Belagavi News In Kannada | News Belgaum

ಶಾಲೆ ಹಾಗೂ ಕಾಲೇಜಿನಲ್ಲಿ ನೋಟ ಬುಕ್ ನೀಡಿ ಹುಟ್ಟುಹಬ್ಬ  ಆಚರಣೆ

ಹುಣಸಗಿ: ಪಟ್ಟಣದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರತಿಯೊಂದು ವಿದ್ಯಾರ್ಥಿಗಳಿಗೆ ಒಂದೊಂದು ನೋಟ ಬುಕ್ ನೀಡುವ ಮೂಲಕ ನೂತನ ವಾಗಿ ಕುಮಾರ ವೇದಾಂತನ ಹುಟ್ಟುಹಬ್ಬವನ್ನು ಮಲ್ಲಿಕಾರ್ಜುನ ಶೇವಟಿ ಕುಟುಂಬ ಆಚರಣೆ ಮಾಡಿದೆ.

ಅದೇರೀತಿಯಾಗಿ ಹುಣಸಗಿ ಪಟ್ಟಣದ ವೀರೇಂದ್ರ ಪಾಟೀಲ ವಿವಿದೋದ್ದೇಶ ಸೇವಾ ಸಂಘ (ರಿ) ದ ವತಿಯಿಂದ ನಡೆಯುತ್ತಿರುವ ವೃದ್ಧಾಶ್ರಮದಲ್ಲಿ ಇರುವ ವಯೋವೃದ್ಧರಿಗೆ ಬಟ್ಟೆ ಹಾಗೂ ಹಣ್ಣು ಹಂಪಲು ಕೊಡುವ ಮೂಲಕ ಪಟ್ಟಣದ ನಿವಾಸಿಯಾದ ಮಲ್ಲಿಕಾರ್ಜುನ ಶೇವಟಿ ಅವರ ಮಗನಾದ ಚಿ.ವೇದಾಂತ ಮಲ್ಲಿಕಾರ್ಜುನ ಶೇವಟಿ ರವರ 2 ನೇ ವರ್ಷದ  ಹುಟ್ಟು ಹಬ್ಬವನ್ನು ವಿಶೇಷವಾಗಿ ಹಾಗೂ ಸರಳವಾಗಿ ಆಚರಿಸಿಕೊಂಡರು.

ಇದೇ ವೇಳೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ತಾಲ್ಲೂಕು ವರದಿಗಾರ ವೆಂಕಟಗಿರಿ ದೇಶಪಾಂಡೆ ಮಾತನಾಡಿ  ವೃದ್ಧಾಶ್ರಮದಲ್ಲಿ ಇರುವಂತಹ ವೃದ್ಧರ ಯೋಗಕ್ಷೇಮ ನೋಡಿಕೊಳ್ಳುವುದು ತುಂಬಾ ಕಷ್ಟಕರವಾದ ಸಂಗತಿ ಈ  ಎಲ್ಲಾ ವೃದ್ಧರನ್ನು ಸಂತೋಷದಿಂದ ಕಾಣುವುದು ಬಹಳ ಮುಖ್ಯವಾಗಿದೆ ಯಾರಿಗೂ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಈ ಸಂಘದ ಸದಸ್ಯರು ವರ್ತಿಸಬಾರದು ಈ ನಿಟ್ಟಿನಲ್ಲಿ ವೃಧ್ದಾಶ್ರಮವನ್ನು ನಡೆಸಿಕೊಂಡು ಹೋಗುತ್ತಿರುವ ಆಶ್ರಮದ ಎಲ್ಲಾ ಮುಖ್ಯಸ್ಥರು ಒಳ್ಳೆಯ ನಡತೆಯೊಂದಿಗೆ ಆಶ್ರಮವನ್ನು ನಡೆಸಿಕೊಂಡು ಹೋಗಬೇಕೆಂದು ಹೇಳಿದರು.      ನಂತರ ವೃದ್ಧಾಶ್ರಮದ ಮುಖ್ಯಸ್ಥ ಗೊಲ್ಲಾಳೇಶ ಗೋಗಿ ಮಾತನಾಡಿ ಆಶ್ರಯದಲ್ಲಿ ಇರುವ ವೃದ್ಧರಿಗೆ ಖುಷಿ ಪಡಿಸುವುದು ಮತ್ತು  ಸಂತೋಷವನ್ನು ಆನಂದಿಸುವುದರ ಜೊತೆಗೆ  ದೇವರು ಅವರಿಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ ಮತ್ತೊಮ್ಮೆ ಅವರಿಗೆ ವೃದ್ಧಾಶ್ರಮವನ್ನು ನಡೆಸಿಕೊಂಡು ಹೋಗಲು ನಮಗೆ ಮತ್ತಷ್ಟು ಸಹಕಾರ ನೀಡಬೇಕೆಂದು ಹೇಳುವ ಮೂಲಕ ಶೇವಟಿ ಕುಟುಂಬಕ್ಕೆ ಶುಭ ಹಾರೈಸಿದರು.

ಹಾಗೂ ವೃದ್ಧಾಶ್ರಮದಲ್ಲಿ ಇರುವ ವಯೋವೃದ್ಧರ ಯೋಗಕ್ಷೇಮವನ್ನು ನೋಡಿಕೊಂಡು ಹೋಗಲು ಹೆಚ್ಚಿನ ಧನ ಸಹಾಯ ಮಾಡುವವರು ಈ ಕೆಳಕಾಣಿಸಿದ ಮೊಬೈಲ್ ನಂಬರಗೆ ಸಂಪರ್ಕಿಸುವ ಮೂಲಕ ಹೆಚ್ಚಿನ ಧನ ಸಹಾಯ ಮಾಡಬೇಕೆಂದು ಕೋರಿದರು.  9902505203 ಈ ಸಂದರ್ಭದಲ್ಲಿ  ಮಹೇಶ ಸ್ಥಾವರಮಠ, ಶಿವು ನಂದಿಕೊಲಮಠ, ಸಿದ್ದನಗೌಡ ಬಿರಾದಾರ ಹಾಗೂ ಶೇವಟಿ ಕುಟುಂಬ ಪರಿವಾರವು ಸೇರಿದಂತೆ ಇತರರು ಇದ್ದರು..