟೀಲ, ಕೃಷ್ಣ ನಾಯಕ, ಜಾಫರ್ ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
ತರಬೇತಿಯ ಅಭ್ಯರ್ಥಿ ಅಕ್ಷತಾ ಪಾಟೀಲ ಸ್ವಾಗತಿಸಿದರು. ಪ್ರಣಾಲಿ ಕಾಂಬಳೆ ಕಾರ್ಯಕ್ರಮ ನಿರ್ವಹಿಸಿದರು.//////