Belagavi News In Kannada | News Belgaum

ಸ್ವಾತಂತ್ರ್ಯ ಯೋಧರ ಇತಿಹಾಸ ಪರಿಚಯಿಸುವ ಜವಾಬ್ದಾರಿ ಯುವ ಪೀಳಿಗೆ ಮೇಲಿದೆ: ಹೆಚ್. ಎನ್. ದೀಪಕ್

“ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ಪ್ರಥಮ ಮಹಿಳೆ ಕಿತ್ತೂರು ರಾಣ ಚೆನ್ನಮ್ಮನ ಬಲಗೈ ಬಂಟನಾಗಿ, ಕನ್ನಡ ನಾಡಿನ ಹೆಮ್ಮೆಯ ಪುತ್ರ ವೀರ ಸಂಗೊಳ್ಳಿ ರಾಯಣ್ಣನವರ ನಿಜ ಇತಿಹಾಸವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಸಂಶೋಧಕರ, ಸಾಹಿತಿಗಳ ಹಾಗೂ ಕನ್ನಡ ಹೋರಾಟಗಾರರ ಮೇಲಿದೆ.

ಅದರೊಂದಿಗೆ ರಾಯಣ್ಣ ಹಾಗೂ ಅವನ ಸಂಗಡಿಗರ ಕುರಿತಾದ ವಿಸ್ತ್ರುತ ಮಾಹಿತಿಗಳು ಜನರಿಗೆ ತಲುಪಿಸಬೇಕಾದೆ” ಎಂದು ಕರುನಾಡ ವಿಜಯ ಸೇನೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ
ಹ. ನೀ. ದೀಪಕ ಕರೆ ನೀಡಿದರು.

ನಗರದ ಮಹಾತ್ಮಾ ಗಾಂಧಿ ಭವನದಲ್ಲಿ ಕರುನಾಡ ವಿಜಯ ಸೇನೆಯ ವತಿಯಿಂದ ಹಮ್ಮಿಕೊಳ್ಳಲಾದ ‘ರಾಯಣ್ಣನ ಅದ್ದೂರಿ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, “ಕನ್ನಡ ನಾಡು, ನುಡಿಗಾಗಿ ಶ್ರಮಿಸಿದ ವೀರ ಪರಂಪರೆಯ ವಾರಸುದಾರರಾದ ನಾವೆಲ್ಲ ಕನ್ನಡಕ್ಕಾಗಿ ಕೈ ಎತ್ತಬೇಕು. ಕನ್ನಡ ಅನ್ನದ ಭಾಯಾಗಬೇಕು.

ಹೊರ ರಾಜ್ಯದ ಕಂಪನಿಗಳು ನಮ್ಮ ನೆಲದಲ್ಲಿ ಘಟಕ ಸ್ಥಾಪಿಸಿದರೆ ಅಲ್ಲಿಯೂ ಕೂಡ ಕನ್ನಡಿಗರಿಗೆ ಉದ್ಯೋಗ ಕೊಡುವಂತಾಗಲು ಸೇನೆ ನಿರಂತರ ಹೋರಾಟ ಮಾಡ್ತಿದೆ. ಬಹು ಸಂಸ್ಕೃತಿಯ ದೇಶದಲ್ಲಿರುವ ನಮಗೆ ಕನ್ನಡವೇ ಜಾತಿ, ಕನ್ನಡವೇ ಧರ್ಮವಾಗಿದೆ. ಇಲ್ಲಿಯ ರೈತರು, ಮಹಿಳೆಯರು, ಕಾರ್ಮಿಕರು ಹಾಗೂ ಕನ್ನಡ ಕಲಿಯುವ ಮಕ್ಕಳಿಗೆ ಅನ್ಯಾಯವಾದಾಗ ಹೋರಾಡಲು ನಮ್ಮ ಸೇನೆ ಸದಾ ಸಿದ್ಧವಿದೆ. ಕನ್ನಡದ ಕುರಿತಾದ ಅಭಿಮಾನ ಹೊಂದಿರುವ ಕರ್ನಾಟಕದಲ್ಲಿರುವವರೆಲ್ಲರೂ ಕನ್ನಡಿಗರೇ ಆಗಿದ್ದಾರೆ.

