Belagavi News In Kannada | News Belgaum

ಕರಗುಪ್ಪಿ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟ ; ಮನೆ ಹಾನಿ..! ಪ್ರಾಣಾಪಾಯದಿಂದ ಪಾರಾದ ಪಾಟೀಲ ಕುಟುಂಬ..!

ಹುಕ್ಕೇರಿ: ತಾಲೂಕಿನ ಕರಗುಪ್ಪಿ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟ ; ಮನೆ ಹಾನಿ..!
ಪ್ರಾಣಾಪಾಯದಿಂದ ಪಾರಾದ ಪಾಟೀಲ ಕುಟುಂಬ..!
ಹುಕ್ಕೇರಿ: ತಾಲೂಕಿನ ಕರಗುಪ್ಪಿ ಯಲ್ಲಾಪುರ ಗ್ರಾಮದ ಮನೆಯೊಂದರಲ್ಲಿ ಇಂದು(ಮಂಗಳವಾರ) ಬೆಳಗ್ಗೆ ಸಿಲಿಂಡರ್ ಸ್ಫೋಟ ಆಗಿ ಅಪಾರ ಪ್ರಮಾಣದ ಹಾನಿಯಾಗಿದೆ.
ಗ್ರಾಮದ ಗೌಡ್ರ ಓಣಿಯ ಅಲಗೌಡ ಅಪ್ಪರಾಯಗೌಡ ಪಾಟೀಲ ಎಂಬ ರೈತನ ಮನೆಯಲ್ಲಿ ಅಡುಗೆ ಮಾಡಲು ಓಲೆಯ ಮೇಲೆ ಇಟ್ಟು ಹೊರಗಡೆ ಹೋದ ಸಂಧರ್ಭದಲ್ಲಿ ಸಿಲಿಂಡರ್ ಗ್ಯಾಸ್ ಲೀಕ್ ಆಗಿ ಈ ದುರಂತ ಸಂಭವಿಸಿದೆ. 50 ಪ್ರತಿಶತ ಮನೆ ಸಂಪೂರ್ಣ ಹಾನಿಯಾಗಿದೆ. ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.