Belagavi News In Kannada | News Belgaum

ವಿಶ್ವ ಅಂಗ ದಾನ ದಿನ: ಬಿಜಿಎಸ್ ಆಸ್ಪತ್ರೆಯಲ್ಲಿ ದಾನಿಗಳನ್ನು ಗುರುತಿಸುವ ಬೃಹತ್ ಭಿತ್ತಿ ಅನಾವರಣ

ಬೆಳಗಾವಿ : ಕೆಂಗೇರಿಯಲ್ಲಿರುವ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯು ಪ್ರತಿ ವರ್ಷದಂತೆ ಆ 13ರಂದು ವಿಶ್ವ ಅಂಗ ದಾನ ದಿನವನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದ್ದು, ದಾನಿಗಳನ್ನು ಗುರುತಿಸುವ ಬೃಹತ್ ಗೋಡೆಯನ್ನು ಅನಾವರಣಗೊಳಿಸಿದೆ. ಆ 12ರಂದು ಆಸ್ಪತ್ರೆ ಆವರಣದಲ್ಲಿ ದಾನಿಗಳ ಗೋಡೆಯನ್ನು ಬಿಜಿಎಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಮತ್ತು ಹಾಸ್ಪಿಟಲ್ಸ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶನಾಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆಯಿತು. ಉದ್ಘಾಟಿಸಲಾಯಿತು.
ಗೋಡೆಯನ್ನು ಆಸ್ಪತ್ರೆಯ ಮುಖ್ಯ ದ್ವಾರದ ಹೊರಗಡೆ 8 ಅಡಿ ಉದ್ದ ಮತ್ತು 22.5 ಅಡಿ ಅಗಲ ಅಳತೆಯೊಂದಿಗೆ ರಚಿಸಲಾಗಿದೆ. ಇದು ಭಾರತದಲ್ಲಿ ಈವರೆಗೆ ನಿರ್ಮಿಸಲಾಗಿರುವ ಅತಿ ದೊಡ್ಡ ಗೌರವದ ಗೋಡೆಯಾಗಿದೆ. ತನ್ನ ಮೊದಲ ಹಂತದಲ್ಲಿ 500 ದಾನಿಗಳ ಹೆಸರುಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ. ಗೋಡೆಯ ಎರಡೂ ಬದಿಗಳಲ್ಲಿ ಎರಡನೇ ಹಂತದ ವಿಸ್ತರಣೆಗೆ ಅವಕಾಶವಿದ್ದು, ಭವಿಷ್ಯದಲ್ಲಿ ಒಟ್ಟು 1,500 ಹೆಸರುಗಳಿಗೆ ಅದರ ಸಾಮರ್ಥ್ಯವನ್ನು ವೃದ್ಧಿಸುವ ಗುರಿ ಇದೆ.
ಆರೋಗ್ಯ ಮತ್ತು ಕುಟುಂಬದಕಲ್ಯಾಣ ಸೇವೆಗಳ ಆಯುಕ್ತ ರಂದೀಪ್ ಡಿ., ಮತ್ತು ಐಎಚ್‍ಎಚ್ ಹೆಲ್ತ್ ಕೇರ್ ಇಂಡಿಯಾದ ಸಿಇಒ ಅನುರಾಗ್ ಯಾದವ್ ಮುಖ್ಯ ಅತಿಥಿಗಳಾಗಿದ್ದರು. ಡಿಎಚ್‍ಎಸ್ ನಿರ್ದೇಶಕರಾದ ಡಾ. ಎಂ ಇಂದುಮತಿ, ಜಂಟಿ ನಿರ್ದೇಶಕ (ವೈದ್ಯಕೀಯ) ಡಾ. ಕಿರಣ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಿರಂಜನ್ ಬಿ.ಎಸ್., ಉಪ ಪೆÇಲೀಸ್ ಆಯುಕ್ತ ಲಕ್ಷ್ಮಣ್ ಬಿ. ನಿಂಬರಗಿ, ಐಪಿಎಸ್, ಮತ್ತು ಬಿಜಿಎಸ್ ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಪ್ರಾಂಶುಪಾಲ ಡಾ. ಎಂ.ಇ. ಮೋಹನ್ ಅವರು ಗೌರವಾನ್ವಿತ ಅತಿಥಿಗಳಾಗಿದ್ದರು.
ಬೆಂಗಳೂರು ಗ್ಲೆನೆಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್ ಕ್ಲಸ್ಟರ್ ಸಿಒಒ, ಬಿಜು ನಾಯರ್ ಅವರು ಮಾತನಾಡಿ, ಜೀವಗಳನ್ನು ಉಳಿಸಲು ನಿರಂತರವಾಗಿ ಶ್ರಮಿಸುತ್ತಿರುವ ನಮ್ಮ ತಜ್ಞ ವೈದ್ಯರು, ತೀವ್ರ ನಿಗಾ ಘಟಕದ ವೈದ್ಯರು, ದಾದಿಯರು ಮತ್ತು ಮುಖ್ಯ ಆರೈಕೆದಾರರ ನಮ್ಮ ಕಸಿ ತಂಡಕ್ಕೆ, ವಿಶೇಷವಾದಿ ಸರಳಾ ಅನಂತರಾಜ್ ಅವರಿಗೆ ನಾವು ಅತ್ಯಂತ ಕೃತಜ್ಞರಾಗಿರುತ್ತೇವೆ. ವಿಶ್ವ ಅಂಗದಾನ ದಿನ ಮತ್ತು ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸುಸಂದರ್ಭದಲ್ಲಿ ಈ ಸ್ಮಾರಕವನ್ನು ರಾಷ್ಟ್ರಕ್ಕೆ ಅರ್ಪಿಸಲು ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.
ದಾನಿಯಾಗಿ ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಯನ್ನು ಪಡೆಯಲು, ದಯವಿಟ್ಟು ಭೇಟಿ ನೀಡಿ : https://bit.ly/3bDuWoA  //////