ಇಲ್ಲಿರುವ ಕನ್ನಡಿಗರಿಗೆ ಎಲ್ಲ ಕ್ಷೇತ್ರದಲ್ಲಿ ಮೊದಲ ಆದ್ಯತೆಯಿರಬೇಕು. ರಾಯಣ್ಣ ಕನ್ನಡಿಗರೆಲ್ಲರ ಅಸ್ಮಿತೆಯಾಗಿರುವ ಕಾರಣ ಕನ್ನಡದ ಗಂಡು ಮೆಟ್ಟಿನ ನಾಡು ಬೆಳಗಾವಿಯ ಪೀರನವಾಡಿಯಲ್ಲಿ ರಾಯಣ್ಣನ ಪುತ್ತಳಿ ನಿರ್ಮಿಸುವ ಹೋರಾಟದಲ್ಲಿ

ಕೈಗೂಡಿಸಿದ ಎಲ್ಲ ಕನ್ನಡಪರ ಸಂಘಟನೆಗಳನ್ನು ಅಭಿನಂದಿಸಿದ ಅವರು, ಪುತ್ತಳಿ ಇರುವ ಸ್ಥಳಕ್ಕೆ ವೀರ ಸಂಗೊಳ್ಳಿ ರಾಯಣ್ಣ ವೃತ್ತ ಎಂದು ನಾಮಕರಣ ಆಗಬೇಕು ಹಾಗೂ
ರಾಯಣ್ಣನ ಸಮಾಧಿ ಸ್ಥಳ ನಂದಗಡದಲ್ಲಿ ರಾಯಣ್ಣ ರಾಷ್ಟ್ರೀಯ ಸ್ಮಾರಕ ಸ್ಥಾಪಿಸಬೇಕು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣ ಚೆನ್ನಮ್ಮ ಹೆಸರಿಡಬೇಕು,ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ರಾಯಣ್ಣನ ಹೆಸರಿಡಬೇಕು, ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ರಾಯಣ್ಣನ ಹೆಸರಿಡಬೇಕು,
ಕೇಂದ್ರ ಸರ್ಕಾರದ ಯೋಜನೆಯಾದ ‘ಅಗ್ನಿಪತ್’ ಗೆ ರಾಯಣ್ಣ ಸೇನೆ ಎಂದು ನಾಮಕರಣ ಮಾಡಬೇಕೆಂಬಆಗ್ರಹ ಸೇನೆಯದ್ದಾಗಿದೆ.

ಶೀಘ್ರದಲ್ಲಿ ಸರ್ಕಾರಗಳು ತೀರ್ಮಾಣ ತೆಗೆದುಕೊಳ್ಳಬೇಕು” ಎಂದು ಹೇಳಿದರು.
ಬಿ.ಬಿ.ಎಂ.ಪಿ. ಮಾಜಿ ಸದಸ್ಯ ಸೋಮಶೇಖರ ಮಾತನಾಡಿ, ” ಕರುನಾಡ ವಿಜಯ ಸೇನೆ ರಾಜ್ಯಾದ್ಯಂತ ಪ್ರಸರಿಸುತ್ತಿದೆ. ಗಡಿಭಾಗದ ರಾಯಣ್ಣನ ನೆಲದಲ್ಲಿ ಉತ್ಸವ ಮಾಡುವ ಮೂಲಕ ಯುವ ಹೋರಾಟಗಾರರಲ್ಲಿ ನವೋತ್ಸಾಹ ತುಂಬಿದೆ” ಎಂದರು.
ಸೇನೆಯ ಯುವ ರಾಜ್ಯಾಧ್ಯಕ್ಷ ಮಹೇಶ ಆರ್. ಎಸ್., ರಾಜ್ಯ ಉಪಾಧ್ಯಕ್ಷ ಸಚ್ಚಿದಾನಂದ, ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನಕುಮಾರ, ಬಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ನೆ. ಲ. ರಾಮಪ್ರಸಾದ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಕರ್ನಾಟಕ ಉಸ್ತುವಾರಿ ಶಿವಪುತ್ರ ಗಾಣದಾಳ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾನಿಧ್ಯ ವಹಿಸಿದ್ದ ಬೆಳಗಾವಿ ಕಾರಂಜಿ ಮಠದ ಶಿವಯೋಗಿ ದೇವರು ಮಾತನಾಡಿ, “ಕನ್ನಡ ಪರಂಪರೆಯಲ್ಲಿ ರಾಯಣ್ಣ ಚಿರಸ್ಥಾಯಿಯಾಗಿದ್ದಾರೆ. ಇಂದು ಕನ್ನಡ ನೆಲದ ಮನೆ-ಮನದಲ್ಲೂ ರಾಯಣ್ಣನಿದ್ದಾನೆ. ಅವನ ದಿಟ್ಟ ಹೋರಾಟ ಹೊಸ ಪೀಳಿಗೆಗೆ ಮಾದರಿಯಾಗಲಿ” ಎಂದು ನುಡಿದರು.
ಕನ್ನಡ ಸೇವೆಗೆ ಸದಾ ಕ್ರಿಯಾಶೀಲರಾಗಿರುವ ಐವತ್ತು ಕನ್ನಡ ಹೋರಾಟಗಾರರನ್ನು ಸೇನೆಯ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.

