Belagavi News In Kannada | News Belgaum

ಆರೋಗ್ಯವಂತ ಮಕ್ಕಳಿಂದ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದು ಅಂಗನವಾಡಿ ಶಿಕ್ಷಕಿ ಮಹಾನಂದಾ ಪುರಾಣಿಕ


ಆರೋಗ್ಯವಂತ ಮಕ್ಕಳಿಂದ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದು ಅಂಗನವಾಡಿ ಶಿಕ್ಷಕಿ ಮಹಾನಂದಾ ಪುರಾಣಿಕ ಹೇಳಿದರು.
ನಗರದ ಶ್ರೀ ದಾನೇಶ್ವರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮೂಡಲಗಿ ತಾಲೂಕು – ಶಿಂಧಿಕುರಬೇಟ ವಲಯ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ ಪೋಷಣ್
ಹಾಗೂ ಪ್ರಧಾನ ಮಂತ್ರಿ ಮಾತೃವಂದನಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಆರೋಗ್ಯವಾಗಿದ್ದರೆ ಮಾತ್ರ ಆರೋಗ್ಯ ಮತ್ತು ಸದೃಢ ದೇಶ ನಿರ್ಮಿಸಲು ಸಾಧ್ಯ. ಪೌಷ್ಠಿಕಾಂಶವಿರುವ ಆಹಾರ ಸೇವಿಸುವುದರ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮಗು ಹೊಟ್ಟೆಯಲ್ಲಿದ್ದಾಗಲೇ ಗರ್ಭಿಣಿ ಯಾವ ರೀತಿ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಹಾಗೂ ಮಗು ಜನನದ ಬಳಿಕ ಬಾಣಂತಿ ಹಾಗೂ ಮಗು ಯಾವ ರೀತಿಯ ಪೌಷ್ಠಿಕ ಆಹಾರ ಸೇವಿಸುವುದರ ಮೂಲಕ ಉತ್ತಮ ಆರೋಗ್ಯ ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.

ಜೆಜಿಕೋ ವೈದ್ಯಕೀಯ ಕಾಲೇಜಿನ ಡಾ- ಶಶಿಕಲಾ ಹೊಸಮಠ ಮಾತನಾಡಿ, ಗರ್ಭಿಣಿಯರಿಗೆ ಪೌಷ್ಠಿಕಯುಕ್ತ ಆಹಾರ ತುಂಬ ಅವಶ್ಯಕವಾಗಿರುತ್ತದೆ. ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾಕಾರ್ಯಕರ್ತರು ಗರ್ಭಿಣಿಯರಿಗೆ ಪೌಷ್ಠಿಕಯುಕ್ತ ಆಹಾರವನ್ನು ತಲುಪಿಸುತ್ತಿದ್ದಾರೆ. ತೀವ್ರ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳನ್ನು ಹೊರ ತರಬೇಕು ಎಂದು ತಿಳಿಸಿದರು. ಹಾಗೂ ಗರ್ಭಿಣಿಯರಿಗೆ ಸಿಮಂತ ಕಾರ್ಯಕ್ರಮವನ್ನು ಸಹ ಮಾಡಿದರು.
ಈ ಸಂಧರ್ಭದಲ್ಲಿ ಶಿಶು ಅಭಿವೃದ್ಧಿ ಇಲಾಖೆಯ ಉಮಾ ಬಳ್ಳೋಳ್ಳಿ, ಮೆಲ್ವಿಚಾರಕರಾದ ಎನ್ ಎ ನಧಾಫ್, ಶಿಕ್ಷಕಿಯರಾದ ಮಹಾನಂದಾ ಪುರಾಣಿಕ, ಶೋಭಾ ಹಿರೇಮಠ, ಶೋಭಾ ಹಿರೇಮಠ
ಶೆಕುಂತಲಾ ಬೆನಚಿನಮರಡಿ,ಗಂಗುತಾಯಿ ಸುಭಾಪುರಮಠ,ಸುಜಾತಾ ಕನ್ನನವರ,ನಿಮ೯ಲಾ ಮುಮಡ್ಲವರ,ಪಲ್ಲವಿ ರಾಜಾಪುರ,ಉಷಾ ಕುಲಕಣಿ೯,ರೇಣುಕಾ ರಜಪುತ,
ಗೀತಾ ಕಡಿವಾಳ,ಎಲೀ ಅಂಗನವಾಡಿ ಟೇಚರ್
ಮೂಡಲಗಿ ಯಿಂದ ಆಗಮಿಸಿದ ಶ್ರೀ ಮತಿ ಉಮಾ ಬಳ್ಳೂಳಿ ACDPO
ಕುಮಾರಿ N Aನದಾಪ
ಆರೋಗ್ಯ ಇಲಾಖೆ ಶಿಂದಿಕುರಬೇಟ
ದಿಂದ LHVಶ್ರೀ ಮತಿ SC ಕಲಗುಡಿ
ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.