Belagavi News In Kannada | News Belgaum

ಜನರು ಬಡಿಗೆ ಹಿಡಿದು ಹೋಗುವ ಕಾಲ ಬರಲಿದೆ: ಭವಿಷ್ಯ ನುಡಿದ ಕೋಡಿಶ್ರೀ

ಮಂಡ್ಯ: ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಗೆ ಭೇಟಿ ನೀಡಿರುವ ಕೋಡಿ ಮಠದ ಶ್ರೀಗಳು ರಾಜ್ಯಾದ್ಯಂತ ಮಳೆ ಅನಾಹುತ ಮುಂದುವರಿಯಲಿದೆ. ದೇಶದಲ್ಲಿ ಸುನಾಮಿ ಬರುವ ಸಾಧ್ಯತೆಯೂ ಇದೆ ಎಂದು ಅಪಾಯದ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ
ಭೂಮಿಯಿಂದ ಹೊಸ ವಿಷ ಜಂತುಗಳು ಉದ್ಭವಿಸಲಿವೆ. ಜನರು ಓಡಾಡುವಾಗ ಬಡಿಗೆ ಹಿಡಿದು ಹೋಗುವ ಕಾಲ ಬರಲಿದೆ. ಈ ಹಿಂದೆಯೂ ನಾನು ಕೊರೊನಾ ಬಗ್ಗೆ ಭವಿಷ್ಯ ಹೇಳಿದ್ದೆ. ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುವ ಬಗ್ಗೆಯೂ ಹೇಳಿದ್ದೆ ಎಂದು ತಮ್ಮ ತಾಜಾ ಭವಿಷ್ಯವನ್ನು ಸಮರ್ಥಿಸಿಕೊಳ್ಳುವ ಧಾಟಿಯಲ್ಲಿ ಭಯಾನಕ ಭವಿಷ್ಯದ ಬಗ್ಗೆ ಮುನ್ಸೂಚನೆಯನ್ನು ಕೋಡಿ ಮಠದ ಶ್ರೀಗಳು ನೀಡಿದ್ದಾರೆ.///////