Belagavi News In Kannada | News Belgaum

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದ ಆವರಣದಲ್ಲಿ ಅಂತರ್ ವಿಭಾಗೀಯ ಕಬಡ್ಡಿ ಪಂದ್ಯಾವಳಿಗಳನ್ನು ಉದ್ಘಾಟನೆ

ಹುಬ್ಬಳ್ಳಿ : ದಿನಾಂಕ: 22.09.2022 ರಂದು ವಾ.ಕ.ರ.ಸಾ.ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ ಗ್ರಾಮಾಂತರ, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ, ಧಾರವಾಡ ಗ್ರಾಮಾಂತರ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ಚಿಕ್ಕೋಡಿ ಮತ್ತು ಶಿರಸಿ ವಿಭಾಗಗಳಿಗೆ ಪ್ರಾದೇಶಿಕ ತರಬೇತಿ ಕೇಂದ್ರದ ಆವರಣದಲ್ಲಿ ಅಂತರ್ ವಿಭಾಗೀಯ ಕಬಡ್ಡಿ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿತ್ತು. ಸದರಿ ಪಂದ್ಯಾವಳಿಗಳನ್ನು ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಭರತ್.ಎಸ್, ಭಾ.ಆ.ಸೇ.ರವರು ಉದ್ಘಾಟನೆ ಮಾಡಿ, ಮಾತನಾಡುತ್ತಾ ದೈನಂದಿನ ಒತ್ತಡದಿಂದ ಮುಕ್ತರಾಗಲು ಕ್ರೀಡೆಗಳು ಅವಶ್ಯವಿದ್ದು, ಕ್ರೀಡಾಪಟುಗಳು ಅತ್ಯಂತ ಸಂಯಮ ಹಾಗೂ ಜಾಗರೂಕತೆಯಿಂದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸುವಂತೆ ತಿಳಿಸಿದರು. ನಂತರ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಕಛೇರಿಯ ಇಲಾಖಾ ಮುಖ್ಯಸ್ಥರಾದ ರಾಜೇಶ ಹುದ್ದಾರ, ಎಚ್.ಎಂ.ರಮೇಶ್, ಶಶಿಧರ ಕುಂಬಾರ, ಎಂ.ಆರ್.ಮುಂಜಿ, ನಾರಾಯಣಪ್ಪ ಕುರುಬರ, ದಶರಥ ಕೆಳಗೇರಿ, ಎಚ್.ರಾಮನಗೌಡರ್, ವೀರಭದ್ರಪ್ಪ. ಎಂ, ವೇಣುಗೋಪಾಲ ಹಾಗೂ ಇನ್ನಿತರ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು. ವಾ.ಕ.ರ.ಸಾ.ಸಂಸ್ಥೆಯ ವ್ಯಾಪ್ತಿಯ 9 ವಿಭಾಗಗಳು ಮತ್ತು ಪ್ರಾದೇಶಿಕ ಕಾರ್ಯಾಗಾರ ಸೇರಿದಂತೆ ಒಟ್ಟು 10 ತಂಡಗಳು ಭಾಗವಹಿಸಿದ್ದವು.//////