Belagavi News In Kannada | News Belgaum

ಮಳೆನೀರು, ಚರಂಡಿ ದುರ್ವಾಸನೆಯಿಂದ ಸಿದ್ದಪೂರ್ ಗ್ರಾಮಕ್ಕೆ ಮುಕ್ತಿ ನೀಡಿದ ತಹಸೀಲ್ದಾರ್ ಜಗದೀಶ್ ಚೌರ್

 

ಹುಣಸಗಿ : ಸಮೀಪದ ಸಿದ್ದಪೂರ ಬಿ ಗ್ರಾಮದಲ್ಲಿ, ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ, ಚರಂಡಿ, ವ್ಯವಸ್ಥೆಯನ್ನು ಸರಿಪಡಿಸಬೇಕೆಂದರೆ ಗ್ರಾಮದ ಕೆಲವು ವ್ಯಕ್ತಿಗಳು ಸಂಗ್ರಹವಾದ ಮಳೆಯ ನೀರು ನಮ್ಮ ಹೊಲಗಳಿಗೆ ನುಗ್ಗುತ್ತದೆ ಎಂದು ಹೊಲಗಳಿಗೆ ತಡೆಹೊಡ್ದು ಹಾಕಿ ವಿರೋಧ ಮಾಡುತ್ತಿದ್ದರು, ಈ ಸಮಸ್ಯೆಯಿಂದ ಗ್ರಾಮಸ್ಥರಿಗೆ ತುಂಬಾ ತೊಂದರೆ ಆಗುತ್ತಿತ್ತು, ಜನಜೀವನ ಅಸ್ತ ವ್ಯಸ್ತವಾಗಿ, ಜನರಿಗೆ ರೋಗಗಳು ಬರುವ ಸಾಧ್ಯತೆಗಳಿದ್ದವು. ಸದರಿ ಘಟನೆಯು ಗಮನಕ್ಕೆ ಬಂದ ತಕ್ಷಣವೇ ಹುಣಸಗಿ ತಹಸೀಲ್ದಾರ್ ಜಗದೀಶ್ ಚೌರ್ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ, ಇದರಿಂದ ಬಹು ವರ್ಷಗಳಿಂದ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿ ನಿಟ್ಟುಸಿರು ಬಿಡುವಂತೆ ಆಗಿದೆ. ತಹಸೀಲ್ದಾರ್ ಜಗದೀಶ್ ಚೌರ್ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನರ ಕ್ಯಾರೇ ಅನ್ನದ ಅಧಿಕಾರಿಗಳ ಮಧ್ಯೆ ಹುಣಸಗಿ ತಹಸೀಲ್ದಾರ್ ಅವರ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ಹುಣಸಗಿ ಸಿ,ಪಿ,ಐ, ಎಮ್ ಬಿ ಚಿಕ್ಕಣ್ಣವರ, ಇಒ, ಬಸವರಾಜ್ ಸ್ವಾಮೀ ಹಿರೇಮಠ, ಪಿ,ಎಸ್,ಐ ಚಿದಾನಂದ ಸೌದಿ, ಸೇರಿದಂತೆ ಸಾರ್ವಜನಿಕರು ಇದ್ದರು.