Belagavi News In Kannada | News Belgaum

ಹುದಲಿ ಪಿಕೆಪಿಎಸ್‌: ಅಧ್ಯಕ್ಷರಾಗಿ ಭೀಮಪ್ಪಾ, ಉಪಾಧ್ಯಕ್ಷರಾಗಿ ನಿರ್ಮಲಾ ಅವಿರೋಧ ಆಯ್ಕೆ

 

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸೂಚನೆ ಮೇರೆಗೆ ಆಪ್ತ ಸಹಾಯಕ ಅರವಿಂದ ಕಾರಜಿ ಅವರ ನೇತೃತ್ವದಲ್ಲಿ ಹುದಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗುರುವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ತಾಲೂಕಿನ ಹುದಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಭೀಮಪ್ಪಾ ಕಲ್ಲಪ್ಪಾ ಮಳಗಲಿ ಮತ್ತು ಉಪಾಧ್ಯಕ್ಷರಾಗಿ ನಿರ್ಮಲಾ ಚನ್ನಬಸಪ್ಪಾ ಮಾಳಗಿ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಈ ಸಂದರ್ಭದಲ್ಲಿ ವೀರುಪಾಕ್ಷಿ ಮಜಗಿ, ರಾಜು ಮೋದಗಿ, ಚನ್ನಬಸು ಪಾವಡಿ, ಸಿದ್ದರಾಮ ಮಾಳಗಿ, ಚಂದ್ರು ಕುಂದರಗಿ , ಅಡಿವೇಪ್ಪಾ ಮಲ್ಲೂರಿ , ಯಲ್ಲಪ್ಪಾ ಹರಿಜನ, ರೀಯಾಜ್‌ ಬಾಳೇಕುಂದರಗಿ, ಸುರೇಶ ಕಮ್ಮಾರ್‌, ಅರ್ಜುನ ಬಡಕಲಿ, ನಿರ್ಮಲಾ ಗಿಡಗೇರಿ, ಅಡಿವೇಪ್ಪಾ ಮಾಳಗಿ, ಚನ್ನಬಸು ಮಾಳಗಿ, ಬಸವನಗೌಡ ಗಿಡಗೇರಿ, ಬಸವರಾಜ ತೈಯಕಾರ್‌ ಹಾಗೂ ಇತರರು ಇದ್ದರು.