Belagavi News In Kannada | News Belgaum

ಬೆಂಗಳೂರಿಗೆ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ವಿಮಾನ ಆಗಮನ

ಬೆಂಗಳೂರು:  ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ವಿಶಾಲವಾದ ಪ್ರಯಾಣಿಕ ವಿಮಾನವು ನಮ್ಮ ಬೆಂಗಳೂರಿಗೆ ಶೀಘ್ರದಲ್ಲೇ ಬರಲಿದೆ. ಎಮಿರೇಟ್ಸ್ ಏರ್‌ಲೈನ್ಸ್ ಅಕ್ಟೋಬರ್ 30ರಿಂದ ಬೆಂಗಳೂರು- ದುಬೈ ಮಾರ್ಗದಲ್ಲಿ ಈ ಜಂಬೋ ವಿಮಾನವನ್ನು ಹಾರಾಟಕ್ಕೆ ನಿಯೋಜಿಸಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ರನ್‌ವೇಗೆ ಎ380 ವಿಮಾನವನ್ನು ಇಳಿಸಲು ಕೋಡ್ ಎಫ್‌ಗೆ ಅನುಗುಣವಾಗಿ ಹಲವಾರು ವರ್ಷಗಳ ಪ್ರಯತ್ನದ ನಂತರ ಇದು ಸಾಧ್ಯವಾಗಲಿದೆ. ಕೋಡ್ ಎಫ್ ವಿಮಾನಗಳು 65 ಮೀಟರ್‌ಗಿಂತ ಹೆಚ್ಚು ಉದ್ದವಿದೆ. ಆದರೆ 80 ಮೀಟರ್‌ಗಿಂತ ಕಡಿಮೆ ರೆಕ್ಕೆಗಳನ್ನು ಹೊಂದಿರುವ ವಿಮಾನಗಳಾಗಿವೆ. ಈಗ ಬರುತ್ತಿರುವ ಎ380 ವಿಮಾನದ ರೆಕ್ಕೆಗಳು 79.8 ಮೀಟರ್ ಉದ್ದವಾಗಿದೆ. ಕೋಡ್ ಎಫ್ ಅಡಿಯಲ್ಲಿ ಬೋಯಿಂಗ್ 747 ಏಕೈಕ ಪ್ರಯಾಣಿಕ ವಿಮಾನವಾಗಿದೆ.

ಎ 380 ಎಂಬುದು ವಿಶ್ವದ ಉದ್ದವಾದ ಡಬಲ್ ಡೆಕ್ಕರ್ ವಿಮಾನವಾಗಿದ್ದು, 500ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯ ಹೊಂದಿದೆ. ಬೆಂಗಳೂರು ದೆಹಲಿ ಮತ್ತು ಮುಂಬೈ ನಂತರ ಜಂಬೋ ಜೆಟ್ ಅನ್ನು ಇಳಿಸುವ ಮೂರನೇ ಭಾರತೀಯ ನಗರವಾಗಲಿದೆ. ಎಮಿರೇಟ್ಸ್ ಏರ್‌ಲೈನ್ಸ್‌ಗೆ ಬೆಂಗಳೂರು ಎ 380 ವಿಮಾನವನ್ನು ದೈನಂದಿನ ಸೇವೆಯಾಗಿ ನಿಯೋಜಿಸುವ ಎರಡನೇ ಭಾರತೀಯ ನಗರವಾಗಿದೆ. ಇದಕ್ಕೂ ಮೊದಲು ಎಮಿರೇಟ್ಸ್‌ ವಿಮಾನಯಾನ ಸಂಸ್ಥೆಯು 2014 ರಿಂದ ಮುಂಬೈ- ದುಬೈ ಮಾರ್ಗದಲ್ಲಿ ಎ 380 ಅನ್ನು ಹಾರಿಸುತ್ತಿದೆ.//////