Belagavi News In Kannada | News Belgaum

ವಿದ್ಯುತ್ ತಂತಿ ತಗುಲಿ ಗೋಕಾಕ ಯುವಕ ಸಾವು

ಬೆಳಗಾವಿ: ವಿದ್ಯುತ್ ತಂತಿ ತಗುಲಿ 25 ವರ್ಷದ ಯುವಕನೋರ್ವ ಮೃತಪಟ್ಟ ಘಟನೆ ಗೋಕಾಕ ತಾಲೂಕಿನ ಗಿಣಿ ಹೊಸೂರಿನ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ಯುವಕನನ್ನು ಕಣ್ಣಪ್ಪ ಭೋವಿ ಎಂದು ಗುರುತಿಸಲಾಗಿದೆ. ಈತನು ತನ್ನ ಜಮೀನಿನಲ್ಲಿ ವಿದ್ಯುತ್ ತಂತಿ ಜೋಡಿಸಲು ಹೋದಾಗ ಈ ಅವಘಡ ನಡೆದಿದೆ. ಈ ಕುರಿತು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.//////