Belagavi News In Kannada | News Belgaum

ಓರ್ವ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಇಬ್ಬರ ಬಂಧನ

ಬೆಳಗಾವಿ- ಇಬ್ಬರು ಗೆಳೆಯರು ಸೇರಿಕೊಂಡು ಓರ್ವ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಬೆಳಗಾವಿಯಲ್ಲಿ ನಡೆಸಿದ್ದು ಈ ಪ್ರಕರಣಕ್ಕೆ ಸಮಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ.

ಈ ಘಟನೆ ಬೆಳಗಾವಿಯ ಮಾರ್ಕೆಟ್ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಇಬ್ಬರು ಗೆಳೆಯರು ಸೇರಿಕೊಂಡು ಅನಗೋಳಕ್ಕೆ ಹೋಗುವ ಸಿಬಿಟಿ ಬಸ್ಸಿನಲ್ಲಿ ಮಹಿಳೆಗೆ ಎನೊ ಸುಳ್ಳು ಹೇಳಿ ಪುಸಲಾಯಿಸಿ ,ನಂತರ ಅನಗೋಳ ಪ್ರದೇಶದ ಕೋಣೆಯೊಂದರಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆ ಹೇಳಿರುವುದಾಗಿ ತಿಳಿದು ಬಂದಿದೆ.

ಆತ್ಯಾಚಾರಕ್ಕೊಳಗಾದ ಮಹಿಳೆ ಮೂಲತಃ ಬೆಳಗಾವಿ ನಗರದವಳಾಗಿದ್ದಾಳೆ,ನಾಲ್ಕು ವರ್ಷದ ಹಿಂದೆ ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ಗ್ರಾಮವೊಂದರ ಯುವಕನ ಜೊತೆ ಈ ಮಹಿಳೆಯ ಮದುವೆಯಾಗಿತ್ತು,ಎರಡು ವರ್ಷದ ಹಿಂದೆ ಗಂಡ ತೀರಿಕೊಂಡ ಹಿನ್ನಲೆಯಲ್ಲಿ ಈ ಮಹಿಳೆ ಗಂಡನ ಮನೆ,ಮತ್ತು ಬೆಳಗಾವಿಯಲ್ಲಿರುವ ತವರುಮನೆ ಎರಡೂ ಕಡೆ ಈ ಮಹಿಳೆ ನೆಲೆಸಿದ್ದಳು. ಎನ್ನಲಾಗುತ್ತಿದೆ

ಎರಡು ದಿನದ ಹಿಂದೆ ಇಬ್ಬರು ಗೆಳೆಯರು ಸೇರಿಕೊಂಡು ಈ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಅತ್ಯಾಚಾರಕ್ಕೊಳಗಾದ ಮಹಿಳೆ ಬೆಳಗಾವಿಯ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನಲೆಯಲ್ಲಿ,ಪ್ರಕರಣಕ್ಕೆ ಸಮಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ನೇಸರಿಗಿ ಗ್ರಾಮದ ಯಲ್ಲಪ್ಪ ನಾಯಿಕ,ಮತ್ತು ಈತನ ಗೆಳೆಯ ದುರ್ಗೇಶ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.