Belagavi News In Kannada | News Belgaum

ಆರ್ ಟಿಒ ಕಚೇರಿ ಅಧೀಕ್ಷಕ ವಿರುದ್ಧ ಕ್ರಮಕ್ಕೆ ಒತ್ತಾಯ

ಚಿಕ್ಕೋಡಿ: ಇಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧೀಕ್ಷಕ ಉಮೇಶ ಗಂಗಣಹಳ್ಳಿ ಅವರು ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಸಾರ್ವಜನಿಕರಿಗೆ ಅತೀವ ತೊಂದರೆ ಮತ್ತು ಅಸಭ್ಯ ಹಾಗೂ ಅವಾಚ್ಯ ಶಬ್ದಗಳಿಂದ ಸಾರ್ವಜನಿಕರಿಗೆ ನಿಂದಿಸುತ್ತಿದ್ದು, ಮೇಲಾಧಿಕಾರಿಗಳು ಕೂಡಲೇ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಚಿಕ್ಕೋಡಿ ನಗರದ ಸಾರ್ವಜನಿಕರು ಆರ್‌ ಟಿಒ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಚೇರಿ ಅಧೀಕ್ಷಕ ಉಮೇಶ ಗಂಗನಹಳ್ಳಿ ಅವರು ಹೊಸ ಮತ್ತು ನವೀಕರಣ ಡಿಎಲ್ ಮತ್ತು ವಾಹನಗಳ ನೊಂದಣಿ ಪತ್ರಗಳನ್ನು ಸಮಯಕ್ಕೆ ಸರಿಯಾಗಿ ಸಾರ್ವಜನಿಕರಿಗೆ ವಿತರಿಸದೆ ಅವರ ಸುಪರ್ದಿಯಲ್ಲಿಯೇ ಇಟ್ಟುಕೊಂಡು ಸಾರ್ವಜನಿಕರಿಗೆ ಮೂರು-ನಾಲ್ಕು ತಿಂಗಳ ನಂತರ ಒಂದು ಕಾರ್ಡಗೆ 50 ರಿಂದ 100 ಪಡೆದು ವಿತರಿಸುತ್ತಿದ್ದಾರೆ.
ಇಲಾಖೆ ನಿಯಮದ ಪ್ರಕಾರ ಅರ್ಜಿದಾರರು ಅಂಚೆ ವೆಚ್ಚವನ್ನು ಚಲನ ಮೂಲಕ ಸಂಬಂಧಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ ಈ ಅಧಿಕಾರಿ ಅರ್ಜಿದಾರರ ಕಡೆಯಿಂದ ಹಣ ವಸೂಲಿ ಮಾಡುತ್ತಾರೆ. ಕಚೇರಿ ನಿಯಮದಂತೆ ಒಂದು ತಿಂಗಳ ಒಳಗಾಗಿ ಅರ್ಜಿದಾರರಿಗೆ ಅಂಚೆ ಮೂಲಕ ಕಾರ್ಡ ತಲುಪಬೇಕು. ಆದರೆ ಈ ಅಧಿಕಾರಿಯ ಬೇಜವಾಬ್ದಾರಿ ತನದಿಂದ ಅರ್ಜಿದಾರರಿಗೆ ಸಮರ್ಪಕವಾಗಿ ಹೊಸ ವಾಹನ ನೊಂದಣಿ ಪತ್ರ ಮತ್ತು ಡಿಎಲ್ ಪತ್ರ ತಲುಪುತ್ತಿಲ್ಲ, ಕೂಡಲೇ ಈ ಅಧಿಕಾರಿ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಅಪ್ಪಾಸಾಹೇಬ ಬ್ಯಾಳಿ, ಸುದರ್ಶನ ತಮ್ಮನ್ನವರ, ರಾವಸಾಹೇಬ ಫಕೀರೆ, ನಂದಕುಮಾರ ದರಬಾರೆ, ರಾಘವೇಂದ್ರ ಸನದಿ, ಮನೋಹರ ಮಾಳಕರಿ, ಅಶೋಕ ಮಾಳಗೆ, ಡಿ.ಎ.ಜಾಧವ, ವಿಜಯ ಮೊಟ್ಟನ್ನವರ, ವಿನೋಧ ಚಿತಳೆ,ಬಾಬುರಾವ ಘಟ್ಟಿ, ಶ್ರವಣ ತಳವಾರ ಮುಂತಾದವರು ಇದ್ದರು./////