Belagavi News In Kannada | News Belgaum

ಮುರುಘಾ ಶರಣರ ಲೈಂಗಿಕ ದೌರ್ಜನ್ಯ ಪ್ರಕರಣ. ತನಿಖಾ ತಂಡ (ಎಸ್.ಐ.ಟಿ) ರಚಿಸಿ ತನಿಖೆ ನಡೆಯಲಿ. ಮುಖ್ಯ ಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರಬರೆದ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ

ಮುರುಘಾ ಶರಣರ ಲೈಂಗಿಕ ದೌರ್ಜನ್ಯ ಪ್ರಕರಣ. ಜಾರಕಿಹೊಳಿ ತನಿಖಾ ಮಾನದಂಡವನ್ನೇ ಅನುಸರಿಸಿರಿ. ತನಿಖಾ ತಂಡ (ಎಸ್.ಐ.ಟಿ) ರಚಿಸಿ ತನಿಖೆ ನಡೆಯಲಿ. ಮುಖ್ಯ ಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರಬರೆದ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ

ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಶರಣರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರಾಗಿದ್ದ ಶ್ರೀ ರಮೇಶ ಜಾರಕಿಹೊಳಿಯವರ ರಾಸಲೀಲೆಯ ಸಿ.ಡಿ ಪ್ರಕರಣದ ತನಿಖೆ ನಡೆಸಿರುವ ಮಾದರಿಯಲ್ಲಿಯೇ ಈ ಪ್ರಕರಣದ ತನಿಖೆ ನಡೆಸಲು ಮತ್ತು ಜಾರಕಿಹೊಳಿ ಪ್ರಕರಣಕ್ಕೆ ಅನುಸರಿಸಲಾದ ಮಾನದಂಡಗಳನ್ನೇ ಮುರುಘಾ ಶರಣರ ಪ್ರಕಣಕ್ಕೂ ಅನ್ವಯಿಸುವಂತೆ ಸರಕಾರ ಕ್ರಮ ಕೈಗೊಳ್ಳದೇ ಇದ್ದಲ್ಲಿ “ರಾಜಕಾರಣಿಗಳಿಗೊಂದು ಕಾನೂನು? ಜನಸಾಮಾನ್ಯರಿಗೊಂದು ಕಾನೂನು? ಎಂಬಂತೆ ನಡೆದುಕೊಳ್ಳುತ್ತಿರುವ ಸರಕಾರದ ಈ ಕ್ರಮವನ್ನು ಪ್ರಶ್ನಿಸಿ ರಾಜ್ಯ ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲೀಸಬೇಕಾಗುವುದು ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಪತ್ರ ಬರೆದು ವಿನಂತಿಸಲಾಗಿದೆ.

2021ರ ಮಾರ್ಚ್-2ನೆಯ ತಾರೀಖಿನ ದಿವಸ ಸಾಯಂಕಾಲ 04.00ಗಂಟೆಗೆ ಶ್ರೀ ರಮೇಶ ಜಾರಕಿಹೊಳಿ ರಾಸಲೀಲೆಯ ಸಿ.ಡಿ ಪ್ರಕರಣವು ಮಾಧ್ಯಮಗಳಲ್ಲಿ ಪ್ರಸಾರಗೊಂಡಾಗ ಇಡೀ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯೇ ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಸಂತ್ರಸ್ತ ಯುವತಿಯು ತನ್ನ ಕೈಬರಹದಿಂದ ವಕೀಲರ ಮೂಲಕ ದೂರು ನೀಡಿದಾಗಲು ಸಾಕಷ್ಟು ವಿಳಂಬದ ನಂತರ ಶ್ರೀ ಜಾರಕಿಹೊಳಿಯವರ ಮೇಲೆ ಎಫ್.ಐ.ಆರ್. ದಾಖಲಿಸಲಾಗಿತ್ತು.

