Belagavi News In Kannada | News Belgaum

  “ತಾಜ್ ಮಹಲ್-2 “ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ   

ಹುಬ್ಬಳ್ಳಿ : ಸ್ಮಾರ್ಟ ಸಿಟಿಯಾಗುತ್ತಿರುವ ಹುಬ್ಬಳ್ಳಿಯ ಪ್ರವಾಸಿ ತಾಣ, ಉದ್ಯಾನಗಳು ಅಭಿವೃದ್ಧಿ ಕಾಣುತ್ತಿದ್ದು ಕನ್ನಡ ಚಿತ್ರರಂಗ ಇಲ್ಲಿ ಚಿತ್ರೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಅವರು ಬೆಂಗೇರಿಯ ಸ್ಮಾರ್ಟಸಿಟಿ ಸಂತೆ ಮೈದಾನದಲ್ಲಿ ನಡೆದ ತಾಜ್ ಮಹಲ್-2 ಚಿತ್ರದ ಮೂರನೇ ಧ್ವನಿಸುರುಳಿ ಬಿಡುಗಡೆ ಹಾಗೂ ಸಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಲ್ಲಿ ಉಣಕಲ್ ಕೆರೆ, ಚೆನ್ನಮ್ಮನ ವೃತ್ತ, ನೃಪತುಂಗಬೆಟ್ಟ ಮೊದಲಾದವೆಲ್ಲ ಜನಾಕರ್ಷಕ ಕೇಂದ್ರಗಳಾಗಿವೆ. ಬೆಂಗಳೂರಿನವರೂ ಸಹಿತ ಇಲ್ಲಿನ ಸ್ಥಳಗಳಲ್ಲಿ ಚಿತ್ರೀಕರಣ ಮಾಡಬೇಕು. ಮತ್ತು ಈ ಚಿತ್ರ ಇದೇ ಸೆಪ್ಟಂಬರ್ 2 ರಿಂದ ರಾಜ್ಯದ್ಯಂತ ಬಿಡುಗಡೆಯಗುತ್ತಿದ್ದು ಚಿತ್ರಪ್ರೇಮಿಗಳು ನೋಡಿ ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಬೇಕು ಎಂದರು. ಸಕ್ಕರೆ ಮತ್ತು ಜವಳಿ ಅಬಿವೃದ್ಧಿ ಸಚಿವ ಶಂಕರ ಮುನೇನಕೊಪ್ಪ ಮಾತನಾಡಿ ಹುಬ್ಬಳ್ಳಿಯಲ್ಲಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಇಟ್ಟುಕೊಂಡಿದ್ದು ಸಂತಸ ತಂದಿದೆ. ಇಲ್ಲೂ ಸಾಕಷ್ಟು ಕಲಾವಿದದರಿದ್ದಾರೆ. ಅವರಿಗೂ ಅವಕಾಶ ದೊರೆಯುವಂತಾಗಬೇಕು ಎಂದರು. ನಟ ದೇವರಾಜ್, ಸಾಹಿತಿ ಮನ್ವರ್ಷಿ ನವಲಗುಂದ ತಾಜಮಹಲ್ ಚಿತ್ರ ಮನೆಮಂದಿಯೆಲ್ಲ ಕುಳಿತು ನೋಡುವ ಚಿತ್ರವಾಗಿದೆ. ಕಷ್ಟಪಟ್ಟು ಚಿತ್ರಮಾಡಿದ್ದು ತಾವೆಲ್ಲ ಚಿತ್ರನೋಡಿ ನಮ್ಮನ್ನು ಹರಸಿ ಎಂದರು.   ಉದ್ಯಮಿ ವಿ.ಎಸ್.ವಿ ಪ್ರಸಾದ, ಪತ್ರಕರ್ತ ಗಣಪತಿ ಗಂಗೊಳ್ಳಿ, ಕಾರ್ಪೋರೇಟರ್ ಬೀರಪ್ಪ ಖಂಡೇಕರ, ಮಲಿಕಾರ್ಜುನ ಸಾವುಕಾರ, ರಮೇಶ ಮಹಾದೇವಪ್ಪನವರ, ವೀರೇಶ ಸಂಗಳದ, ಡಾ.ಕಲ್ಮೇಶ ಹಾವೇರಿಪೇಟ, ಚಿತ್ರದ ನಿರ್ದೇಶಕ ನಾಯಕ ನಟ ದೇವರಾಜಕುಮಾರ್, ಸಹನಟ ರೀತೇಶ, ಫೈಟ್ ಮಾಸ್ಟರ್ ಚಂದ್ರು ಬಂಡೆ, ಗೀತರಚನೆಕಾರ, ಸಹನಿರ್ದೇಶಕ ಮನ್ವರ್ಷಿ ನವಲಗುಂದ, ಚಿತ್ರದ ಪ್ರಚಾರಕರಾದ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ ಮತ್ತು ಆಯೋಜಕರಾದ ರವೀಂದ್ರ ರಾಮದುರ್ಗಕರ, ಚಿತ್ರತಂಡದವರು ಪಾಲ್ಗೊಂಡಿದ್ದರು. ರೀತೇಶ್ ವಿವಿಧ ಕಲಾವಿದರ ಧ್ವನಿ ಅನುಕರಣೆ ಮಾಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಗಾನತರಂಗ ಮತ್ತು ವಿಜನ್ ಪ್ಲೈ ಸಂಸ್ಥೆಯ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು.

