Belagavi News In Kannada | News Belgaum

ಮಳೆಗೆ ಮನೆಗೋಡೆ ಕುಸಿದು ಮಹಿಳೆ ಸಾವು

ಬೆಳಗಾವಿ: ಮಳೆಗೆ ಮನೆಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸವದತ್ತಿ ತಾಲೂಕಿನ  ಹೂಲಿಕಟ್ಟಿ ಗ್ರಾಮದಲ್ಲಿ ರವಿವಾರ ನಡೆದಿದೆ.

ಹೂಲಿಕಟ್ಟಿ ಗ್ರಾಮದ  ಗಂಗವ್ವ ರಾಮಣ್ಣ ಮೂಲಿಮನಿ(55) ಮೃತ ಮಹಿಳೆ. ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿರುವದರಿಂದ ಹೂಲಿಕಟ್ಟಿ ಗ್ರಾಮದಲ್ಲಿ ರವಿವಾರ ಬೆಳಗ್ಗೆ ಮನೆ ಗೋಡೆ ಕುಸಿದಿದೆ.  ಮನೆಯಲ್ಲೇ ಮಲಗಿದ್ದ ಗಂಗವ್ವನ ಮೇಲೆ ಗೋಡೆ ಬಿದಿದ್ದರಿಂದ  ಅವರಿಗೆ ತೀವ್ರ ಗಾಯಗಳಾಗಿತ್ತು. ತಕ್ಷಣವೇ ಇವರನ್ನು ಸ್ಥಳಿಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಗಂಗವ್ವ ಮೃತಪಟ್ಟಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. //////