ಅಲ್ಲದೇ ಸಂತ್ರಸ್ತ ಯುವತಿಯೇ ಸ್ವತಃ ನ್ಯಾಯಾಧೀಶರ ಮುಂದೆ ಹಾಜರಾಗಿ ಸಿ.ಆರ್.ಪಿಸಿ 164ರ ಅಡಿಯಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಿ ಜಾರಕಿಹೊಳಿಯವರಿಂದ ತನಗೆ ಯಾವ, ಯಾವ ರೀತಿಯಿಂದ ಅನ್ಯಾಯವಾಗಿರುವುದು ಮತ್ತು ಸಿ.ಡಿಯಲ್ಲಿರುವ ಎಲ್ಲ ವಿಷಯಗಳು ಸತ್ಯವಾಗಿಯೇ ಇರುತ್ತವೆ ಎಂದು ಹೇಳಿಕೆ ನೀಡಿದಾಗಲು ಸರಕಾರವು ಶ್ರೀ ಜಾರಕಿಹೊಳಿಯವರನ್ನು ಬಂದಿಸಿರಲಿಲ್ಲ. ಅಲ್ಲದೇ ದೂರಿನಲ್ಲಿ ಹೆಸರಿಸಲಾದ ಆಪಾಧಿತರ ಸ್ಥಾನದಲ್ಲಿದ್ದ ಶ್ರೀ ಜಾರಕಿಹೊಳಿಯವರೇ ದಿನಾಂಕ: 10/03/2021ರಂದು ಸರಕಾರಕ್ಕೆ ಪತ್ರ

ಬರೆದು ತಮ್ಮ ವಿರುದ್ಧ ನಡೆದಿರುವ ಈ ರಾಸಲೀಲೆಯ ಪ್ರಕರಣದ ಷಡ್ಯಂತ್ರದ ಸತ್ಯಾಸತ್ಯತೆ ತಿಳಿಯಲು “ವಿಶೇಷ ತನಿಖಾ ತಂಡ” (ಎಸ್.ಐ.ಟಿ) ರಚನೆ ಮಾಡುವಂತೆ ವಿನಿಂತಿಸಿದ್ದರ ಪ್ರಕಾರ ಅದೇ ದಿವಸ ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದ ಸೂಚನೆಯ ಪ್ರಕಾರ ದಿನಾಂಕ: 11/03/2021ರಂದು ಸರಕಾರ ಎಸ್.ಐ.ಟಿ ರಚನೆ ಮಾಡಿ ಆದೇಶ ಮಾಡಿದ್ದನ್ನು ಕೂಡಾ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತಮ್ಮ ಪಕ್ಷದ ಸಚಿವರೊಬ್ಬರನ್ನು ಕಾನೂನಿಂದ ರಕ್ಷಿಸುವ ಸಲುವಾಗಿ ಆಪಾಧಿತ ಸಚಿವರನ್ನು ಕೊನೆಯವರೆಗೂ ಬಂದಿಸದೇ ಇರುವುದನ್ನು ನಾಡಿನ ಜನತೆ ಇನ್ನೂ ಮರೆತಿರುವುದಿಲ್ಲ. ಆದರೆ ಈ ಪ್ರಕರಣದಲ್ಲಿ ದೂರು ದಾಖಲಿಸಿದ ಕೇಲವೆ ಸಮಯದಲ್ಲಿ ಸ್ವಾಮಿಜಿಯವರ ಮೇಲೆ ಪೋಕ್ಸೋ ಕಾಯ್ದೆಯಡಿ ಎಫ್.ಐ.ಆರ್. ದಾಖಲೀಸಿದ್ದು, ಮುರುಘಾ ಶರಣರನ್ನು ಬಂಧಿಸಲು ಕೂಡಾ ಸಿದ್ಧತೆ ನಡೆಸಿರುವುದು. ರಾಜ್ಯದ ಜನರನ್ನು ಬೆಚ್ಚಿಬೀಳಿಸಿರುವುದು ಎಂದು ಸಹ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದಲ್ಲಿರುವ ಎಲ್ಲ ಸಮುದಾಯಗಳಿಗೆ ಮತ್ತು ಎಲ್ಲ ರಾಜಕೀಯ ಪಕ್ಷದವರಿಗೆ ಬೇಕಾಗಿರುವ ಅಲ್ಲದೇ ಯಾವುದೇ ಜಾತಿ-ಧರ್ಮವಿಲ್ಲದೆ ಶಿಕ್ಷಣ, ಅನ್ನದಾಸೋಹ ಮಾಡುತ್ತ ನಾಡಿನ ಸಂಸ್ಕೃತಿ ಪರಂಪರೆಗಳನ್ನು ಮುಂದುವರೆಸಿಕೊಂಡು ನೂರಾರು ವರ್ಷಗಳ ಇತಿಹಾಸ ಹೊಂದಿರುವ ರಾಜ್ಯದ ಅತ್ಯಂತ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿರುವ ಮುರುಘಾ ಮಠದ ಶರಣರು ಕೂಡಾ ನಾಡಿನ ಪ್ರತಿಷ್ಠಿತ ಶ್ರೀಗಳು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಅಲ್ಲದೇ ಶ್ರೀಗಳ ಮೇಲೆ ಎಫ್.ಐ.ಆರ್. ದಾಖಲಾಗಿರುವ ಈ ಪ್ರಕರಣದಲ್ಲಿ ಸಂಶಯಕ್ಕೆ ಯಡೆಮಾಡಿಕೊಡುವಂತಹ ಘಟನಾವಳಿ ಕೂಡಾ ನಡೆದಿದ್ದು, ಶ್ರೀಗಳ ಮೇಲೆ ನೀಡಲಾಗಿರುವ ಹಿಂದೆ ಮುರುಘಾ ಆಡಳಿತಾಧಿಕಾರಿಯಾಗಿರುವ ಶ್ರೀ ಎಸ್.ಕೆ. ಬಸವರಾಜ ಇವರ ಪ್ಯಡಂತ್ರ ಇರುವುದಾಗಿ ಕೂಡಾ ಮಠದ ಸಲಹಾ ಸಮಿತಿಯ ಸದಸ್ಯರುಗಳು ಹಾಗೂ ಭಕ್ತಾಧಿಗಳು ಮಾತನಾಡುತ್ತಿರುವುದು ಈ ಸಂಶಯಕ್ಕೆ ಪುಷ್ಠಿ ನೀಡಿದಂತಾಗಿದೆ. ಕಾರಣ ಮುರುಘಾ ಶರಣರನ್ನು ಬಂಧಿಸದಂತೆಯೂ ಸರಕಾರ/ಪೊಲೀಸ್ ಇಲಾಖೆಯ ಮೇಲೆ ಒತ್ತಡ ತರಬೇಕೆಂದು ಕೂಡಾ ಮಠದ ಭಕ್ತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ವಿಷಯವನ್ನು ಈ ಪತ್ರದಲ್ಲಿ ಕಾಣಿಸಲಾಗಿದೆ.

