Belagavi News In Kannada | News Belgaum

2 ವರ್ಷದ ಪುತ್ರನ ಜೊತೆಗೆ ನದಿಗೆ ಹಾರಿದ ತಾಯಿ

ಬೆಳಗಾವಿ: ಎರಡು ವರ್ಷದ ಪುತ್ರನ ಜೊತೆಗೆ ತಾಯಿಯೊಬ್ಬಳು ನದಿಗೆ ಹಾರಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.
ರುದ್ರವ್ವ ಬಸವರಾಜ್ ಬನ್ನೂರು (30) ಶಿವಲಿಂಗಪ್ಪ ಬನ್ನೂರ (2) ನದಿಗೆ ಹಾರಿದ ದುರ್ದೈವಿಗಳಾಗಿದ್ದಾರೆ. ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಪಕ್ಕದ ಮಲಪ್ರಭಾ ನದಿಗೆ ತಾಯಿ-ಮಗು ಹಾರಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನದಿ ಪಕ್ಕ ಧರಿಸಿದ ಚಪ್ಪಳಿ ಬಿಟ್ಟು ಮಲಪ್ರಭಾ ನದಿಗೆ ಹಾರಿದ ತಾಯಿ-ಮಗು ಶೋಧ ಕಾರ್ಯಾಚರಣೆ ನಡೆದಿದೆ. ತಾಯಿ-ಮಗು ನದಿಗೆ ಹಾರಿರುವುದನ್ನು ನೋಡಿದ ಪ್ರತ್ಯಕ್ಷ ದರ್ಶಿಯಿಂದ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ.ನದಿಯ ಪಕ್ಕದಲ್ಲಿರುವ ಚಪ್ಪಲಿ ನನ್ನ ಪತ್ನಿಯದ್ದು ಎಂದು ಗಂಡ ಬಸವರಾಜ್ ಖಚಿತಪಡಿಸಿದ್ದಾನೆ.
ಸ್ಥಳಕ್ಕೆ ರಾಮದುರ್ಗ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದಾರೆ.ತಾಯಿ-ಮಗುವಿಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ.ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪುತ್ರನ ಜೊತೆಗೆ ಇಡಗುಂಡಿಯ ತವರು ಮನೆಯಲ್ಲಿ ವಾಸವಿದ್ದ ರುದ್ರವ್ವ ಳನ್ಬು ಮನವೊಲಿಸಿ ರಾಮದುರ್ಗಗೆ ಕರೆತರಲಾಗಿತ್ತು.ಆಟೋ ಬಾಡಿಗೆ ಕೊಡಲು ಚಿಲ್ಲರೆ ತರಲು ಹೋದಾಗ ರುದ್ರವ್ವ ಪುತ್ರನ ಜೊತೆಗೆ ನದಿಗೆ ಹಾರಿದ್ದಾಳೆ ಎಂದು ತಿಳಿದು ಬಂದಿದೆ.///////