ಬೆಳಗಾವಿಯ ಕ್ಯಾಂಪ್ ಪ್ರದೇಶದ ಹನುಮಾನ ಮೂರ್ತಿಯಿಂದ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಮೂರ್ತಿ ಹಾಗೂ ಭಾವಚಿತ್ರ ಮೆರವಣಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧ ಕಲಾ ತಂಡಗಳೊಂದಿಗೆ ಮೆರವಣಗೆಯ ಧರ್ಮವೀರ ಸಂಭಾಜಿ ಚೌಕ, ಕಾಲೇಜು ರಸ್ತೆ ಮೂಲಕ ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಮರಳಿ ಗಾಂದಿ ಭವನಕ್ಕೆ ತಲುಪಿತು.

 

ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಗೌರವಾಧ್ಯಕ್ಷ ರವಿ ಭದ್ರಕಾಳಿ, ಜಿಲ್ಲಾಧ್ಯಕ್ಷ ಸುರೇಶ ಇಟಗಿ, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಹಲಗಾ,
ಸೋಮಲಿಂಗೇಶ್ವರ ಸ್ವಾಮೀಜಿ, ಚೆನ್ನಮ್ಮ ವಂಶಸ್ಥರಾದ ಬಾಬಾಸಾಹೇಬ ಶಂಕರಗೌಡಾ ದೇಸಾಯಿ,ಬೆಂಗಳೂರಿನ ಪಾಲಿಕೆ ಸದಸ್ಯರಾದ ಸೋಮಶೇಖರ್, ಹುಬ್ಬಳ್ಳಿ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ಬೆಂಗಳೂರಿನ ರೇಣುಕಾ ಪ್ರಸಾದ, ಡಾ.ಸುದೀಪಕುಮಾರ, ರಾಜ್ಯ ಉಪಾಧ್ಯಕ್ಷ ಸೋಮಶೇಖರ, ರಾಮ, ಪ್ರಸಾದ, ಕಾರ್ಯಕ್ರಮದಲ್ಲಿ ರಾಜ್ಯ ಯುವ ಕಟಕ ಅಧ್ಯಕ್ಷ ಮಹೇಶ್ ಆರ್ ಎಸ್ ರಾಜ್ಯ ಉಪಾಧ್ಯಕ್ಷ ಸಚ್ಚಿದಾನಂದ ಮೂರ್ತಿ ಇನ್ನೋರ್ವ ರಾಜ ಉಪಾಧ್ಯಕ್ಷ ಸೋಮಶೇಖರ್ ಹಾಗೂ ವಿನಯ್ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ರಾಮ್ ಪ್ರಸಾದ್ ಜಾಲತಾಣ ಅಧ್ಯಕ್ಷ ರೇಣುಕಾ ಪ್ರಸಾದ್ ಹಾಗೂ ಗ್ರಾಮಾಂತರ

 

ಅಧ್ಯಕ್ಷ ಸುಚೇಂದ್ರ ಹಾಗೂ ಕಾರ್ಯಕ್ರಮದಲ್ಲಿ ಕೆಲ ಜಿಲ್ಲಾಧ್ಯಕ್ಷರುಗಳು ಬೆಳಗಾವಿಯ ಜಿಲ್ಲಾಧ್ಯಕ್ಷ ಸುರೇಶ್ ಇಟಗಿ ಶಿವಕುಮಾರ್ ತ್ಯಾಗರಾಜ್ ಗಂಗರಾಜ ಅಮ್ಮ ವಿಜಯಕುಮಾರ್ ಮಂಜುನಾಥ್ ಹಿರೇಮಠ್ ಹಾಗೂ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಕರುನಾಡ ವಿಜಯ ಸೇನೆಯ ಪದಾಧಿಕಾರಿಗಳು ರಾಜಕಾರಣಿ ಅಧ್ಯಕ್ಷರುಗಳು ಹಾಗೂ ಜಿಲ್ಲೆಗಳ ಅಧ್ಯಕ್ಷರುಗಳು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಹಾಗೂ ಸೇರಿ ಸಾವಿರಾರು ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.//////