ಲೈಂಗಿಕ ಅತ್ಯಾಚಾರ ದೌರ್ಜನ್ಯ ಸ್ವರೂಪದ ದೂರುಗಳು ದಾಖಲಾಗುವ ಸಂದರ್ಭಗಳಲ್ಲಿ ದೂರಿನಲ್ಲಿ ಹೆಸರಿಸಲಾದ ವ್ಯಕ್ತಿಗಳ ಮೇಲೆ ಎಫ್.ಐ.ಆರ್
ದಾಖಲಾದ ನಂತರ ಆ ವ್ಯಕ್ತಿಗಳನ್ನು ಬಂಧಿಸಲು/ಪೊಲೀಸ್‌ ವಶಕ್ಕೆ ಪಡೆಯಲು ಇರುವ ಕಾಲಾವಧಿಗೆ ಇಲಾಖೆಯ ನಿಯಮಾವಳಿ/ಮಾರ್ಗಸೂಚಿ/ಸುತ್ತೋಲೆಗಳು ಯಾವುದು ಇರುವುದಿಲ್ಲವೆಂದು ಪೊಲೀಸ್ ಪ್ರಧಾನ ಕಛೇರಿಯೆ ಮಾಹಿತಿ ಹಕ್ಕಿನಿಂದ ಮಾಹಿತಿ ನೀಡಿರುತ್ತದ.

ಆದ್ದರಿಂದ ಸದರ ಪತ್ರದಲ್ಲಿರುವ ಪ್ರತಿಯೊಂದು ಅಂಶಗಳನ್ನು ಪರಿಶೀಲಿಸಿ, ಈ ಪ್ರಕರಣದ ಕುರಿತು ಸೂಕ್ತ ಕ್ರಮ ಕೈಗೊಂಡು ಸರಕಾರ ತೆಗೆದುಕೊಂಡ ಕ್ರಮದ ಬಗ್ಗೆ ಹಿಂಬರಹ ನೀಡುವಂತೆ ಕೂಡಾ ಈ ಪತ್ರದಲ್ಲಿ ವಿನಂತಿಸಲಾಗಿದೆ.