Belagavi News In Kannada | News Belgaum

ವಯೋಶ್ರೇಷ್ಠರಿಗೆ ರಾಜ್ಯ ಪ್ರಶಸ್ತಿ: ಅರ್ಜಿ ಆಹ್ವಾನ

 

ಬೆಳಗಾವಿಕ,ಆ. 20: ಹಿರಿಯ ನಾಗರಿಕರ ವೈಯಕ್ತಿಕ ಹಾಗೂ ಸಂಸ್ಥೆಯ ರಾಜ್ಯ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ವಿವಿಧ ಕ್ಷೇತಗಳಲ್ಲಿ ( ಶಿಕ್ಷಣ, ಸಾಹಿತ್ಯ, ಕಲೆ, ಕಾನೂನು, ಪ್ರತಿಭೆ/ ಕ್ರೀಡೆ, ಸಮಾಜ ಸೇವೆ) ಗಣನೀಯ ಸೇವೆ ಸಲ್ಲಿಸಿರುವ / ಸಲ್ಲಿಸುತ್ತಿರುವ (60 ವರ್ಷ ಮೇಲ್ಪಟ್ಟ ) ಹಿರಿಯ ನಾಗರಿಕರು ಹಾಗೂ ಸ್ವಯಂ-ಸಂಸ್ಥೆಯವರು ನಿಗಧಿತ ಅರ್ಜಿ ನಮೂನೆಯಲ್ಲಿ ಪೂರ್ಣ ವಿವರಗಳನ್ನೊಳಗೊಂಡ ಕನ್ನಡ ಭಾಷೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ದ್ವಿ ಪ್ರತಿಯಲ್ಲಿ ಈ ಕಚೇರಿಗೆ ಸಲ್ಲಿsಸಲು ಈಗಾಗಲೇ ಪತ್ರಿಕಾ ಪ್ರಕಟಣೆ ನೀಡಲಾಗಿತ್ತಾದರೂ, ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಾರದೇ ಇದ್ದುದರಿಂದ, ಉಲ್ಲೇಖ (2)ರಂತೆ ದಿನಾಂಕ: 30-08-2022 ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಮತ್ತೊಮ್ಮೆ ಪತ್ರಿಕಾ ಪ್ರಕಟಣೆ ನೀಡಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರಿಕರು ಅರ್ಜಿ ಸಲ್ಲಿಸಬಹುದು. ನಿಗದಿಪಡಿಸಿರುವ ಅಂತಿಮ ದಿನಾಂಕವನ್ನು ಹೊರತಾಗಿ ತಡವಾಗಿ ಸ್ವೀಕೃತವಾಗುವಂತಹ ಪ್ರಸ್ತಾವನೆಗಳನ್ನು ಪರಿಗಣ ಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ವೆಬ್‍ಸೈಟ್ ವಿಳಾಸ :www.dwdsc.kar.nic.in     ನ್ನು / ಕಛೇರಿ ದೂರವಾಣ ಸಂಖ್ಯೆ: 0831-2476096ಗೆ ಅಥವಾ ಆಯಾ ತಾಲೂಕು ಪಂಚಾಯತಿ ಕಛೇರಿಯಲ್ಲಿರುವ ಎಂ.ಆರ್.ಡಬ್ಲ್ಯೂ. ಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲಯ ಕಲ್ಯಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.