Belagavi News In Kannada | News Belgaum

“ಜನ್ಮ ಭೂಮಿ” ರಚನೆಗೀತಾ ಬ ಪೂಜಾರ.

“ಜನ್ಮ ಭೂಮಿ”

ಜನಿಸಿ ಬಂದೆ ಭರತ ಭೂಮಿಯಲಿ
ದೇಶಪ್ರೇಮವಿದೆ ನೆತ್ತರಿನಲಿ
ಶರಣಾಗಿಹೆನು ಭಾರತಾಂಬೆಗೆ
ಸಲಹುತಿರುವ ಹೆಮ್ಮೆಯ ಮಾತೆಗೆ.

ಸಂಸ್ಕೃತಿಯಲಿ ಹೊಳೆಯುತಿಹಳು
ಜಾತಿ ಧರ್ಮ ಭಾಷೆಯಲಿ ಸಮೃದ್ಧಳು
ನಿಸರ್ಗ ಸೌಂದರ್ಯದ ಸುಸಂಪನ್ನಳು
ಜನನಿ ಜನ್ಮಭೂಮಿ ನನ್ನವಳು.

ಭಕ್ತಿಯ ಸಿಂಚನವ ಹರಿಸುವೆ
ದಿವ್ಯಮಾತೆಯ ಆರಾಧಿಸುವೆ
ಧೀರಯೋಧರ ಅಭಿನಂದಿಸುವೆ
ತಾಯ ಮಡಿಲಿನ ಕೂಸು ನಾನಾಗಿರುವೆ.

ಸತ್ಯ ಶಾಂತಿ ಧೈರ್ಯ ತ್ಯಾಗದ ಸಂಕೇತ
ತ್ರೀವರ್ಣ ಧ್ವಜದ ನನ್ನ ಭಾರತ
ಸಾರಿದೆ ಭಾವೈಕ್ಯತೆಯ ಸಂದೇಶ
ಪುಣ್ಯ ಭೂಮಿಯ ಭವ್ಯ ದೇಶ.

ಹೋರಾಟಗಾರರ ಬೆವರಿನಲಿ
ಸೈನಿಕರ ಸಾಧಕರ ಪರಿಶ್ರಮದಲಿ
ಸ್ವಾತಂತ್ರ್ಯ ಜ್ಯೋತಿ ಬೆಳಗಿದೆ
ಅಮೃತ ಮಹೋತ್ಸವ ಸಿಂಗರಿಸಿದೆ.

ರಚನೆ
ಕುಮಾರಿ. ಗೀತಾ ಬ ಪೂಜಾರ.
ಹಾವೇರಿ.