Belagavi News In Kannada | News Belgaum

ಯಮಕನಮರಡಿ: ವರದಿ ಬ್ರಹ್ಮಾನಂದ ಪತ್ತಾರ ಯಮಕನಮರಡಿ ಯುವಕನ ಕೊಲೆಗಾರರ ಬಂಧನ ..!

ಕೊಲೆಗೆ ಕಾರಣವಾಯ್ತಾ ಕಡಲಗಿ ಗ್ರಾಮದಲ್ಲಿನ ಜಗಳ..?

ಬೆಳಗಾವಿ: ಯಮಕನಮರಡಿಯ ಹತ್ತರಕಿಯಲ್ಲಿ 28 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದ ವಿನಾಯಕ ಹೊರಕೇರಿ ಎಂಬಾತನನ್ನು ಮರುದಿನ ಸೆ.5 ರಂದು ಸಂಜೆ ಬೈಕ್ ನಲ್ಲಿ ಬರುವಾಗ ಬೆನ್ನಟ್ಟಿ ಬಂದ ದುಷ್ಕರ್ಮಿಗಳು ಗ್ಯಾಂಗ್ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಬೆಳಗಾವಿ ಎಸ್ ಪಿ ಸಂಜೀವ ಪಾಟೀಲ ನೇತೃತ್ವದಲ್ಲಿ ಬಂಧಿಸಿದ್ದಾರೆ.ಇದು ಮೆಲ್ನೋಟಕ್ಕೆ ಸುಪಾರಿ ಹತ್ಯೆ ಎಂದು ಅಂದಾಜಿಸಲಾಗಿತ್ತು. ಆದರೆ ಕೊಲೆಗೆ ೨೦೧೭ ರಲ್ಲಿ ಮಹಾರಾಷ್ಟ್ರದ ಕಡಲಗಿ ಗ್ರಾಮದಲ್ಲಿ ನಡೆದ ಹಳೇ ವೈಷಮ್ಯವೇ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಕಡಲಗಿ ಗ್ರಾಮದಲ್ಲಿ ಜಗಳವಾದಾಗಿನಿಂದ ಇವರ ಹಾಗೂ ಕೊಲೆಯಾದ ವಿನಾಯಕ ಗ್ಯಾಂಗಿನ ಮಧ್ಯೆ ಜಿದ್ದಾಜಿದ್ದಿ ನಡಿತಾನೆ ಇತ್ತು. ಇಬರ ಗ್ಯಾಂಗಿನ ಮತ್ತೊಬ್ಬರಿಗೆ ಮಾಹಿತಿ ರವಾನಿಸುತ್ತಿದಚದ ಎಂಬ ಪ್ರಬಲ ಕಾರಣಕ್ಕಾಗಿ ಇತನನ್ನು ಮುಗಿಸಿರುವುದಾಗಿ ತಿಳಿದು ಬಂದಿದೆ.ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದ ಪೊಲೀಸರು ಪ್ರಮುಖ ಆರೋಪಿಗಳಾದ
1. ಸಂತೋಷ ಗುರವ್
2.ಈರಣ್ಣ ಹಿಣ್ಣಕ್ಕನವರ್
3.ಆದಿತ್ಯ ಪ್ರಕಾಶ ಗಣಾಚಾರಿ
4 ಮಹಾಂತೇಶ ಈರಪ್ಪ ಕರಗುಪ್ಪಿ
5.ಶನೂರ ಗಜರಾಸಾಬ್ ನದಾಫ್ ಎಂಬುವರನ್ನು ಬಂಧಿಸಿ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.