Belagavi News In Kannada | News Belgaum

ವಕೀಲರು ಸಾಮಾಜಿಕ ಜವಾಬ್ದಾರಿಗಳನ್ನು ಹೊಂದಿರಬೇಕು; ಮುಸ್ತಫಾ ಹುಸೇನ್

ಬೆಳಗಾವಿ:ವಕೀಲರಾಗಿ ನೀವು  ಭವಿಷ್ಯದ ದಿನಗಳಲ್ಲಿ ಸಮಾಜದಲ್ಲಿ ಬಹು ಸಾಮಾಜಿಕ ಜವಾಬ್ದಾರಿಗಳನ್ನು ಹೊಂದಿರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ  ಮುಸ್ತಫಾ ಹುಸೇನ್ ಎಸ್.ಎ.  ಹೇಳಿದರು.  ಬೆಳಗಾವಿಯ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ಪ್ರತಿಭಾ ಪುರಸ್ಕಾರ-ಜಿಮಖಾನಾ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವಕೀಲರು ಸಮಾಜಕ್ಕೆ ಸಾಮಾಜಿಕ ಎಂಜಿನಿಯರ್ ಆಗಿ ಕೆಲಸ ಮಾಡಬೇಕು.  ವಕೀಲರು ಕಷ್ಟಪಟ್ಟು ಕೆಲಸ ಮಾಡಬೇಕು, ಈ ದಿನಗಳಲ್ಲಿ ಉದಯೋನ್ಮುಖ ವಕೀಲರಿಗೆ ವಿವಿಧ ಕ್ಷೇತ್ರಗಳಲ್ಲಿ ಅಭ್ಯಾಸ ಮಾಡಲು ಹಲವು ಅವಕಾಶಗಳಿವೆ.  ಇಂದಿನ ದಿನಗಳಲ್ಲಿ ಸೈಬರ್ ಕಾನೂನು, ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಹೆಚ್ಚಿನ ಅವಕಾಶವಿದೆ ಎಂದು ಅವರು ಹೇಳಿದರು. ಒಬ್ಬ ಉದಯೋನ್ಮುಖ ವಕೀಲನು ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಕನಿಷ್ಠ 10 ವರ್ಷಗಳ ಕಾಲ ಶ್ರಮಿಸಬೇಕು. ಈ ನಿಟ್ಟಿನಲ್ಲಿ ನೀವು ಕಠಿಣ ಪರಿಶ್ರಮ ಪಟ್ಟು ಸಾಧನೆ ಮಾಡಬೇಕು ಎಂದು ಹೇಳಿದರು.

ಕರ್ನಾಟಕ ಕಾನೂನು ಸಂಸ್ಥೆಯ ಕಾರ್ಯದರ್ಶಿ ಹಾಗೂ ವಕೀಲ ಎಸ್.ವಿ.ಗಣಾಚಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ,  ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಆರ್‌ಎಲ್‌ ಕಾನೂನು ಕಾಲೇಜಿನ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ರ್ಯಾಂಕ್ ಪಡೆದವರು ಮತ್ತು ದತ್ತಿ ಬಹುಮಾನ ವಿಜೇತರನ್ನು ಅಭಿನಂದಿಸಿ, ಯುವ ವಕೀಲರಿಗೆ ಕೆಲವು ಸಲಹೆಗಳನ್ನು ನೀಡಿದರು, ಅಭ್ಯಾಸದಲ್ಲಿ ತಾಳ್ಮೆಯನ್ನು ಹೊಂದಬೇಕು. ಅಭ್ಯಾಸದಲ್ಲಿ ವೃತ್ತಿಪರ ನೀತಿಗಳನ್ನು ಅನುಸರಿಸಿ ಮತ್ತು ವಾದಗಳಿಗೆ ಸಂಪೂರ್ಣವಾಗಿ ಸಿದ್ಧರಾಗಿರಿ, ಕಠಿಣ ಅಧ್ಯಯನ ಮತ್ತು ಪ್ರಾಮಾಣಿಕರಾಗಿರಿ ಎಂದು ತಿಳಿಸಿದರು.

ಆರ್.ಎಲ್.ಕಾನೂನು ಕಾಲೇಜು ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್ ಪ್ರಾಚಾರ್ಯ ಮಾತನಾಡಿ, ಆರ್.ಎಲ್. ಕಾನೂನು ಕಾಲೇಜನ್ನು 1939 ರಲ್ಲಿ ಸ್ಥಾಪಿಸಲಾಯಿತು, ಕಾಲೇಜು ಇಬ್ಬರು ಮುಖ್ಯ ನ್ಯಾಯಾಧೀಶರು, 30 ಕ್ಕೂ ಹೆಚ್ಚು ಉಚ್ಚ ನ್ಯಾಯಾಲಯದ ನ್ಯಾಯಾಧೀಶರು, ಇಬ್ಬರು ಪ್ರಖ್ಯಾತ ಮುಖ್ಯಮಂತ್ರಿಗಳು, ಪ್ರಸ್ತುತ ಅಟಾರ್ನಿ ಜನರಲ್ ಮತ್ತು ಅಸಂಖ್ಯಾತ ಸಂಖ್ಯೆಯ ವಕೀಲರನ್ನು ಸೃಷ್ಟಿಸಿದೆ ಎಂದು ಹೇಳಿದರು.

ಜಿಮಖಾನಾ ಒಕ್ಕೂಟದ ಅಧ್ಯಕ್ಷ ಡಾ.ಡಿ.ಪ್ರಸನ್ನಕುಮಾರ್, ದೈಹಿಕ ನಿರ್ದೇಶಕ ಅಮಿತ್ ಜಾಧವ ಹಾಗೂ ತಂಡದವರು ಸಮಾರಂಭವನ್ನು ಆಯೋಜಿಸಿದ್ದರು. ಸ್ನೇಹಾ ಕುಲಕರ್ಣಿ ಮತ್ತು ಪ್ರತಿಮಾ ಕಮ್ಮಾರ ಪ್ರಾರ್ಥಿಸಿದರು. ಮೌನೇಶ ವಿ. ಬಡಿಗೇರ ಪರಿಚಯಿಸಿದರು. ಮಾನಸಿ ಜಿಗಜಿನ್ನಿ ಜಿಮಖಾನಾ ವಾರ್ಷಿಕ ವರದಿ ವಾಚಿಸಿದರು. ಕ್ಷಮಾ ಎನ್. ಭಟ್ ಮತ್ತು ಪ್ರಿಯಾಂಕಾ  ನಿರೂಪಿಸಿದರು. ಸಮೀಕ್ಷಾ ಚವ್ಹಾಣ ವಂದಿಸಿದರು///////