Belagavi News In Kannada | News Belgaum

ರುಕ್ಮಿಣಿ ನಗರ: ವೈಭವದ ಸ್ವಾತಂತ್ರ್ಯದ ಅಮೃತ ಮಹೋತ್ಸವ

ಬೆಳಗಾವಿ : ಬೆಳಗಾವಿ ನಗರ ವಲಯದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ರುಕ್ಮಿಣಿ ನಗರದಲ್ಲಿ ಸೋಮವಾರ ಅಜಾದಿ ಅಮೃತ ಮಹೋತ್ಸವದ ಅಂಗವಾಗಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ನಿವೃತ್ತ ಸೈನಿಕ ರಾಜೇಂದ್ರ ಹಲಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಪ್ರಧಾನ ಗುರು ರಾಜೇಂದ್ರ ಪಿ. ಗೋಶಾನಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಗರ ಸೇವಕಿ ಶಾಮೋನಬಿ ಪಠಾಣ ಹಾಗೂ ಭರತಕುಮಾರ (ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಸ್ತರಣಾಧಿಕಾರಿಗಳು) ಅತಿಥಿಗಳಾಗಿ ಸಮಾಜ ಸೇವಕ ಸಲೀಂ ಪಠಾಣ್, ಸತೀಶ್ ಶೆಟ್ಟಿ, ಮಲ್ಲಿಕಾರ್ಜುನ ಶಿರಗುಪ್ಪಿಶೆಟ್ಟರ್, ಪತ್ರಕರ್ತ ಗೋಪಾಲ ಖಟಾವಕರ್, ಎಸ್‍ಡಿಎಮ್‍ಸಿ ಉಪಾಧ್ಯಕ್ಷ ಕಸ್ತೂರಿ ಬಾವಿ, ಲಕ್ಷ್ಮಿ ಜುಂಜುನ್ನವರ, ಅಂಗನವಾಡಿ ಕಾರ್ಯಕರ್ತೆ ಸುಮಲತಾ ಚವಲಗಿ, ಕು ಎಸ್ ಬಿ ದೊಡಮನಿ ಹಾಗೂ ಎಸ್‍ಡಿಎಮ್‍ಸಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಪಾಲಕರು ಉಪಸ್ಥಿತರಿದ್ದರು. ಶಿಕ್ಷಕಿ ಪ್ರೀತಿ ಕಾಮಕರ, ಶಿಕ್ಷಕಿ ಇವರು ಶಾಲೆಗೆ ಹತ್ತು ಸಾವಿರ ರೂ. ದೇಣಿಗೆ ನೀಡಿದರು. ಶಿಕ್ಷಕ ಶಿವಾನಂದ ರೊಡಬಸಣ್ಣವರ ನಿರೂಪಿಸಿದರು. ಶಿಕ್ಷಕಿ ಎಂಬಿ ಬಾಗೇವಾಡಿ ಸ್ವಾಗತಿಸಿದರು. ಶಿಕ್ಷಕಿ ಜಿಪಿ ಜಮಖಂಡಿ ವಂದಿಸಿದರು./////