Belagavi News In Kannada | News Belgaum

ಬೆಳಗಾವಿ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಅರಣ್ಯ ಪ್ರಾಣಿಗಳ ಬೇಟೆಯಾಡುವ ಕಳ್ಳರಿಗೆ ಸಾತು ನೀಡುತ್ತಿದ್ದಾರಾ..?

ಇನ್ನೂ ಹೆಚ್ಚಿನ ತನಿಖೆ ನಡೆದಿದ್ದು ಇತರ ಮೂವರ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ

ನಾಗರಗಾಳಿ :  ಕಾಡುಕೋಣ ಬೇಟೆಯಾಡಲು ಹೋಗಿ ಪೊಲೀಸರ ಅತಿಥಿಯಾದ ಕಿರಾತಕರು ಖಾನಾಪೂರ ತಾಲೂಕಿನ ನಾಗರಗಾಳಿ ಅರಣ್ಯ ವಲಯದಲ್ಲಿ ಮೇರಡಾ ಶಾಲೆಯಲ್ಲಿ ಕಾಡುಕೋಣ ಭೆಟೆಯಾಡಿದ ಆರೊಪಿಯನ್ನ ಬಂದಿಸಲಾಗಿದೆ ಹಲಸಿ ಗ್ರಾಮದ ಇಬ್ರಾಹಿಂ ಅಬ್ಬಾಸಿ ಬಂದಿತ ಆರೋಪಿ ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆದಿದ್ದು ಇತರ ಮೂವರ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ.ಒಂದು ಕ್ರೊಜರ್ ಒಂದು ಬೈಕ್ ಜಪ್ತಿ ಮಾಡಲಾಗಿದೆ.ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡು ರಾಜ್ಯದ ಗಡಿ ಭಾಗವಾದ ಗೋವಾಗೆ ಪಲಾಯನ ಬೆಳೆಸಿದ್ದಾರೆಂದು ಸುತ್ತಮುತ್ತಲಿನ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.ಇನ್ನೂ ಈ ಪ್ರಕರಣಕ್ಕೆ ಸಂಬಂದಿಸಿದಂತೆ ಅನೇಕರ ಹೆಸರುಗಳನ್ನ ಬಂದಿತ ಆರೋಪಿಗಳ ಹೆಸರು ಠಾಣೆಯಲ್ಲಿ ಹೇಳಿದ್ದಾರೆ .

ಆದರೆ ಹಲವು ರಾಜಕೀಯ ಒತ್ತಡದಿಂದ ಇನ್ನೂ ಕೆಲ ಆರೋಪಿಗಳನ್ನ ಹೆಡೆಮುರಿ ಕಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಬೇಕಿದೆ ಇನ್ನೂ ಖಾನಾಪೂರ ತಾಲೂಕಿನ ಹಲಸಿ ಗ್ರಾಮದಲ್ಲಿ ಅನಧಿಕೃತ ನಾಡ ಪಿಸ್ತೂಲ್ ಗಳು ಹಾಗೂ ರೈಪಲ್ ಗಳಿದ್ದು ಅರಣ್ಯ ಇಲಾಖೆಗೆ ಖಚಿತ ಮಾಹಿತಿ ಇದ್ದರು ಅಧಿಕಾರಿಗಳು ಕಣ್ಣುಮುಚ್ಚಾಲೆ ಆಟ ಆಡುತ್ತಿದ್ದಾರೆ.ಈ ಹಿಂದೆ ಇದೇ ರೀತಿ ಪ್ರಕರಣವಾದಾಗ ಜಿಲ್ಲಾ ಅರಣ್ಯಾಧಿಕಾರಿಗಳಿಗೆ ಜಿಂಕೆ ಭೆಟೆ ಆಡಿದ ಬಗ್ಗೆ ಮಾಹಿತಿ ಕೊಟ್ಟಿದ್ದೆವೂ ಆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆರೋಪಿಗಳು ಕಂಡು ಕಾಣದಂತೆ ಅಧಿಕಾರಿಗಳ ಮುಂದೆಯೆ ರಾಜಾರೋಷವಾಗಿ ತಿರುಗಿತ್ತಿದ್ದರು.

 

ಅರಣ್ಯ ಅಧಿಕಾರಿಗಳು ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಎಂದರೆ ಮೂರು ಮತ್ತೊಂದು ನಾಲ್ಕು ಎಂಬಂತೆ ವರ್ತಿಸುತ್ತಿರುವದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಡುತ್ತಿದೆ.

 

ಇನ್ನೂ ಇದೇ ರೀತಿ ಈ ಆರೋಪಿಗಳ ಜೊತೆ ಶಾಮೀಲಾಗಿ ಎಷ್ಟು ಕಾಡು ಪ್ರಾಣಿಗಳನ್ನ ಜಿವಂತ ಸುಟ್ಟು ತಿಂದು ಮತ್ತು ಲಾಭಕ್ಕಾಗಿ ಜಿಂಕೆ ಕಾಡುಕೋಣ ಕಾಡುಹಂದಿ ಮಾಂಸವನ್ನ ಹೊರರಾಜ್ಯಕ್ಕೆ ಅಂದರೆ ಗೋವಾ ಮಹಾರಾಷ್ಟ್ರ ರಪ್ತು ಮಾಡುತ್ತಾರೆಂದು ಖಚಿತ ಮಾಹಿತಿ ಇದೆ ಆದರೆ ಅರಣ್ಯ ಅಧಿಕಾರಿಗಳು ಈ ಪ್ರಕರಣದಲ್ಲಿ ನಿಜವಾದ ಆರೋಪಿಗಳ ಹಿಡಿಯುವಲ್ಲಿ ಯಾವರೀತಿ ಬಲೆ ಬೀಸಿ ಹೆಡೆಮುರಿ ಕಟ್ಟುತ್ತಾರೆಂದು ಕಾದುನೋಡಬೇಕಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಟೆ ಯಾಡುವ ಕಿರಾತಕರ ಹೆಸರುಗಳನ್ನ ಮುಂದಿನ ಸಂಚಿಕೆಯಲ್ಲಿ ಹೆಳುತ್ತೆವೆ.ಅಥವಾ ಇಷ್ಟಕ್ಕೆ ಅರಣ್ಯ ಅಧಿಕಾರಿಗಳು ಕಾರ್ಯಚಕಿತರಾಗಿ ತಲೆಮರೆಸಿಕೊಂಡ ಆರೋಪಿಗಳನ್ನ ಹಾಗೂ ಗ್ರಾಮದಲ್ಲೆ ಇದ್ದು ಗೊತ್ತೆ ಇಲ್ಲವೆಂಬಂತೆ ನಾಟಕವಾಡುವ ಖತರ್ನಾಕ ಗ್ಯಾಂಗ ಬಂದಿಸುತ್ತಾರಾ ಎಂದು ಕಾದುನೊಡಬೇಕಿದೆ.