ತಾರಾಗಣದಲ್ಲಿ ಸಮೃದ್ಧಿ ಶುಕ್ಲಾ, ದೇವರಾಜ್ ಕುಮಾರ್, ರಿತೇಶ್, ಜಿಮ್ ರವಿ, ವಿಕ್ಟರಿ ವಾಸು, ಶೋಭರಾಜ್, ತಬಲಾನಾಣಿ, ಕಾಕ್ರೋಚ್ ಸುಧಿ, ಶಿವರಾಂ, ವಾಣಿಶ್ರೀ, ಲಕ್ಷ್ಮೀ ಸಿದ್ದಯ್ಯ ಮೊದಲಾವರಿದ್ದಾರೆ. ತಾಂತ್ರಿಕವರ್ಗದಲ್ಲಿ ಛಾಯಾಗ್ರಹಣ ವಿನಸ್ ಮೂರ್ತಿ, ಸಂಗೀತ ವಿಕ್ರಂ ಸೆಲ್ವಾ, ಸಾಹಿತ್ಯ ಸಂಭಾಷಣೆ, ಸಹನಿರ್ದೇಶನ ಮನ್ವರ್ಷಿ ನವಲಗುಂದ, ಗಾಯಕರು ವಿಜಯ್ ಪ್ರಕಾಶ್,ರಾಜೇಶ್ ಕೃಷ್ಣನ್, ವರ್ಷ ಬಿ ಸುರೇಶ್, ಶ್ರೀರಕ್ಷಾ, ಪ್ರಿಯಾರಾಮ್ , ನೃತ್ಯ ಸಂಯೋಜನೆ ಬಿ.ಧನಂಜಯ್, ಸಾಹಸ ಚಂದ್ರು ಬಂಡೆ, ಸಂಕಲನ ವಿಜಯ್ ಎಮ್ ಕುಮಾರ್, ಪಿಆರ್‍ಓ ಸುಧೀಂದ್ರ ವೆಂಕಟೇಶ್, ಪ್ರಚಾರಕಲೆ ಡಾ.ಪ್ರಭು ಗಂಜಿಹಾಳ್, ಡಾ.ವೀರೇಶ್ ಹಂಡಗಿ ಅವರದಿದ್ದು,  ನಿರ್ದೇಶನವನ್ನು ದೇವರಾಜ್ ಕುಮಾರ್ ಮಾಡಿದ್ದಾರೆ. ಶ್ರೀ ಗಂಗಾಂಬಿಕೆ ಎಂಟಪ್ರ್ರೈಸಸ್ ನಿರ್ಮಾಪಕರಾಗಿದ್ದಾರೆ.