Belagavi News In Kannada | News Belgaum

ಕುರಿ ಕಳವು ಮಾಡಿದ ಆರೋಪಿತನ ಬಂಧನ:

ಕುರಿ ಕಳವು ಮಾಡಿದ ಆರೋಪಿತನ ಬಂಧನ:

ಯರಗಟ್ಟಿ: ಸಮೀಪದ ಮುರಗೋಡ ಠಾಣಾ ವ್ಯಾಪ್ತಿಯಲ್ಲಿ ಇತ್ತಿಚೆಗೆ ಕುರಿ ಕಳ್ಳತನ ಪ್ರಕರಣ ವರದಿಯಾಗಿದ್ದು ಹಲಕಿ ಕ್ರಾಸ ಹತ್ತಿರ 30 ಕುರಿಗಳು ಕಳ್ಳತನವಾದ ಕುರಿತು ಈ ಬಗ್ಗೆ ಮುರಗೋಡ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮುರಗೋಡ ಪೋಲಿಸರು ತನಿಖೆ ಕೈಗೊಂಡು ಪ್ರಕರಣವನ್ನು ಬೇದಿಸಿ ಅಶೋಕ ಬಸಪ್ಪ ಮಾಡಮಗೇರಿ ಎಂಬ ಆರೋಪಿಯನ್ನು ಬಂದಿಸಿ ಅವನಿಂದ ಕುರಿ ಕಳ್ಳತನಕ್ಕೆ ಸಂಬಂದ 1,00,000/- (ಒಂದು ಲಕ್ಷ ) ರೂಪಾಯಿ ಕೃತ್ಯಕ್ಕೆ ಉಪಯೋಗಿಸಿದ ಅಶೋಕಾ ಲೇಲ್ಯಾಂಡ ಗೂಡ್ಸ್ ಗಾಡಿಯನ್ನು ಅಂದಾಜು ಕಿಮ್ಮತ್ತಿನ 2,15,000/ – ರೂ ವಶಪಡಿಸಿಕೊಂಡು ಒಟ್ಟು 3,15,000/- ರೂಪಾಯಿ ಕಿಮ್ಮತ್ತಿ ಮಾಲನ್ನು ವಶಪಡಿಸಿಕೊಂಡಿದ್ದು.

ಕೃತ್ಯದಲ್ಲಿ ಭಾಗಿಯಾಗಿದ್ದ ಇತರರು ತಲೆ ಮರೆಸಿಕೊಂಡಿದ್ದು ಈ ಬಗ್ಗೆ ತಪಾಸಣೆ ಜಾರಿಯಲ್ಲಿ ಇದೆ.

ಈ ಕಾರ್ಯಾಚರಣೆಯಲ್ಲಿ ಡಿ.ಎಸ್.ಪಿ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಮುರಗೋಡ ಸಿ.ಪಿ.ಐ. ಮೌನೆಶ್ವರ ಮಾಲಿಪಾಟೀಲ, ಪ್ರೋಬೆಶನರಿ ಪಿ ಎಸ್ ಐ ಬಸನಗೌಡ ನಿರ್ಲಿ, ಕುಮಾರಿ ಲಕ್ಷ್ಮೀ ಬಿರಾದಾರ ಸಿಬ್ಬಂದಿಯರಾದ ವೈ ಎಚ್ ಕಡಕೋಳ, ಎಚ್ ಆರ್ ನ್ಯಾಮಗೌಡ್ರ, ಕೆ ಬಿ ಅಲಗರಾವುತ, ಎಮ್ ಬಿ ಸಣ್ಣನಾಯ್ಕರ, ಎಮ್. ಎಸ್. ಅವರಾದಿ, ಐ ಎಸ್ ವಕ್ಕುಂದ, ವಿ. ಡಿ. ಸಕ್ರಿ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ತಂಡದಲ್ಲಿ ಇರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬೆಳಗಾವಿ ಎಸ್ ಪಿ ಡಾ. ಸಂಜೀವ ಪಾಟೀಲ ಅವರು ಕಾರ್ಯ ವೈಖರಿ ಬಗ್ಗೆ ಪ್ರಶಂಸಿಸಿದ್ದಾರೆ. ( ವರದಿ ಬ್ರಹ್ಮಾನಂದ ಪತ್ತಾರ )