Belagavi News In Kannada | News Belgaum

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನವದೆಹಲಿಯಲ್ಲಿ ಜರುಗಿದ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡ ಎನ್‍ಸಿಸಿ ಕೆಡೆಟ್ ಆದಿಥಿ ಶಿಂದೆ ಗೆ ಅಭಿನಂದನೆ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನವದೆಹಲಿಯಲ್ಲಿ ಜರುಗಿದ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡ ಎನ್‍ಸಿಸಿ ಕೆಡೆಟ್ ಆದಿಥಿ ಶಿಂದೆ ಅಭಿನಂದನೆ
ಇತ್ತೀಚಿಗೆ ನವದೆಹಲಿಯಲ್ಲಿ 15 ಅಗಸ್ಟ್ ರಂದು ಜರುಗಿದ 75ನೇ ಸ್ವಾತಂತ್ರ್ಯೋತ್ಸವ ಏಕ್ ಭಾರತ ಶ್ರೇಷ್ಠ ಭಾರತ ಸಾಂಸ್ಕøತಿಕ ಶಿಬಿರದಲ್ಲಿ ಲಿಂಗರಾಜ ಕಾಲೇಜಿನ ಎನ್‍ಸಿಸಿಯ ಸಿನಿಯರ್ ಅಂಡರ್ ಆಫೀಸರ್ ಆದಿಥಿ ಧರ್ಮರಾಜ ಶಿಂದೆ ಪಾಲ್ಗೊಂಡಿದ್ದರು.
ಕರ್ನಾಟಕ ಹಾಗೂ ಗೋವಾ ಡೈರೆಕ್ಟರೇಟ್‍ದಿಂದ 43 ಎನ್‍ಸಿಸಿ ಕೆಡೆಟ್‍ಗಳು ಬೆಂಗಳೂರಿನಿಂದ ಆಯ್ಕೆಯಾಗಿ ನವದೆಹಲಿಯಲ್ಲಿ ಜರುಗಿದ ಅಂತಿಮ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ ಬೆಳಗಾವಿಯಿಂದ ಆಯ್ಕೆಗೊಂಡ ಇಬ್ಬರು ಎನ್‍ಸಿಸಿ ಕೆಡೆಟ್‍ಗಳಲ್ಲಿ ಲಿಂಗರಾಜ ಕಾಲೇಜಿನ ಎನ್‍ಸಿಸಿ ಕೆಡೆಟ್ ಆದಿಥಿ ಶಿಂಧೆ ಒಬ್ಬಳಾಗಿದ್ದಳು. ಅದಿಥಿಗೆ 26 ಕರ್ನಾಟಕ ಬಟಾಲಿಯನ್ ಕಮಾಡಿಂಗ್ ಆಫೀಸರ್ ಕರ್ನಲ್ ಎಸ್. ದರ್ಶನ್, ಸುಬೇದಾರ್ ಮೆಜರ್ ನಿಲೇಶ್ ದೇಸಾಯಿ, ಲಿಂಗರಾಜ ಕಾಲೇಜಿನ ಎನ್‍ಸಿಸಿ ಅಧಿಕಾರಿ ಕ್ಯಾಫ್ಟ್‍ನ್ ಮಹೇಶ ಗುರನಗೌಡರ ತರಬೇತಿಯನ್ನು ನೀಡಿದ್ದರು. ವಿದ್ಯಾರ್ಥಿನಿಯ ಈ ಸಾಧನೆಗೆ ಲಿಂಗರಾಜ ಕಾಲೇಜಿನ ಪದವಿ ಪ್ರಾಚಾರ್ಯ ಡಾ.ಬಿ.ಎಂ.ತೇಜಸ್ವಿ, ಪಿಯು ಪ್ರಾಚಾರ್ಯ ಗಿರಿಜಾ ಹಿರೇಮಠ ಹಾಗೂ ಸಿಬ್ಬಂದಿವರ್ಗದವರು ಗೌರವಿಸಿ ಅಭಿನಂದಿಸಿದ್ದಾರೆ.