 

ಕಾಡು ಪ್ರಾಣಿ ಮೂಕ ಪ್ರಾಣಿ ಬೇಟೆಯಾಡುವದೊಂದೆ ಇವರ ಗುರಿ ದಟ್ಟ ಅಭಯಾರಣ್ಯದಲ್ಲಿ ಇವರು ಮಾಡಿದ್ದೆ ಆಟ ಹಿಡಿದದ್ದೆ ಬೇಟೆ ಕಾಡುಪ್ರಾಣಿಗಳ ಮಾಂಸದ ರುಚಿ ಇವರ ನಾಲಿಗೆ ಮೇಲೆ ಅಂಟಿಕೊಂಡಿದೆ ಹೀಗಾಗಿ ಇವರದ್ದೆ ಒಂದು ಬೇಟೆ ಗ್ಯಾಂಗ ಇದೆ.ಈ ಗ್ಯಾಂಗ ಪತ್ತೆ ಹಚ್ಚಿ ಕಾನೂನಿನ ಪ್ರಕಾರ ಕ್ರಮ ಕೈಗೊಂಡು ಜೈಲಿಗಟ್ಟಿದರೆ ಕಾಡು ಪ್ರಾಣಿಗಳ ಜೀವ ಉಳಿಸಲು ಬರುತ್ತದೆ.ಈ ರೀತಿ ದಿನಾಲೂ ಬೇಟೆ ಆಡಿಕೊಂಡು ಪಿಸ್ತೂಲ್ ಸೌಂಡಗೆ ಹಾಗೂ ಆರ್ಬಟಕ್ಕೆ ಜೀವ ಉಳಿಸಿಕೊಳ್ಳಲು ಕಾಡು ಪ್ರಾಣಿಗಳು ನಾಡಿಗೆ ಬರುತ್ತಿರುವ ಹಲವಾರು ದ್ರಶ್ಯಗಳನ್ನ ಈಗಾಗಲೇ ಬೆಳಗಾವಿ ಜನತೆ ನೋಡಿ ನಿದ್ದೆಗಿಡಾಗಿದೆ. ಈಂತಹ ಪ್ರಕರಣಗಳು ಅರಣ್ಯ ಇಲಾಖೆ ಸಚಿವರಿದ್ದಾಗ ತುಂಬಾ ಕಟ್ಟುನಿಟ್ಟಾಗಿ ಇಟ್ಟಿದ್ದರು.

 

ಇನ್ನು ಅಧಿಕಾರಿಗಳು ಯಾವ ರೀತಿ ಚೆಕ್ ಮೇಟ ಮಾಡುತ್ತಾರೆಂದು ನೋಡಬೇಕಿದೆ.ಇದೇ ರೀತಿ ಕಾಕತಿ ಸಮೀಪದ ಗೋಡಿಹಾಳ ಅರಣ್ಯ ವ್ಯಾಪ್ತಿಯಲ್ಲಿ ಕೂಡ ರಾಷ್ಟಪಕ್ಷಿ ನವೀಲು ಬೇಟೆಗಾರರು ಹೆಚ್ವುತ್ತಿದ್ದು. ಈ ಹಿಂದೆ ಒಂದು ಖಚಿತ ಮಾಹಿತಿ ಮೇರೆಗೆ ಆರೊಪಿಗಳನ್ನ ಬೆನ್ನಟ್ಟಿ ಹೋದಾಗ ಪರಾರಿಯಾಗಿದ್ದರು.

 

ಈ ಪ್ರಕರಣಕ್ಕೆ ಸಂಬಂದಿಸಿದಂತೆ ಕಾಕತಿ ವಲಯ ಅರಣ್ಯ ಅಧಿಕಾರಿಗಳು ಪ್ರಕರಣಕ್ಕೆ ಯಾವ ರೀತಿ ಸುಖಾಂತ್ಯ ಹಾಡಿದ್ದಾರೆ ಎಂಬುದು ಇನ್ನೂವರೆಗೆ ತಿಳಿದು ಬಂದಿಲ್ಲ ಪ್ರಕರಣ ಮುಚ್ಚಿ ಹಾಕಲು ಅಧಿಕಾರಿಗಳೇ ಸಾಥ ನೀಡುತ್ತಾರೆ ಹೀಗಾಗಿ ಬೇಟೆಗಾರರ ಹಾವಳಿ ಹೆಚ್ಚಾಗಿದೆ ಎಂದು ಗ್ರಾಮಸ್ತರು ಕಿಡಿ ಕಾರಿದ್ದಾರೆ.