Belagavi News In Kannada | News Belgaum

ಪತ್ರಕರ್ತರ ಸೌಹಾರ್ದಯುತ ಬೆಳವಣಿಗೆಗೆ ಶ್ರಮವಹಿಸಿ

 

ಕೆಂಭಾವಿ: ಯಾದಗಿರಿ ಜಿಲ್ಲೆಯಾದ್ಯಂತ ಕೆಜೆಯು ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಪತ್ರಕರ್ತರ ಸೌಹಾರ್ದಯುತ ಬೆಳವಣಿಗೆಗೆ ಶ್ರಮವಹಿಸುವಂತೆ ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ಯೂನಿಯನ್ ಕಾರ್ಯಕಾರಿ ಸಮಿತಿಯ ಸದಸ್ಯ ವೀರಣ್ಣ ಕಲಕೇರಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಹಾಪೂರ ವಾಣಿ ಪತ್ರಿಕೆಯ ಸಂಪಾದಕ ಈರಣ್ಣ ಹಾದಿಮನಿ ಯವರಿಗೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ಕೆಜೆಯು) ಜಿಲ್ಲಾಧ್ಯಕ್ಷರ ನೇಮಕಾತಿ ಆದೇಶ ಪತ್ರ ನೀಡಿ ಗೌರವಿಸಿ ಮಾತನಾಡಿದ ಅವರು ಬರುವ ದಿನಗಳಲ್ಲಿ ಕೆಜಿಯು ಸಂಘಟನೆಯ ಧೆಯೋದ್ದೇಶದೊಂದಿಗೆ ಎಲ್ಲಾ ತಾಲೂಕು ಘಟಕಗಳ ರಚನೆಗೆ ಕ್ರಮವಹಿಸುವಂತೆ ಹೇಳಿದರು.

ಪತ್ರಕರ್ತರಾದ ಗಿರೀಶ ಬ್ಯಾಕೋಡ್, ವೆಂಕಟೇಶ್ ಆಲೂರು, ಚನ್ನಬಸಪ್ಪ ದೊಡ್ಮನಿ, ವೆಂಕಟೇಶ್ ದೊರೆ, ಚಂದ್ರಶೇಖರ ಎಮ್ ಕಟ್ಟಿಮನಿ, ಅಲಿಯಾಸ್ ಪಟೇಲ್, ಬಸವಣ್ಣೆಪ್ಪ ಮಾಳಳ್ಳಿಕರ್, ಶಿವಶರಣ ನಾಗರಡ್ಡಿ, ಮಂಜು ಕೊಬ್ಬಿನ, ಡಾ. ಯಂಕನಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.