Belagavi News In Kannada | News Belgaum

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ನಗರದ ಕನ್ನಡ ಸಾಹಿತ್ಯ ಭವನದಲ್ಲಿಆಶು ಭಾಷಣ ಸ್ಪರ್ಧೆ

ಬೆಳಗಾವಿ  : ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ನಗರದ ಕನ್ನಡ ಸಾಹಿತ್ಯ ಭವನದಲ್ಲಿಆಶು ಭಾಷಣ ಸ್ಪರ್ಧೆ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಿ.ಕಂಪಾ ಸೋಮಶೇಖರ್‍ರಾವ್ ದತ್ತಿ, ದಿ.ದುರದುಂಡೀಶ್ವರ ಸಿದ್ದಯ್ಯ ಮಲ್ಲಾಪುರ ದತ್ತಿ, ದಿ.ಸರಸ್ವತಿ ದೇಸಾಯಿ ದತ್ತಿ, ದಿ.ಮುದುಕಪ್ಪ ಚೌಗುಲೆ ದತ್ತಿ ಇವರ ಹೆಸರಿನಲ್ಲಿ ಜರುಗಿದ ದತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪತ್ರಕರ್ತೆ ಮತ್ತು ದತ್ತಿದಾನಿ ಕೀರ್ತಿಶೇಖರ ಕಾಸರಗೋಡು,

“ಸಾಹಿತ್ಯ ಮತ್ತು ರಂಗ ಚಟುವಟಿಕೆಯಲ್ಲಿ ನಮ್ಮ ತಾಯಿ ತುಂಬಾ ಕ್ರಿಯಾಶೀಲರಾಗಿದ್ದರು. ಹೀಗಾಗಿ ಅವರ ಹೆಸರಿನಲ್ಲಿ ದತ್ತಿ ನಿಧಿ ನೀಡಲಾಗಿದೆ. ಮೊದಲ ದತ್ತಿ ಕಾರ್ಯಕ್ರಮದಲ್ಲಿ ಉದಯೋನ್ಮುಖ ಲೇಖಕಿಯರ ಪುಸ್ತಕ ಹೊರತರಲಾಯಿತು. ಪ್ರಸ್ತುತ ವರ್ಷ ದಸರಾ ಹಬ್ಬದ ಪ್ರಯುಕ್ತ ಆಶು ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. ಯಾವುದೇ ವಿಷಯದ ಕುರಿತು ತತ್-ಕ್ಷಣ ಸಾಹಿತ್ತಿಕವಾಗಿ ಮಾತನಾಡುವ ಕಲೆಯನ್ನು ರೂಢಿಗೊಳಿಸುವುದೇ ಇದರ ಮುಖ್ಯ ಉದ್ದೇಶ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಾಹಿತಿಗಳು ಹೊರಬರುವಂತಾಗಲಿ” ಎಂದರು.
ಲೇಖಕಿಯರ ಸಂಘದ ಪದಾಧಿಕಾರಿಗಳು ದಾನಿಗಳನ್ನು ಪರಿಚಯಿಸಿದರು.ದಸರಾ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಆಶು ಭಾಷಣ ಸ್ಪರ್ಧೆಯಲ್ಲಿ 20 ಸ್ಪರ್ಧಿಗಳು ಭಾಗವಹಿಸಿದ್ದರು ಸ್ಪರ್ಧೆ ಯಲ್ಲಿ .ದಾನಮ್ಮ ಅಂಗಡಿ (ಪ್ರಥಮ,) ಪ್ರತಿಭಾ ಕುಲಕರ್ಣಿ (ದ್ವಿತೀಯ) ಹಾಗೂ ಸುನೀತಾ ಸೊಲ್ಹಾಪುರೆ (ತೃತೀಯ) ಸ್ಥಾನವನ್ನು ಪಡೆದರು. ಡಾ.ಸಿ.ಕೆ.ಜೋರಾಪೂರ ಹಾಗೂ ಡಾ. ಮೈತ್ರಾಯಿಣಿ ಗದಿಗೆಪ್ಪ ಗೌಡರ ನಿರ್ಣಾಯಕ ರಾಗಿ ಆಗಮಿಸಿದ್ದರು.ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜಯಶೀಲಾ ಬ್ಯಾಕೋಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಲೇಖಕಿಯರ ಸಂಘದ ಉಪಾಧ್ಯಕ್ಷೆ ಪೆÇ್ರ.ವಿಜಯಲಕ್ಷ್ಮೀ ಪುಟ್ಟಿ, ಕೋಶಾಧ್ಯಕ್ಷೆ ಪ್ರತಿಭಾ ಕಳ್ಳಿಮಠ, ಕಾರ್ಯದರ್ಶಿ ಡಾ.ಭಾರತಿ ಮಠದ ಮುಂತಾದವರು ಉಪಸ್ಥಿತರಿದ್ದರು.

ಸಾಹಿತಿಗಳಾದ ಜ್ಯೋತಿ ಬಾದಾಮಿ, ಸುಮಾ ಕಿತ್ತೂರ, ಸುನಂದಾ ಹಾಲಭಾವಿ, ಶ್ವೇತಾ ನರಗುಂದ ಜ್ಯೋತಿ ಮಾಳಿ ಶುಭಾ ತೆಲಸಂಗ ವಂದಿಸಿದರು. ಉಪಸ್ಥಿತರಿದ್ದರು.//////