Belagavi News In Kannada | News Belgaum

ಜ್ಞಾನಗಂಗ ಸಾಹಿತ್ಯ & ಸಾಂಸ್ಕೃತಿಕ ರಂಗ’ದ ಪ್ರತಿಷ್ಠಿತ “ಕರುನಾಡು ಸೇವಾ ರತ್ನ” ಪ್ರಶಸ್ತಿ ಪ್ರಕಟ

 

ಬೆಂಗಳೂರು: ಜ್ಞಾನಗಂಗ ಸಾಹಿತ್ಯ & ಸಾಂಸ್ಕೃತಿಕ ರಂಗ (ರಿ), ಬೆಂಗಳೂರು. ಹಾಗೂ ಕರುನಾಡ ಹಣತೆ ಕವಿ ಬಳಗ & ಸಾಂಸ್ಕೃತಿಕ ತಂಡ ಚಿತ್ರದುರ್ಗ- ಇವರ ಸಹಯೋಗದಲ್ಲಿ ನಡೆಯಲಿರುವ “ರಾಜ್ಯಮಟ್ಟದ ಕವಿ ಕಲಾವಿದರ ಸಮ್ಮೇಳನ-2022” ರ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಡಿನ ಸಾಧಕರಿಗೆ “ಕರುನಾಡು ಸೇವಾ ರತ್ನ” ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ, ಸಮಾಜ ಸೇವಕರಾದ ಜಗದೀಶ್ ಚೌಧರಿ, ಲೇಖಕರು ಮತ್ತು ಅಂಕಣಕಾರರಾದ ಮಣ್ಣೆ ಮೋಹನ್, ‘ಬೆಳಗಾವಿ ವರದಿ” ದಿನಪತ್ರಿಕೆ ಸಂಪಾದಕರಾದ ಬಿ ಜಿ ಸತೀಶ್, ದಡಲ್ ಭಾಜಿ’ ದಿನಪತ್ರಿಕೆ ಸಂಪಾದಕರಾದ ನೀಲಕಂಠ ವಾಮನ ದಾತಾರ, ‘ಇಂದುಸಂಜೆ’ ಪತ್ರಿಕೆ ಸಂಪಾದಕರಾದ ಡಾ. ಪದ್ಮ ನಾಗರಾಜ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷರಾದ ಕೃಷ್ಣಪ್ಪ ಬಿ.ಎನ್, ಕರ್ನಾಟಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶ್ ಕುಮಾರ್ ಹೊಸಮನಿ, ‘ವಿಶ್ವವಾಣಿ’ ಪತ್ರಿಕೆ ಪುರವಣಿ ಸಂಪಾದಕರಾದ ಶಶಿಧರ ಹಾಲಾಡಿ, ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ.ಸಮತಾ ದೇಶಮಾನೆ, ‘ಸಂಜೆ ಪ್ರಭ’ ಪತ್ರಿಕೆ ಉಪಸಂಪಾದಕರಾದ ರಜನಿ ವಿ ಪೈ, ‘ಸಂಜೆ ಎಕ್ಸ್ ಪ್ರೆಸ್” ದಿನಪತ್ರಿಕೆ ಸಂಪಾದಕರಾದ ಚಂದ್ರಶೇಖರ್,’ ಲಯಾಭಿನಯ ಕಲ್ಚರಲ್ ಫೌಂಡೇಶನ್ ಸಂಸ್ಥಾಪಕರಾದ ಡಾ. ಜಯಶ್ರೀ ರವಿ ಹೆಗಡೆ,’ಕನ್ನಡಿಗರ ಆಲದ ಮರ’ ಪಾಕ್ಷಿಕ ಪತ್ರಿಕೆ ಸಂಪಾದಕರಾದ ಸುಧೀಂದ್ರ ಅವರನ್ನು ಒಳಗೊಂಡಂತೆ ವಿವಿಧ ಕ್ಷೇತ್ರದ 75 ಸಾಧಕರನ್ನು “ಕರುನಾಡು ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಬೆಂಗಳೂರಿನ ಗಾಂಧಿ ಭವನದಲ್ಲಿ 25 9 2022ರ ಭಾನುವಾರ ದಂದು ಸಮ್ಮೇಳನವನ್ನು ಆಯೋಜಿಸಲಾಗಿದೆ.
ಸಮಾಜಸೇವಕರಾದ ಜಗದೀಶ್ ಚೌಧರಿ ರವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.ಲೇಖಕರು ಮತ್ತು ಅಂಕಣಕಾರರಾದ ಮಣ್ಣೆ ಮೋಹನ್ ರವರು ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಮ್ಮೇಳನದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಮಹಿಳಾ ಗೋಷ್ಠಿ, ವಿದ್ಯಾರ್ಥಿಗೋಷ್ಠಿ, ಪುಸ್ತಕ ಬಿಡುಗಡೆ ಹಾಗೂ ನೂರಕ್ಕೂ ಹೆಚ್ಚು ಕವಿಗಳಿಂದ ಕವಿಗೋಷ್ಠಿ ಆಯೋಜಿಸಲಾಗಿದೆ.

ವರದಿ: ಮಣ್ಣೆ ಮೋಹನ್