Belagavi News In Kannada | News Belgaum

ಅತ್ತಿಗೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಮೈದುನ ಅರೆಸ್ಟ್: ‌ ಹುಬ್ಬಳ್ಳಿ ಖಾಕಿ ಪಡೆ ಭರ್ಜರಿ ಕಾರ್ಯಾಚರಣೆ

ಹುಬ್ಬಳ್ಳಿ: ಕೌಂಟುಬಿಕ  ಕಲಹ ಉಂಟಾಗಿದ್ದು ರೋಚ್ಚಿಗೆದ್ದು ಅತ್ತಿಗೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಮೈದುನನ್ನು, ಕೊಲೆ ಮಾಡಿದ ಇಪ್ಪತ್ನಾಲ್ಕು ಗಂಟೆಯಲ್ಲಿ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಕುಂದಗೋಳ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದ ಸುನಂದಾ ಮೆಣಸಿನಕಾಯಿ ಹತ್ಯೆಯಾದ ದುರ್ದೈವಿಯಾಗಿದ್ದು, ಕಳೆದ ದಿನ ಹಾಡು ಹಗಲೇ ಮೈದುನ ಮಂಜುನಾಥ ತನ್ನ ಅತ್ತಿಗೆಯನ್ನು ಕುಡಗೋಲಿನಿಂದ ಹತ್ಯೆ ಮಾಡಿ ಪರಾರಿಯಾಗಿದ್ದನು.

ಕೊಲೆಯಾದ ಸುನಂದಾ ಸಂಬಂಧಿಗಳ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಕುಂದಗೋಳ ಠಾಣೆಯ ಪೊಲೀಸರು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ರವಾನೆ ಮಾಡಿ ಪರಿಶೀಲನೆ ಕೈಗೊಂಡಿದ್ದರು. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಈಗ ಆರೋಪಿ ಮಂಜುನಾಥನನ್ನು ಬಂಧಿಸಿ ಕಂಬಿಹಿಂದೆ ತಳ್ಳಿದ್ದಾರೆ.